ನಿಪ್ಪಾಣಿ : ಕನ್ನಡದ ಮಠ ಶ್ರೀ ಕ್ಷೇತ್ರ ಚಿಂಚಣಿ ಅಲ್ಲಮಪ್ರಭು ಸಿದ್ದ ಸಂಸ್ಥಾನ ಮಠದಲ್ಲಿ ನಡೆಯುತ್ತಿರುವ ದಾಸೋಹ ಜಾತ್ರೆಯ ಎಂಟನೇ ದಿನವಾದ ಸೋಮವಾರ ನಿಪ್ಪಾಣಿ ತಾಲೂಕಿನ ಬೇಡಕಿಹಾಳ ಗ್ರಾಮದ ಸಮಸ್ತ ಭಕ್ತರಿಂದ 25000 ಕರಿಗಡಬು ಪ್ರಸಾದ ದೊಂದಿಗೆ 35000 ನಗದು ದೇನಿಗೆ ನೀಡಿ ಭಕ್ತಿಯ ಸಮರ್ಪಣೆ ಮಾಡಿದರು. ಗ್ರಾಮದ ಸಿದ್ದೇಶ್ವರ ಮಂದಿರದಲ್ಲಿ ಮಧ್ಯಾಹ್ನ 3ಗಂಟೆಗೆ ಗೊನೆ ತೋಟ ಮಹಾವೀರ ನಗರ ಸಂಗಾನೆ ತೋಟ ಸೇರಿದಂತೆ ಗ್ರಾಮದಲ್ಲಿಯ 300ಕ್ಕೂ ಅಧಿಕ ಮುತ್ತೈದೆಯರು ಕರಿಗಡಬು ಬುತ್ತಿ ಹೊತ್ತು 11 ವಾಹನಗಳ ಮುಖಾಂತರ ಶ್ರೀ ಕ್ಷೇತ್ರ ಚಿಂಚಣಿ ಮಟ್ಟಕ್ಕೆ ಪ್ರಯಾಣ ಬೆಳೆಸಿದರು. ಇದಕ್ಕೂ ಮೊದಲು ಶಿವಾನಂದ ಸ್ವಾಮಿಯವರ ಹಸ್ತದಿಂದ ಕರಿಗಡಗು ಬುದ್ಧಿ ಪೂಜೆ ನಡೆಯಿತು.
ಈ ಸಂದರ್ಭದಲ್ಲಿ ಸಮಸ್ತ ಭಕ್ತರ ಪರವಾಗಿ ರಾಜೇಂದ್ರ ಹಣಬರಟ್ಟಿ ಮಾತನಾಡಿ *ಲಿಂಗಾಯತ ಸಮಾಜದ ಎಲ್ಲ ಧಾರ್ಮಿಕ ಕೈಂಕರ್ಯಗಳಲ್ಲಿ ಪೂಜ್ಯರ ಅನುಮತಿಯಂತೆ ಸಮಸ್ತ ಲಿಂಗಾಯಿತ, ಜೈನ ಸಮಾಜ ಸೇರಿ ಗ್ರಾಮಸ್ಥರು ಒಂದಾಗಿ ಪಾಲ್ಗೊಳ್ಳುತ್ತಿರುವುದು ಧರ್ಮ ಜಾಗೃತಿಗೆ ಅಡಿಗಲ್ಲಾಗಿದೆ ಎಂದರು.
ಸಮಸ್ತ ಲಿಂಗಾಯತ ಸಮಾಜದ ಕಾರ್ಯಕರ್ತರು 25000 ಕರಿಗಡಬು ಪ್ರಸಾದಕ್ಕೆ ಅರ್ಪಿಸಲು ಬಾಕ್ಸ್ ಗಳಲ್ಲಿ ಪ್ಯಾಕ್ ಮಾಡಿ ಅತ್ಯಂತ ಶಿಸ್ತು ಸಂಯಮದಿಂದ ಶ್ರಮ ವಹಿಸಿದರು ಭಕ್ತರು ಚಿಂಚಲಿ ಮಠ ತಲುಪುತ್ತಿದ್ದಂತೆ ಮಠದಿಂದ ಶ್ರೀಗಳ ಉಪಸ್ಥಿತಿಯಲ್ಲಿ ವಿವಿಧ ವಾದ್ಯಗಳೊಂದಿಗೆ ಬೇಡಕಿಹಾಳ, ಪಟ್ಟಣಕುಡಿ, ಮುಗಳಿ ಗ್ರಾಮಗಳಿಂದ ಒಟ್ಟು 61,000 ಕರಿಗಡಬು ಪ್ರಸಾದಕ್ಕೆ ಅರ್ಪಿಸಿದರು.
ವರದಿ : ಮಹಾವೀರ ಚಿಂಚಣೆ




