ಚಾಮರಾಜನಗರ:ಯಳಂದೂರು ಪಟ್ಟಣದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಸೇವಾ ಸಮಿತಿ ಹಾಗೂ ದಲಿತ ಸಂಘರ್ಷ ಸಮಿತಿ ವತಿಯಿಂದ 207ನೇ ಭೀಮಾ ಕೊರೇಗಾಂವ್ ವಿಜಯೋತ್ಸವವನ್ನು ಆಚರಿಸಲಾಯಿತು.
ಸಂಘದ ಪದಾಧಿಕಾರಿಗಳು ಹಾಗೂ ದಲಿತ ಮುಖಂಡರುಗಳು ಅಂಬೇಡ್ಕರ್‌ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಿಹಿ ಹಂಚುವುದರ ಮೂಲಕ ವಿಜಯೋತ್ಸವವನ್ನು ಆಚರಿಸಿದರು.
ಈ ಡಿ ಎಸ್ ಎಸ್ ಜಿಲ್ಲಾ ಸಂಚಾಲಕರದ ಸಿ ರಾಜಣ್ಣ ಮಾತನಾಡಿ ಈ ದಿನಾ ನಾವು ಭೀಮ ಕೊರೆಗಾಂವ್ ವಿಜಯೋತ್ಸವ ಆಚರಣೆ ಮಾಡ್ತಿದ್ದೇವೆ ಇತಿಹಾಸದಲ್ಲಿ 18 18 ರಲ್ಲಿ 35 ಸಾವಿರ ಮರಾಠ ಪೇಶ್ವೆಗಳ ಸೈನಿಕರುಗಳನ್ನು 500 ಮಹರ್ ಸೈನಿಕರು ಯುದ್ಧದ ಮುಖಾಂತರ ಸೋಲಿಸಿ ಮಹರ್ ಸೈನಿಕರು ವಿಜಯ ಸಾಧಿಸಿದ ದಿನ ಇದು ದಲಿತ ಜನತೆಗೆ ನಿಜವಾದ ಹೊಸ ವರುಷ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಂಬೇಡ್ಕರ್ ಸೇವಾ ಸಮಿತಿಯ ಅಧ್ಯಕ್ಷರಾದ ರೇವಣ್ಣ, ಅಧ್ಯಕ್ಷರಾದ ಮದ್ದೂರು ಚಕ್ರವರ್ತಿ, ಉಮಾಶಂಕರ್ ಎಚ್ ಎಮ್ ಶಿವರಾಜು, ನಂಜುಂಡಸ್ವಾಮಿ, ಶಶಿಧರ್ ಮಲ್ಲಯ್ಯ, ವರದರಾಜು, ಹಾಗೂ ದಲಿತ ಮುಖಂಡರು ಹಾಜರಿದ್ದರು.
ವರದಿ :ಸ್ವಾಮಿ ಬಳೇಪೇಟೆ