ಕಲಘಟಗಿ: -ತಾಲ್ಲೂಕ ಸರ್ಕಾರಿ ಹಾಗೂ ಶಿಕ್ಷಕರ ನೌಕರ ಸಂಘದ ನಿರ್ದೇಶಕ ಮಂಡಳಿಯ 34 ನಿರ್ದೇಶಕರಲ್ಲಿ ಮೊದಲೇ ವಿವಿಧ ಇಲಾಖೆಯ 25 ನಿರ್ದೇಶಕರು ಅವಿರೋಧ ಆಯ್ಕೆಯಾಗಿದ್ದರು ಇನ್ನುಳಿದ 9 ನಿರ್ದೇಶಕರ ಸ್ಥಾನಕ್ಕೆ ಸೋಮವಾರ ಚುನಾವಣೆ ಅಂಗವಾಗಿ ಮತದಾನ ಬಿರುಸಿನಿಂದ ಜರುಗಿತು.

ಪಟ್ಟಣದ ನೌಕರ ಭವನದಲ್ಲಿ ಸೋಮವಾರ ಬೆಳಿಗ್ಗೆ 9 ರಿಂದ ಸಾಯಂಕಾಲ 4 ಗಂಟೆವರೆಗೆ ಮತದಾನ ನಡೆದು ರಾತ್ರಿ 8 ಘಂಟೆಯವರೆಗೆ ಮತ ಎಣಿಕೆ ನಡೆಯಿತು.ಅವಿರೋಧವಾಗಿ ಆಯ್ಕೆಯಾದ ನಿರ್ದೇಶಕರು:
ರಾಕೇಶ ಆರ್,ದೇವೇಂದ್ರಪ್ಪ ಲಮಾಣಿ,ಬಸವರಾಜ್ ಅಂಗಡಿ ಹಾಗೂ ಸಂತೋಷ್ ಲಮಾಣಿ,ಆರ್. ಎಂ ಬಾರಕೇರ,ಎಸ್.ಎಸ್ ಚನ್ನಪಟ್ಟಣ, ರಾಜು ಲಮಾಣಿ, ಬಿಇಓ ಉಮಾದೇವಿ ಬಸಾಪುರ, ಗೀತಾ ಬೀಳಗಿ, ಎಂ. ಎಚ್ ತಹಸೀಲ್ದಾರ,ಕೃಷ್ಣಾಜಿ ಉದೋಜಿ ಹಾಗೂ ಶಂಭುಲಿಂಗ ಪೂಜಾರ, ಖಜಾನೆ ಇಲಾಖೆ ಕಾಂತೇಶ ಅಗಸಿಬಾಗಿಲ, ಪ್ರಭಾಕರ್ ನಾಗಠಾಣ, ಶೋಭಾ ಗೌರಿ, ಅನಿಲ್ ಕುಮಾರ್ ಕುಂಬಾರ, ಮಹಮ್ಮದ್ ತೋರಗಲ, ಸಂಜೀವ್ ಹೇರಕರ್,ಎಸ್.ಎಮ್ ಅಣ್ಣಿಗೇರಿ, ಪಿಡಿಓ ಮಂಜುನಾಥ್ ಅಂಗಡಿ, ಮಂಜುನಾಥ್ ಮುದ್ಲಿಂಗನವರ, ಪ್ರದೀಪ್ ಒಣಕೇರಿ ಹಾಗೂ ನಾಗೇಂದ್ರ ಹಿರಿಯಕ್ಕನವರ, ಅಶೋಕ್ ಶಿರಹಟ್ಟಿ ಹಾಗೂ ಪ್ರಮೋದ್ ಪಾಟೀಲ ಆಯ್ಕೆಯಾಗಿದ್ದರು.
ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಿರ್ದೇಶಕರು: ಶಿಕ್ಷಕರ ಕ್ಷೇತ್ರದ 4 ನಿರ್ದೇಶಕರ ಚುನಾವಣೆಗೆ 9 ಶಿಕ್ಷಕರು ಸ್ಪರ್ದಿಸಿದ್ದರು ಆರ್. ಎಂ ಹೊಲ್ತಿಕೋಟಿ 355 ಮತ, ಜಗದೀಶ ವೀರಕ್ತಮಠ 261 ಮತ, ಶಿವಾನಂದ ಚಿಕ್ಕನರ್ತಿ 338 ಮತ, ಮಹೇಶ ಧೂಳಿಕೊಪ್ಪ 272 ಮತ ಗೆಲುವು ಸಾಧಿಸಿದರು.
ತೋಟಗಾರಿಕೆ ಇಲಾಖೆಯ ಕೆ.ವಿ ಅಂಗಡಿ 05 ಹಾಗೂ ಎನ್ ಎಚ್.ವೈ ಆಸಂಗಿ, 08 ಮತ ಪಡೆದು ಜಯಗಳಿಸಿದರು.
ಪದವಿ ಮತ್ತು ಪದವಿ ಪೂರ್ವ ಕಾಲೇಜಿನಿಂದ ಜಗದೀಶ್ ಎಂ,14 ಮತ ಪಡೆದು ಗೆಲುವು,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನವೀನ ಗೋಳೆರ 72 ಮತ ಹಾಗೂ ಸರಸ್ವತಿ ಹಿರೇಮಠ 62 ಮತ ಪಡೆದು ಗೆಲುವು ಸಾದಿಸಿದರು.
ಚುನಾವಣಾ ಅಧಿಕಾರಿಗಳಾಗಿ ಎಸ್. ಬಿ ಕಲಭಾವಿ, ಮತ್ತು ಎಸ್.ಎನ್ ಮರೆಯಪ್ಪಗೌಡರ ಕಾರ್ಯ ನಿರ್ವಹಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನವೀನ ಗೋಳೆರ 72 ಮತ ಹಾಗೂ ಸರಸ್ವತಿ ಹಿರೇಮಠ 62 ಮತ ಪಡೆದು ಗೆಲುವು ಸಾದಿಸಿದಕ್ಕೆ ಇಲಾಖೆಯಿಂದ ನೌಕರ ಭವನದ ಎದುರುಗಡೆ ಹುಮಾಲೆ ಹಾಕಿ ಅವರಿಗೆ ಸನ್ಮಾನಿಸಿದರು.
ವರದಿ :ಶಶಿಕುಮಾರ




