Ad imageAd image

2027ರ ಜನಗಣತಿ : ಏ. 1ರಿಂದ ಮನೆಪಟ್ಟಿ ಆರಂಭ : ಕೇಂದ್ರ ಸರ್ಕಾರ ಅಧಿಸೂಚನೆ

Bharath Vaibhav
2027ರ ಜನಗಣತಿ : ಏ. 1ರಿಂದ ಮನೆಪಟ್ಟಿ ಆರಂಭ : ಕೇಂದ್ರ ಸರ್ಕಾರ ಅಧಿಸೂಚನೆ
WhatsApp Group Join Now
Telegram Group Join Now

ನವದೆಹಲಿ: ಏಪ್ರಿಲ್.1, 2026ರಿಂದ 2027ರ ಜನಗಣತಿಯ ಆರಂಭದ ಭಾಗವಾಗಿ ಮನೆಗಳ ಪಟ್ಟಿ ಮಾಡುವಿಕೆ ಶುರುವಾಗಲಿದೆ ಎಂಬುದಾಗಿ ಕೇಂದ್ರ ಸರ್ಕಾರವು ಅಧಿಸೂಚನೆಯನ್ನು ಹೊರಡಿಸಿದೆ.

ಈ ಕುರಿತಂತೆ ಕೇಂದ್ರ ಸರ್ಕಾರವು ಗೆಜೆಟ್ ಅಧಿಸೂಚನೆ ಹೊರಡಿಸಿದ್ದು, 2027 ರ ಭಾರತದ ಜನಗಣತಿಯ ಹಂತ I ಅಂದರೆ ಮನೆಪಟ್ಟಿ ಮತ್ತು ವಸತಿ ಗಣತಿ (HLO) ಗಾಗಿ ಅಧಿಸೂಚನೆಯನ್ನು ಹೊರಡಿಸಲಾಗಿದೆ.

ಮನೆಪಟ್ಟಿ ಕಾರ್ಯಾಚರಣೆಗಳನ್ನು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 1 ಏಪ್ರಿಲ್ 2026 ರಿಂದ 30 ಸೆಪ್ಟೆಂಬರ್ 2026 ರವರೆಗೆ, ಪ್ರತಿ ರಾಜ್ಯ/ಕೇಂದ್ರಾಡಳಿತ ಪ್ರದೇಶವು ನಿರ್ದಿಷ್ಟಪಡಿಸಿದ 30 ದಿನಗಳ ಅವಧಿಯಲ್ಲಿ ನಡೆಸಲಾಗುವುದು ಎಂದಿದೆ.

ಪ್ರತಿ ರಾಜ್ಯ/ಕೇಂದ್ರಾಡಳಿತ ಪ್ರದೇಶವು ಸೂಚಿಸಿದ ವೇಳಾಪಟ್ಟಿಯ ಪ್ರಕಾರ, ಮನೆ-ಮನೆಗೆ ಮನೆಪಟ್ಟಿ ಪ್ರಾರಂಭವಾಗುವ ಮೊದಲು 15 ದಿನಗಳ ಅವಧಿಗೆ ಸ್ವಯಂ-ಗಣತಿಗೆ ಅವಕಾಶ ಲಭ್ಯವಿರುತ್ತದೆ ಎಂದು ಹೇಳಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!