Ad imageAd image

‘ರೋಹಿತ್- ವಿರಾಟ್ 2027 ರ ವಿಶ್ವಕಪ್ ಆಡುವುದು ಅನುಮಾನ’

Bharath Vaibhav
‘ರೋಹಿತ್- ವಿರಾಟ್ 2027 ರ ವಿಶ್ವಕಪ್ ಆಡುವುದು ಅನುಮಾನ’
WhatsApp Group Join Now
Telegram Group Join Now

ಮುಂದಿನ ತಿಂಗಳು ನಡೆಯಲಿರುವ ಇಂಗ್ಲೆಂಡ್ ಸರಣಿಗೂ ಮುನ್ನವೇ ಟೀಮ್​ ಇಂಡಿಯಾದ ಸ್ಟಾರ್​ ಆಟಗಾರರಾದ ರೋಹಿತ್​ ಶರ್ಮಾ ಮತ್ತು ವಿರಾಟ್​ ಕೊಹ್ಲಿ ಟೆಸ್ಟ್​ ಸ್ವರೂಪಕ್ಕೆ ನಿವೃತ್ತಿ ಘೋಷಣೆ ಮಾಡಿ ಫ್ಯಾನ್ಸ್​​ಗಳಿಗೆ ಶಾಕ್​​ ನೀಡಿದ್ದಾರೆ. ಈ ಇಬ್ಬರೂ ಈಗಾಗಲೇ ಟಿ20 ಮಾದರಿಗೆ ವಿದಾಯ ಹೇಳಿದ್ದು ಇನ್ನು ಮುಂದೆ ಏಕದಿನ ಮಾದರಿಯಲ್ಲಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ.

ಈ ಹಿಂದೆ ವಿರಾಟ್ ಕೊಹ್ಲಿ 2027ರ ಏಕದಿನ ವಿಶ್ವಕಪ್‌ನಲ್ಲಿ ಆಡುವ ಬಯಕೆಯನ್ನು ವ್ಯಕ್ತಪಡಿಸಿದ್ದರು. ರೋಹಿತ್ ಶರ್ಮಾ ಕೂಡ ಏಕದಿನ ಕ್ರಿಕೆಟ್‌ಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ ಅಲ್ಲದೆ ಇದರಲ್ಲಿ . ಈ ಹಿನ್ನೆಲೆ ಈ ಇಬ್ಬರು 2027ರ ವಿಶ್ವಕಪ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಫ್ಯಾನ್ಸ್​ಗಳು ನಂಬಿದ್ದಾರೆ. ಆದರೆ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ನೀಡಿರುವ ಹೇಳಿಕೆ ಫ್ಯಾನ್ಸ್​ಗಳಲ್ಲಿ ಆತಂಕ ಮೂಡಿಸಿದೆ.

“ರೋಹಿತ್ ಮತ್ತು ಕೊಹ್ಲಿ ಏಕದಿನ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡುತ್ತಾರೆ ಇದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ 2027ರ ವಿಶ್ವಕಪ್‌ ವಿಷಯಕ್ಕೆ ಬಂದರೆ, ಅಲ್ಲಿಯ ವರೆಗೂ ಈ ಇಬ್ಬರಲ್ಲಿ ಈಗಿರುವಂತೆ ಆಕ್ರಮಣಕಾರಿ ಆಟದ ಜೊತೆಗೆ ಸ್ಥಿರ ಪ್ರದರ್ಶನ ನೀಡುವ ಸಾಮರ್ಥ್ಯ ಇರುತ್ತಾ? ಎಂದು ಆಯ್ಕೆ ಗಮನಿಸುತ್ತದೆ.

ಒಂದು ವೇಳೆ ಈ ಇಬ್ಬರಲ್ಲಿ ಸಾಮರ್ಥ್ಯ ಇದ್ದರೆ 2027 ರ ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಾರೆ. ನಿಜ ಹೇಳಬೇಕೆಂದರೆ… ರೋಹಿತ್ ಮತ್ತು ವಿರಾಟ್ ಕೊಹ್ಲಿ 2027ರ ವಿಶ್ವಕಪ್‌ನಲ್ಲಿ ಆಡಲು ಸಾಧ್ಯವಾಗುವುದಿಲ್ಲ ಎಂದು ನಾನು ಭಾವಿಸುತ್ತೇನೆ.” ಯಾರಿಗೆ ಗೊತ್ತು ಅವರು ಉತ್ತಮ ಪ್ರದರ್ಶನ ನೀಡುತ್ತ ಶತಕಗಳ ಮೇಲೆ ಶತಕಗಳನ್ನು ಬಾರಿಸಿ ಸ್ಥಿರ ಪ್ರದರ್ಶನ ನೀಡಿದರೆ ಆ ದೇವರು ಕೂಡ ಅವರನ್ನು ತಂಡದಿಂದ ತೆಗೆದುಹಾಕಲು ಸಾಧ್ಯವಿಲ್ಲ” ಎಂದು ಗವಾಸ್ಕರ್ ಅಭಿಪ್ರಾಯ ಪಟ್ಟಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!