ದುಬೈ: ಈಗ ತಾನೇ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪ್ರಶಸ್ತಿ ಗೆದ್ದ ಭಾರತ ತಂಡ ಪ್ರಶಸ್ತಿ ಗೆದ್ದಿದ್ದಕ್ಕಾಗಿ ಎಷ್ಟು ಹಣದ ಬಹುಮಾನ ಮೊತ್ತವನ್ನು ಪಡೆಯಿತು ಎಂದು ಕ್ರಿಕೆಟ್ ಅಭಿಮಾನಿಗಳಲ್ಲಿ ಪ್ರಶ್ನೆ ಮೂಡುವುದು ಸಹಜ.
ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ ಒಟ್ಟು ಬಹುಮಾನ ಮೊತ್ತ 60 ಕೋಟಿ ಮೊತ್ತದಾಗಿದ್ದು, ಈ ಪೈಕಿ ಪ್ರಶಸ್ತಿ ಗೆದ್ದ ರೋಹಿತ್ ಪಡೆ 21.52 ಕೋಟಿ ನಗದು ಬಹುಮಾನ ಮೊತ್ತವನ್ನು ಜೇಬಿಗಿಳಿಸಿಕೊಂಡಿತು.
ಟೂರ್ನಿಯ ನಿಯಮದ ಪ್ರಕಾರ ಪಂದ್ಯಾವಳಿಯಲ್ಲಿ ಪಾಲ್ಗೊಂಡ ಪ್ರತಿ ತಂಡಗಳು 1 ಕೋಟಿ 9 ಲಕ್ಷ ರೂ.ಗಳನ್ನು ಪಡೆಯಲಿವೆ. ಲೀಗ ಹಾಗೂ ಸೆಮಿಫೈನಲ್ ಹಾಗೂ ಫೈನಲ್ ನಲ್ಲಿ ಅಜೇಯ ದಾಖಲೆ ಹೊಂದಿದ ಭಾರತ ತಂಡದ ಆಟಗಾರರು ಬೋನಸ್ ರೂಪದಲ್ಲಿ 88 ಲಕ್ಷ. 96 ಸಾವಿರ ರೂಗಳನ್ನು ಹೆಚ್ಚುವರಿಯಾಗಿ ಪಡೆದರು.




