Ad imageAd image

ಕ್ಲಾಸೆನ್ ವೇಗದ ಶತಕದಲ್ಲಿ ಅರಳಿದ ಎಸ್ ಆರ್ ಎಚ್ ಗೆಲುವು

Bharath Vaibhav
ಕ್ಲಾಸೆನ್ ವೇಗದ ಶತಕದಲ್ಲಿ ಅರಳಿದ ಎಸ್ ಆರ್ ಎಚ್ ಗೆಲುವು
WhatsApp Group Join Now
Telegram Group Join Now

ದೆಹಲಿ: ಹೆನ್ರಿಕ್ ಕ್ಲಾಸೆನ್ ಅವರ 37 ಎಸೆತಗಳ ಶತಕದ ನೆರವಿನಿಂದ ಸನ್ ರೈಜರ್ಸ್ ಹೈದರಾಬಾದ್ ತಂಡ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ 68 ನೇ  ಲೀಗ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 110 ರನ್ ಗಳ ಜಯ ದಾಖಲಿಸುವುದರೊಂದಿಗೆ ತನ್ನ ಐಪಿಎಲ್ ಅಭಿಯಾನವನ್ನು ಸಮಾಧಾನಕರವಾಗಿ ಮುಗಿಸಿತು.

ಇಲ್ಲಿನ ಅರುಣ ಜೇಟ್ಲೆ ಮೈದಾನದಲ್ಲಿ ನಡೆದ ಪಂದ್ಯದ ಮೂಲಕ ತಾನಾಡಿದ ಎಲ್ಲ 14 ಪಂದ್ಯಗಳಿಂದ 13 ಅಂಕಗಳನ್ನಷ್ಟೇ ಸಂಪಾದಿಸಿದ ಸನ್ ರೈಜರ್ಸ್ ಹೈದರಾಬಾದ್ ತಂಡ ಪಂದ್ಯಾವಳಿಯಿಂದ ನಿರ್ಗಮಿಸಿತಾದರೂ ಕಳೆದ ಎರಡೂ ಪಂದ್ಯಗಳಲ್ಲಿ ತೋರಿದ ಪ್ರದರ್ಶನ ಆ ತಂಡಕ್ಕೆ ಸಮಾಧಾನ ತಂದುಕೊಟ್ಟಿದ್ದು, ಸುಳ್ಳಲ್ಲ.

ಮೊದಲು ಬ್ಯಾಟ್ ಮಾಡಿದ ಸನ್ ರೈಜರ್ಸ್ ಹೈದರಾಬಾದ್ ತಂಡ ನಿಗದಿತ 20 ಓವರುಗಳಲ್ಲಿ 3 ವಿಕೆಟ್ ಗೆ 278 ರನ್ ಗಳ ವಿಶಾಲ ಮೊತ್ತ ಕಲೆ ಹಾಕಿತು. ಗುಡ್ಡದಂತ ಮೊತ್ತ ಬೆನ್ನಟ್ಟಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 18. 4 ಓವರುಗಳಲ್ಲಿ 168 ರನ್ ಗೆ ಆಲೌಟ್ ಆಯಿತು.

ಸ್ಕೋರ್ ವಿವರ:

ಸನ್ ರೈಜರ್ಸ್ ಹೈದರಾಬಾದ್  20 ಓವರುಗಳಲ್ಲಿ 3 ವಿಕೆಟ್ ಗೆ 278

ಕ್ಲಾಸೆನ್ 105 (39 ಎಸೆತ, 7 ಬೌಂಡರಿ, 9 ಸಿಕ್ಸರ್), ಟ್ರೆವಿರ್ಸ್ ಹೆಡ್ 76 ( 40 ಎಸೆತ, 6 ಬೌಂಡರಿ, 6 ಸಿಕ್ಸರ್)

ಅಭಿಷೇಕ ಶರ್ಮಾ 32 ( 16 ಎಸೆತ, 4 ಬೌಂಡರಿ, 2 ಸಿಕ್ಸರ್) ನರೇನ್ 42 ಕ್ಕೆ 2)

ಕೋಲ್ಕತ್ತಾ ನೈಟ್ ರೈಡರ್ಸ್  18.4 ಓವರುಗಳಲ್ಲಿ 168

ಮನೀಷ್ ಪಾಂಡೆ 37 ( 23 ಎಸೆತ, 2 ಬೌಂಡರಿ, 3 ಸಿಕ್ಸರ್), ಸುನೀಲ್ ನರೇನ್ 31 ( 16 ಎಸೆತ, 3 ಬೌಂಡರಿ, 3 ಸಿಕ್ಸರ್) ಜಯದೇವ ಉನದ್ಕತ್ 24 ಕ್ಕೆ 3, ಇಶಾನ್ ಮಲಿಂಗಾ 31 ಕ್ಕೆ 3, ಹರ್ಷ ದುಬೈ 34 ಕ್ಕೆ 3)

ಪಂದ್ಯ ಶ್ರೇಷ್ಠ: ಹೆನ್ರಿಕ್ ಕ್ಲಾಸೆನ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!