Ad imageAd image

ಇಂದಿನಿಂದ ಬಂಡೀಪುರ ಅರಣ್ಯದಲ್ಲಿ ಶೃಂಗಸಭೆ : 23 ದೇಶಗಳು ಭಾಗಿ

Bharath Vaibhav
ಇಂದಿನಿಂದ ಬಂಡೀಪುರ ಅರಣ್ಯದಲ್ಲಿ ಶೃಂಗಸಭೆ : 23 ದೇಶಗಳು ಭಾಗಿ
WhatsApp Group Join Now
Telegram Group Join Now

ಬೆಂಗಳೂರು : ಇಂದಿನಿಂದ 2 ದಿನಗಳ ಕಾಲ ಬಂಡೀಪುರ ಹುಲಿ ಮೀಸಲು ಅರಣ್ಯದಲ್ಲಿ ಶೃಂಗಸಭೆ ನಡೆಯಲಿದ್ದು, ಬಿಗ್ ಕ್ಯಾಟ್ ಶೃಂಗಸಭೆ ಹೆಸರಿನಲ್ಲಿ ಹುಲಿಗಳ ಕುರಿತಾದ ಸೆಮಿನಾರ್ ಆಯೋಜನೆ ಮಾಡಲಾಗಿದೆ. ಬಂಡಿಪುರ ಟೈಗರ್ ರಿಸರ್ವ್ ಫಾರೆಸ್ಟ್ ಸಿಬ್ಬಂದಿಯಿಂದ ಈ ಶೃಂಗಸಭೆ ಆಯೋಜನೆ ಮಾಡಲಾಗಿದೆ.

ಈ ಒಂದು ಸಭೆಯಲ್ಲಿ ಬರೋಬ್ಬರಿ 23 ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ರಾಜ್ಯದಲ್ಲಿಯೇ ಬಿಗ್ ಕ್ಯಾಟ್ ಶೃಂಗಸಭೆ ಹೊಸ ಇತಿಹಾಸ ಸೃಷ್ಟಿಸಲಿದೆ. ಅರ್ಮೆನಿಯ, ಭೂತಾನ್, ಕಾಂಗೋ, ಮೆಕ್ಸಿಕೋ ಕಿನ್ಯಾ ಹಾಗು ರಷ್ಯಾಸೇರಿದಂತೆ 23 ದೇಶಗಳ ಸಂಶೋಧಕರು ಈ ಒಂದು ಶೃಂಗಸಭೆಯಲ್ಲಿ ಭಾಗಿಯಾಗಲಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದ ಶೃಂಗಸಭೆ ಕರ್ನಾಟಕದಲ್ಲಿ ನಡೆಯುತ್ತಿರುವುದು ಮಹತ್ವ ಪಡೆದಿದೆ. ದಕ್ಷಿಣ ಭಾರತದ ವನ್ಯಜೀವಿ ಸಂರಕ್ಷಣೆ ಹಾಗೂ ಅತಿ ಹೆಚ್ಚಾಗಿರುವ ಹುಲಿಗಳ ಬಗ್ಗೆ ಈ ಶೃಂಗಸಭೆಯಲ್ಲಿ ಜಾಗತಿಕ ಗಮನ ಸೆಳೆಯಲಿದೆ. ಫೆಬ್ರವರಿ 9 ಮತ್ತು 10 ರಂದು ಬಂಡಿಪುರದಲ್ಲಿ ಹಾಗೂ ಫೆಬ್ರವರಿ 11 ಮತ್ತು 13 ರಂದು ನಾಗರಹೊಳೆಯಲ್ಲಿ ಈ ಶೃಂಗಸಭೆ ನಡೆಯಲಿದೆ.

ನಾಲ್ಕು ದಿನಗಳ ಶೃಂಗಸಭೆಯಲ್ಲಿ ಹುಲಿಗಳ ಸಂರಕ್ಷಣೆ ಕುರಿತಂತೆ ಚರ್ಚೆ ನಡೆಯಲಿದೆ. ಅದರಲ್ಲೂ ಆಧುನಿಕ ತಂತ್ರಜ್ಞಾನ ಬಳಕೆ, ಅಂತಾರಾಷ್ಟ್ರೀಯ ಸಹಕಾರ ಹಾಗೂ ಉತ್ತಮ ಕಾರ್ಯ ನಿರ್ವಹಣೆ ಕುರಿತು ಸಮಾಲೋಚನೆ ಕೂಡ ನಡೆಯಲಿದೆ.

ಕರ್ನಾಟಕ ಹಾಗೂ ಮಧ್ಯಪ್ರದೇಶ ಸೇರಿದಂತೆ ಇತರೆಡೆ ಹುಲಿ ವಾಸಸ್ಥಾನಗಳಲ್ಲಿ ಅಭಿವೃದ್ಧಿ ಯೋಜನೆಗಳ ನಿಯಂತ್ರಣ, ಅರಣ್ಯದಲ್ಲಿರುವ ಗಿರಿಜನರ ಪುನರ್ವಸತಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ದೇಶ-ವಿದೇಶದ ತಜ್ಞರು ತಮ್ಮ ತಮ್ಮ ಅಭಿಪ್ರಾಯವನ್ನು ಇಲ್ಲಿ ದಾಖಲು ಮಾಡಲಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!