ವಿಜಯಪುರ: ನಗರದ ಅಥಣಿ ರಸ್ತೆಯಲ್ಲಿ ಬಸವರಾಜ್ ಗಿರಗಾoವಿ ಅವರ ವತಿಯಿಂದ 21ನೇ ದತ್ತ ಜಯಂತಿ ಜರುಗಿತು.
ವಿಜಯಪುರ ನಗರದ ಅಥಣಿ ರಸ್ತೆಯಲ್ಲಿನ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ದತ್ತ ಮಂಡಳಿ (ರಿ)ಯಿಂದ ಬಸವರಾಜ ಗಿರಗಾಂವಿ ಅವರ ನೇತೃತ್ವದಲ್ಲಿ ನೆರವೇರಿದ 21ನೇ ವರ್ಷದ ದತ್ತ ಜಯಂತಿಯ ಕಾರ್ಯಕ್ರಮದಲ್ಲಿ ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಶ್ರೀಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸಯ್ಯಸ್ವಾಮಿ ಹಿರೇಮಠ ಹಾಗೂ ಆಶ್ರಮದ ಸಾರ್ವಜನಿಕ ಸಂಪರ್ಕ ಅಧಿಕಾರಿಗಳು ಮತ್ತು ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್ ನ ಕಾರ್ಯದರ್ಶಿಗಳಾದ ಅಶೋಕ ನಲ್ಲ ಇವರುಗಳ ಸಮಾಜಪರ ಅನಾಥ ಪರ ಕಾರ್ಯಗಳನ್ನು ಪರಿಗಣಿಸಿ ಪೂಜ್ಯರಾದ ಶ್ರೀ ಶ್ರೀ ಶ್ರೀ ಬಸವರಾಜ ಗಿರಗಾಂವಿ ಅವರಿಂದ ಸನ್ಮಾನಿಸಿ ಗೌರವಿಸಿ ಆಶೀರ್ವದಿಸಲಾಯಿತು. ಈ ಸಮಯದಲ್ಲಿ ವಿಜಯಪುರ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಅವರ ಧರ್ಮ ಪತ್ನಿಯಾದ ಶೈಲಜಾ ಬಸನಗೌಡ ಯತ್ನಾಳ್ ಕಾರುಣ್ಯ ಆಶ್ರಮದ ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿ ಒಮ್ಮೆ ಆಶ್ರಮಕ್ಕೆ ಭೇಟಿ ನೀಡುವುದಾಗಿ. ಭರವಸೆ ನೀಡಿ ಕಾರುಣ್ಯ ಆಶ್ರಮದ ಸೇವೆ ಭಗವಂತನ ಪೂಜೆಗೆ ಸಮಾನ ಎಂದರು.
ಈ ಸಂದರ್ಭದಲ್ಲಿ ಪ್ರಭುಗೌಡ ಬಿರಾದಾರ್ ಮಾಜಿ ತಾಲೂಕಾ ಪಂಚಾಯತ್ ಅಧ್ಯಕ್ಷರು ಇಂಡಿ. ಮಲ್ಲಿಕಾರ್ಜುನ ಬೆನ್ನೂರು. ಸೂರ್ಯ ವಂಶಿ ಹಾಗೂ ಹಲವಾರು ಅನೇಕ ಭಕ್ತರು ಉಪಸ್ಥಿತರಿದ್ದರು.
ವರದಿ ರಾಜು ಮುಂಡೆ