Ad imageAd image

ನೀರಿಗಾಗಿ ಹೋರಾಟ ಮಾಡಿದ ಹೋರಾಟಗಾರರಿಗೆ 21 ರಂದು ಸನ್ಮಾನ

Bharath Vaibhav
ನೀರಿಗಾಗಿ ಹೋರಾಟ ಮಾಡಿದ ಹೋರಾಟಗಾರರಿಗೆ 21 ರಂದು ಸನ್ಮಾನ
WhatsApp Group Join Now
Telegram Group Join Now

ತುಮಕೂರು:  ತುಂಗಾ ಭದ್ರಾ ಕುಡಿಯುವ ನೀರಿನ ಯೋಜನೆ ಜಾರಿಯಾಗಲು ಶ್ರಮಿಸಿದ ಹೋರಾಟಗಾರರನ್ನು ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿ ತಾಲ್ಲೂಕು ಸಮಗ್ರ ನೀರು ಹೋರಾಟ ವೇದಿಕೆಯ ಅಧ್ಯಕ್ಷರಾದ ಶಿವಪ್ರಸಾದ್ ರವರು ನೇತೃತ್ವದಿಂದ ಪಾವಗಡ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷ ಶಿವಪ್ರಸಾದ್ ಡಾ.ನಂಜುಂಡಪ್ಪ ವರದಿಯ ಪ್ರಕಾರ ಅತೀ ಹಿಂದುಳಿದ ಪ್ರದೇಶವಾಗಿದ್ದು, ಸದಾ ಬರಗಾಲಕ್ಕೆ ತುತ್ತಾಗುತಿತ್ತು ಈ ಹಿನ್ನೆಲೆಯಲ್ಲಿ ಕುಡಿಯುವ ನೀರು ಮತ್ತು ಕೆರೆಗಳನ್ನು ತುಂಬಿಸುವ ಯೋಜನೆಗಳ ಜಾರಿಗೆ ಸಂಬಂಧಿಸಿದಂತೆ ಹಲವಾರು ಹೋರಾಟಗಳು ನಡೆದಿವೆ, ಆದ್ದರಿಂದ ಹೋರಾಟಗಾರರನ್ನು ಗೌರವಿಸಿ ಸನ್ಮಾನಿಸಲಾಗುವುದು.

ರೈತ ಸಂಘದ ಅಧ್ಯಕ್ಷ ನರಸಿಂಹ ರೆಡ್ಡಿ ಮಾತನಾಡಿ, ಭದ್ರ ಮೇಲ್ದಂಡೆ ಯೋಜನೆ ಅನುಷ್ಠಾನವಾಗಿದ್ದು ಪ್ರಗತಿಪ ಪದದತ್ತ ಸಾಗಿದೆ ಎತ್ತಿನಹೊಳೆ ಯೋಜನೆ ಮಂಜೂರಾಗಿದೆ ಸರ್ಕಾರವು ಕಾಮಗಾರಿಗಳನ್ನು ಕೈಗೊತ್ತಿಕೊಂಡಿದ್ದು ಈ ಮೂರು ಯೋಜನೆಗಳು ತಾಲೂಕಿಗೆ ಮಂಜೂರಾಗಲು ಅನುಷ್ಠಾನಗೊಳ್ಳಲು ಹಲವಾರು ದಶಕಗಳಿಂದ ಅನೇಕ ಹೋರಾಟಗಳು ನಡೆದಿವೆ, ಎಂದು ತಿಳಿಸಿದ್ದಾರೆ.

ಮುಖ್ಯವಾಗಿ ಈ ಭಾಗದಲ್ಲಿ ಫ್ಲೋರೈಡ್‌ ಸಮಸ್ಯೆಯಿಂದ ಜನ ಮೂಳೆ ಸವೆತ, ಅಂಗವೈಕಲ್ಯ, ಅಪೌಷ್ಠಿಕತೆ ಸೇರಿದಂತೆ ನಾನಾ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಆದ್ದರಿಂದ ಹಲವು ಹೋರಾಟಗಳು ನಡೆದವು ಆಗ ರಾಜ್ಯ ಸರ್ಕಾರ ಈ ಯೋಜನೆಯನ್ನು ಅನುಮೋದನೆ ಹೋರಾಟ ಮಾಡಬೇಕಾಗಿದೆ, ಕುಡಿಯುವ ನೀರು ಬಂದಿದೆ, ಕೆರೆಗಳನ್ನು ತುಂಬಿಸುವ ಯೋಜನೆಗೆ ಹೋರಾಟ ಮಾಡೋಣ ಪ್ರಗತಿ ಪರ ಯುವಕರ ತಂಡವನ್ನೊಂದು ಕಟ್ಟಬೇಕಾಗಿದೆ,

ಹಸಿರು ಸೇನಾ ರೈತ ಸಂಘದ ಜಿಲ್ಲಾಧ್ಯಕ್ಷ ಪೂಜಾರಪ್ಪ ಮಾತನಾಡಿ ನೀರಿಗಾಗಿ ಪಾವಗಡ ತಾಲೂಕಿಗೆ ಮಂಜುರಾಗಲು ಅನುಷ್ಠಾನಗೊಳ್ಳಲು ಹಲವಾರು ಶತಕಗಳಿಂದ ಅನೇಕ ಹೋರಾಟಗಳನ್ನು ನಡೆದಿವೆ. ಪಾವಗಡದಿಂದ ಬೆಂಗಳೂರುವರೆಗೆ ಬೈಕ್ ರಾಲಿ ಪಾದಯಾತ್ರೆ 30 ದಿನಗಳ ಕಾಲ ರೈತ ಸಂಘ ಹಾಗೂ ನೂರಾರು ಸಂಘ ಸಂಸ್ಥೆಗಳು ಪಾಲ್ಗೊಂಡು ಸತ್ಯಾಗ್ರಹ ಹೋರಾಟಗಳನ್ನು ಮಾಡಿದ್ದಕ್ಕೆ ಪಾವಗಡ ತಾಲೂಕು ಕುಡಿಯುವ ನೀರು ಬಂದಿದೆ ಎಂದು ತಿಳಿಸಿದ್ದಾರೆ

ಈ ಸಂದರ್ಭದಲ್ಲಿ ನಂತರ ಮಾತನಾಡಿದ ಸೊಗಡು ವೆಂಕಟೇಶ್ ರವರು ಸುಮಾರು ವರ್ಷಗಳಿಂದ ಹಲವು ಹೋರಾಟಗಳ ಪ್ರತಿಫಲವಾಗಿ ಇಂದು ತುಂಗಾ ಭದ್ರಾ ಕುಡಿಯುವ ನೀರು ನಮ್ಮ ತಾಲೂಕಿಗೆ ತಲುಪಿವೆ, ಆದ್ದರಿಂದ ಪಾವಗಡ ತಾಲ್ಲೂಕು ಸಮಗ್ರ ನೀರು ಹೋರಾಟ ವೇದಿಕೆಯ ವತಿಯಿಂದ ದಿನಾಂಕ 21/04/25 ಸೋಮವಾರ ಪಾವಗಡ ಪಟ್ಟಣದಲ್ಲಿರುವ ಎಸ್ ಎಸ್ ಕೆ ಸಮುದಾಯ ಭವನದಲ್ಲಿ ಹೋರಾಟಗಾರರನ್ನು ಸನ್ಮಾನಿಸಲಾಗುವುದು ಇದು ಪಕ್ಷಾತೀತವಾಗಿ ನಡೆಯುವ ಕಾರ್ಯಕ್ರಮವಾಗಿದೆ, ಬಹಳ ಅದ್ದೂರಿಯಾಗಿ ಹಮ್ಮಿಕೊಂಡಿದ್ದು ಕಲಾ ತಂಡಗಳು ಭಾಗವಹಿಸಲಿವೆ ಈ ಕಾರ್ಯಕ್ರಮಕ್ಕೆ ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ರೈತಸಂಘದ ನರಸಿಂಹರೆಡ್ಡಿ, ಪುರುಷೋತ್ತಮರೆಡ್ಡಿ, ಶಿವಕುಮಾರ್ ಸಾಕೇಲ್, ಗೌರವಾಧ್ಯಕ್ಷ ಚಂದ್ರಶೇಖರಪ್ಪ ಜಿ.ಟಿ.ಗಿರೀಶ್ ದಲಿತ ಸಂಘಟನೆಗಾರರು ಕಡಪಲಕೆರೆ ಹನುಮಂತರಾಯಪ್ಪ. ಮಾದಿಗ ದಂಡೋರ ನಾಗೇಶ್. ಶ್ರೀರಾಮ ಸೇನಾ ರಾಮಾಂಜಿ ಬ್ಯಾಡನೂರು ಶಿವು, ನಾಗೇಶ್, ಹನುಮಂತರಾಯಪ್ಪ, ಕೊತ್ತೂರು ಪ್ರಭಾಕರ್, ತಿಪ್ಪೇಸ್ವಾಮಿ ಇನ್ನು ಮುಂತಾದ ಸಂಘಟನೆಗಳ ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.

ವರದಿ:  ಶಿವಾನಂದ 

WhatsApp Group Join Now
Telegram Group Join Now
Share This Article
error: Content is protected !!