Ad imageAd image

ಮಿಂಚಿದ ಕೊಹ್ಲಿ,ಪಾಟೀದಾರ: ಮುಂಬೈ ಇಂಡಿಯನ್ಸ್ ಗೆ 222 ರನ್ ಗೆಲುವಿನ ಗುರಿ

Bharath Vaibhav
ಮಿಂಚಿದ ಕೊಹ್ಲಿ,ಪಾಟೀದಾರ: ಮುಂಬೈ ಇಂಡಿಯನ್ಸ್ ಗೆ 222 ರನ್ ಗೆಲುವಿನ ಗುರಿ
WhatsApp Group Join Now
Telegram Group Join Now

ಮುಂಬೈ: ಸತತ ಹದಿನೆಂಟನೇ ಐಪಿಎಲ್ ಪಂದ್ಯಾವಳಿಯಲ್ಲಿ ಆಡುತ್ತಿರುವ ವಿರಾಟ್ ಕೊಹ್ಲಿ ಬಿರುಸಿನ ಅರ್ಧ ಶತಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೃಹತ್ ಮೊತ್ತಕ್ಕೆ ನೆರವಾಯಿತು.

ಇಲ್ಲಿನ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ ಬೆಂಗಳೂರು ತಂಡ ನಿಗದಿತ 20 ಓವರುಗಳಲ್ಲಿ 5 ವಿಕೆಟ್ ಗೆ 221 ರನ್ ಗಳಿಸಿ ಎದುರಾಳಿ ಮುಂಬೈ ಇಂಡಿಯನ್ಸ್ ತಂಡಕ್ಕೆ 222 ರನ್ ಗಳ ಗೆಲುವಿನ ಗುರಿ ನೀಡಿತು.

ವಿರಾಟ್ ಕೊಹ್ಲಿ ಇಂದು ಪಿಲಿಪ್ ಸಾಲ್ಟ್ ರೊಂದಿಗೆ ಇನ್ನಿಂಗ್ಸ್ ಆರಂಭಿಸಿ ಆರಂಭದಿಂದಲೂ ಆಕ್ರಮಣಕಾರಿ ಆಟಕ್ಕೆ ಇಳಿದರು. 42 ಎಸೆತಗಳಲ್ಲಿ 8 ಬೌಂಡರಿ 2 ಸಿಕ್ಸರ್ ನೆರವಿನಿಂದ 67  ರನ್ ಗಳಿಸಿದರು. ತಂಡದ ಮೊದಲ ವಿಕೆಟ್ 4 ರನ್ ಗಳಾಗುವಷ್ಟರಲ್ಲಿುಉರುಳಿತಾದರೂ ಕನ್ನಡದ ಹುಡುಗ ದೇವದತ್ತ ಪೆಡಿಕಲ್ ಹಾಗೂ ಕೊಹ್ಲಿ 2 ನೇ ವಿಕೆಟ್ ಗೆ 91 ರನ್ ಕಲೆ ಹಾಕಿದರು. ದೇವದತ್ತ ಪೆಡಿಕಲ್ ಕೂಡ ಬಿರುಸಿನ ಆಟಕ್ಕೆ ಇಳಿದು 22 ಎಸೆತಗಳಲ್ಲಿ 2 ಬೌಂಡರಿ 3 ಸಿಕ್ಸರ್ ನೆರವಿನಿಂದ 37 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇದಾದ ನಂತರ ಕೊಹ್ಲಿ ಹಾಗೂ ನಾಯಕ ರಜತ್ ಪಟಿದಾರ 48 ರನ್ ಗಳ ಉಪಯುಕ್ತ ಪಾಲುಗಾರಿಕೆ ತಂದರು.    ಏತನ್ಮಧ್ಯೆ ನಾಯಕ ರಜತ್ ಪಟಿದಾರ ಕೂಡ ಬಿರುಸಿನ ಆಟಕ್ಕೆ ಇಳಿದಿದ್ದರಿಂದ ಅವರು ಕೇವಲ 25 ಎಸೆತಗಳಲ್ಲಿ ಅರ್ಧ ಶತಕ ಗಳಿಸಿದರು.  ಕೊಹ್ಲಿ ವಿಕೆಟ್ ಪತನದ ನಂತರ ಆಡಲು ಬಂದ ಜಿತೇಶ ಕೂಡ ಬಿರುಸಿನ ಆಟವಾಡಿ ತಂಡದ  ಬೃಹತ್ ಮೊತ್ತಕ್ಕೆ ಕಾರಣರಾದರು.

 

WhatsApp Group Join Now
Telegram Group Join Now
Share This Article
error: Content is protected !!