ತುರುವೇಕೆರೆ : ತಾಲೂಕಿನ ಅತ್ತಿಕುಳ್ಳೆಪಾಳ್ಯದಲ್ಲಿ ಶ್ರೀ ಶನೇಶ್ವರ ರಿಲಿಜಿಯಸ್ ಟ್ರಸ್ಟ್ ನೇತೃತ್ವದ ಶ್ರೀ ಶನಿದೇವರ ದೇವಾಲಯದಲ್ಲಿ ನವೆಂಬರ್ 17 ಕಡೆಯ ಕಾರ್ತೀಕ ಸೋಮವಾರದಂದು 24 ನೇ ವರ್ಷದ ಕಾರ್ತೀಕ ದೀಪೋತ್ಸವ ಹಾಗೂ ಧಾರ್ಮಿಕ ಸಭೆಯನ್ನು ಏರ್ಪಡಿಸಲಾಗಿದೆ ಎಂದು ಟ್ರಸ್ಟ್ ನ ಆಡಳಿತ ಮಂಡಳಿ ಅಧ್ಯಕ್ಷ ಟಿ.ಎನ್.ಮಂಜುನಾಥ್ (ಅಮಾನಿಕೆರೆ) ತಿಳಿಸಿದರು.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕುಗ್ರಾಮವಾಗಿದ್ದ ಅತ್ತಿಕುಳ್ಳೆಪಾಳ್ಯ ಇಂದು ಶ್ರೀ ಶನೇಶ್ವರ ಸ್ವಾಮಿಯ ಕೃಪೆಯಿಂದ ಸುಗ್ರಾಮವಾಗಿ, ಧಾರ್ಮಿಕ ಕ್ಷೇತ್ರವಾಗಿ ಪರಿವರ್ತನೆ ಹೊಂದಿದೆ. ಕಳೆದ ಎರಡು ದಶಕದ ಹಿಂದೆ ಅತ್ತಿಕುಳ್ಳೆಪಾಳ್ಯದ ಗ್ರಾಮಸ್ಥರು, ಶ್ರೀ ಶನೇಶ್ವರ ಸ್ವಾಮಿಯ ಭಕ್ತಾಧಿಗಳ ಸಹಕಾರದೊಂದಿಗೆ ಗ್ರಾಮದಲ್ಲಿ ಶ್ರೀ ಶನಿದೇವರ ದೇವಾಲಯವನ್ನು ಸ್ಥಾಪಿಸಲಾಯಿತು. ಅಂದಿನಿAದ ಇಂದಿನವರೆಗೆ ಕಳೆದ 23 ವರ್ಷದಲ್ಲಿ ಗ್ರಾಮ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿ ಹೆಸರುವಾಸಿಯಾಗಿದೆ. ಸ್ವಾಮಿಯು ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಿದ್ದಾರೆ. ಸ್ವಾಮಿಯ ಆರ್ಶೀವಾದದ ದೆಸೆಯಿಂದ ಪ್ರತಿ ವರ್ಷ ಕಾರ್ತೀಕ ಮಾಸದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಕಡೆಯ ಕಾರ್ತೀಕ ಸೋಮವಾರದಂದು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ದೀಪೋತ್ಸವವನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದರು.
ಈ ವರ್ಷ ನವೆಂಬರ್ 15 ರಂದು ಶನಿವಾರ ಸಂಜೆ 5 ಗಂಟೆಗೆ ಅತ್ತಿಕುಳ್ಳೆಪಾಳ್ಯದ ರೈತ ಸಂಘದ ಪ್ರಥಮ ವರ್ಷದ ವಾರ್ಷಿಕೋತ್ಸವ, ಸಂಜೆ 7 ಗಂಟೆಗೆ ಹರಿಕಥಾ ವಿದ್ವಾನ್ ಮುರಳೀದಾಸ್ ಅವರಿಂದ “ಶನಿಪ್ರಭಾವ” ಹರಿಕಥೆ, ನವೆಂಬರ್ 16 ರಂದು ಭಾನುವಾರ ಬೆಳಿಗ್ಗೆ ಸೂರ್ಯಪುತ್ರ ಕನ್ನಡ ಕಲಾ ಮತ್ತು ಕ್ರೀಡಾ ಸಂಘದಿAದ ಕನ್ನಡ ರಾಜ್ಯೋತ್ಸವ, ಸಂಜೆ 4 ಗಂಟೆಗೆ ಮುನಿಯೂರು ಗ್ರಾಪಂ ವ್ಯಾಪ್ತಿಗೆ ಸೇರಿದ ಶಾಲೆಗಳ ಮಕ್ಕಳಿಂದ ಕುಣಿಯೋಣು ಬಾ ಕಾರ್ಯಕ್ರಮ, ಮಯೂರ ಹಂಸ ಫರ್ಪಾಮಿಂಗ್ ಆರ್ಟ್ಸ್ನ ಸುಷ್ಮಾಹರೀಶ್ ಹಾಗೂ ಶಿಷ್ಯವೃಂದದಿAದ ಭರತನಾಣ್ಯ, ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ನವೆಂಬರ್ 17 ರಂದು ಕಡೆಯ ಕಾರ್ತೀಕ ಸೋಮವಾರದಂದು ಬೆಳಿಗ್ಗೆ ಶ್ರೀ ಮಹಾಗಣಪತಿ, ನವಗ್ರಹ, ಕ್ಷೇತ್ರದ ಅಧಿದೇವತೆಗಳಿಗೆ ಫಲಪಂಚಾಮೃತ ಅಭಿಷೇಕ, ಹೂವಿನ ಅಲಂಕಾರ, ಸಂಜೆ 4 ಗಂಟೆಗೆ ಆಹ್ವಾನಿತ ಧಾರ್ಮಿಕ ನಾಯಕರು, ಪೂಜ್ಯ ಸ್ವಾಮೀಜಿಗಳನ್ನು ಬಸವ ಹಾಗೂ ನಗಾರಿ ವಾದ್ಯ, ಮಂಗಳವಾದ್ಯ, ಜಾನಪದ ಕಲಾತಂಡಗಳ ನೃತ್ಯ, ಕಳಶ ಹೊತ್ತ ಹೆಣ್ಣುಮಕ್ಕಳ ಭಕ್ತಿಯ ಸಾಕಾರದೊಂದಿಗೆ ಶೋಭಾಯಾತ್ರೆ ಮೂಲಕ ವೇದಿಕೆ ಕರೆತರಲಾಗುವುದು. ನಂತರ ನಡೆಯುವ ಧಾರ್ಮಿಕ ಸಭೆಯನ್ನು ತಮ್ಮಡಿಹಳ್ಳಿ ವಿರಕ್ತ ಮಠದ ಶ್ರೀ ಡಾ. ಅಭಿನವ ಮಲ್ಲಿಕಾರ್ಜುನ ದೇಶೀಕೇಂದ್ರ ಮಹಾಸ್ವಾಮಿಗಳು, ಶ್ರೀ ಶನೈಶ್ವರ ಪುಣ್ಯಕ್ಷೇತ್ರದ ಶ್ರೀ ಡಾ.ಸಿದ್ದರಾಜು ಸ್ವಾಮಿಗಳು ದಿವ್ಯ ಸಾನಿದ್ಯ ವಹಿಸಿ ಆರ್ಶೀವಚನ ನೀಡಲಿದ್ದಾರೆ.
ಶಾಸಕ ಎಂ.ಟಿ.ಕೃಷ್ಣಪ್ಪ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಶಾಸಕರಾದ ಎಂ.ಡಿ.ಲಕ್ಷಿö್ಮÃನಾರಾಯಣ್, ಮಸಾಲಾ ಜಯರಾಮ್ ಉದ್ಘಾಟಿಸಲಿದ್ದಾರೆ. ಸನಾತನ ಹಿಂದೂ ಧರ್ಮ ಎಂಬ ವಿಷಯದ ಬಗ್ಗೆ ಸೀತಾಲಕ್ಷಿö್ಮÃ ಕೃಷ್ಣಮೂರ್ತಿ ಉಪನ್ಯಾಸ ನೀಡಲಿದ್ದಾರೆ. ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಗುವುದು. ಮಾಜಿ ಶಾಸಕ ಎಸ್.ರುದ್ರಪ್ಪ, ವಿಧಾನಪರಿಷತ್ ಮಾಜಿ ಸದಸ್ಯ ಬೆಮೆಲ್ ಕಾಂತರಾಜು, ಜೆಡಿಎಸ್ ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್, ಎಐಸಿಸಿ ಸದಸ್ಯ ಸುಬ್ರಮಣಿ ಶ್ರೀಕಂಠೇಗೌಡ, ತಾಪಂ ಮಾಜಿ ಅಧ್ಯಕ್ಷ ಎಂ.ಡಿ.ರಮೇಶ್ ಗೌಡ ಸೇರಿದಂತೆ ಹಲವು ಗಣ್ಯರು, ಆಗಮಿಸಲಿದ್ದಾರೆ. ತಾಲೂಕಿನ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸ್ವಾಮಿಯವರ ಕೃಪೆಗೆ ಪಾತ್ರರಾಗಬೇಕೆಂದು ಅಮಾನಿಕೆರೆ ಮಂಜುನಾಥ್ ಕೋರಿದ್ದಾರೆ.
ವರದಿ : ಗಿರೀಶ್ ಕೆ ಭಟ್




