ವಿಶಾಖ ಪಟ್ಟಣಂ: ನಿಕೋಲಸ್ ಪೋರನ್ ಹಾಗೂ ಮಿಚೆಲ್ ಮಾರ್ಷ ಅವರ ಬಿರುಸಿನ ಅರ್ಧ ಶತಕಗಳ ನೆರವಿನಿಂದ ಲಕ್ನೋ ಸೂಪರ್ ಗೈಂಟ್ಸ್ ತಂಡ ಐಪಿಎಲ್ ಪಂದ್ಯಾವಳಿಯಲ್ಲಿ ದೆಹಲಿ ಕ್ಯಾಪಿಟಲ್ಸ್ ವಿರುದ್ಧ 220 ರನ್ ಗಳ ಬೃಹತ್ ಮೊತ್ತ ಪೇರಿಸಿದ್ದು, ದೆಹಲಿ ಕ್ಯಾಪಿಟಲ್ಸ್ ಗೆ 221 ರನ್ ಗಳ ಬೃಹತ್ ಮೊತ್ತದ ಗುರಿ ನೀಡಿದೆ.
ಇಲ್ಲಿನ ಡಾ. ವೈ.ಎಸ್. ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಲಕ್ನೋ ಸೂಪರ್ ಗೈಂಟ್ಸ್ ತಂಡದ ಪರವಾಗಿ ಮಿಚೆಲ್ ಮಾರ್ಷ 36 ಎಸೆತಗಳಲ್ಲಿ 72 ( 6 ಬೌಂಡರಿ, 6 ಸಿಕ್ಸರ) ಹಾಗೂ ನಿಕೋಲಸ್ ಪೋರನ್ 30 ಎಸೆತಗಳಲ್ಲಿ 75 (6 ಬೌಂಡರಿ, 7 ಸಿಕ್ಸರ್) ಅತ್ಯಂತ ಬಿರುಸಿನ ಆಟವಾಡಿ ರನ್ ಮಳೆ ಸುರಿಸಿದರು. ನಿಕೋಲಸ್ ಪೋರನ್ ಟ್ರಿಸ್ಟಾನ್ ಸ್ಟುಬಾಸ್ ಅವರ ಒಂದೇ ಓವರಿನಲ್ಲಿ ಸತತ 4 ಸಿಕ್ಸರ್ ಹಾಗೂ 1 ಬೌಂಡರಿ ಸೇರಿ 28 ರನ್ ಚಚ್ಚಿದರು.