Ad imageAd image

26-27ನೇ ಆಯ-ವ್ಯಯ ಮಂಡನೆಯ ಪೂರ್ವಭಾವಿ ಸಭೆ

Bharath Vaibhav
26-27ನೇ ಆಯ-ವ್ಯಯ ಮಂಡನೆಯ ಪೂರ್ವಭಾವಿ ಸಭೆ
WhatsApp Group Join Now
Telegram Group Join Now

ಮೊಳಕಾಲ್ಮುರು : ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಪಟ್ಟಣ ಪಂಚಾಯಿತಿಯ ಪ್ರಭಾರಿ ಮುಖ್ಯ ಅಧಿಕಾರಿಗಳಾದ ಲಿಂಗರಾಜು ತಿಳಿಸಿದರು.

ಪಟ್ಟಣದಲ್ಲಿ ಶನಿವಾರ ಪಟ್ಟಣ ಪಂಚಾಯತಿ ಆವರಣದಲ್ಲಿ 26 27ನೇ ಸಾಲಿನ ವಾರ್ಷಿಕ ಬಜೆಟ್ ಮಂಡನೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಪಟ್ಟಣದಲ್ಲಿ ಮೂಲಸೌಕರ್ಯಗಳಾದ ಕುಡಿಯುವ ನೀರು, ವಿದ್ಯುತ್ ದೀಪ ಚರಂಡಿ ವ್ಯವಸ್ಥೆ, ವಿವಿಧ ವಾರ್ಡುಗಳಲ್ಲಿ ಇರುವ ಸಮಸ್ಯಗಳ ಬಗ್ಗೆ ಸಾರ್ವಜನಿಕರ ತಮ್ಮ ಅನಿಸಿಕೆಗಳನ್ನು ತಿಳಿಸಿದರು.

ಅತಿ ಮುಖ್ಯವಾದ ಸಮಸ್ಯೆಯೆಂದರೆ ಸಂತೆ ನಡೆಯುವ ಜಾಗವನ್ನು ಬದಲಿಸಬೇಕು ಎಂದು ಮನವಿ ಮಾಡಿದರು, ಅದಕ್ಕೆ ಉತ್ತರಿಸಿದ ಮುಖ್ಯ ಅಧಿಕಾರಿ ನಾನು ಇದರ ಬಗ್ಗೆ ತಹಸಿಲ್ದಾರರ ಜೊತೆ ಚರ್ಚೆ ಮಾಡಿ ಎರಡು ಮೂರು ವಾರಗಳಲ್ಲಿ ಸಂತೆ ಜಾಗವನ್ನು ಬದಲಿಸಲಾಗುವುದು ಎಂದು ಉತ್ತರಿಸಿದರು. ಅದೇ ರೀತಿ ಮೊಳಕಾಲ್ಮುರಿಗೆ 4 ದಿಕ್ಕಿನಲ್ಲಿ ಸ್ವಾಗತ ಕಮಾನುಗಳನ್ನು ಅಳವಡಿಸಬೇಕು ಎಂದು ಚರ್ಚಿಸಿದರು

ಕೆಲ ವಾರ್ಡುಗಳಲ್ಲಿ ಚರಂಡಿಗಳಿಲ್ಲದೆ ಜನ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ, ಸಾಯಿಬಾಬಾ ದೇವಸ್ಥಾನದ ಪಕ್ಕದಲ್ಲಿ ಚರಂಡಿ ವ್ಯವಸ್ಥೆ ನಿಂತುಹೋಗಿದ್ದು ನಿಂತ ನೀರು ಹೊರಗಡೆ ಹೋಗದೆ ಆ ಭಾಗದ ಜನಗಳಿಗೆ ಡೆಂಗೂ ಮಲೇರಿಯಾ ದಂತಹ ಸಾಂಕ್ರಾಮಿಕ ರೋಗಗಳು ಹರಡುವುದು ಎಂದು ಅಲ್ಲಿನ ಜನಪ್ರತಿನಿಧಿಗಳು ತಿಳಿಸಿದರು, ಇದರ ಬಗ್ಗೆ ನಾವು ಸಂಕ್ಷಿಪ್ತವಾಗಿ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

ಅದೇ ರೀತಿ ಖಾಸಗಿ ಬಸ್ ನಿಲ್ದಾಣದಲ್ಲಿ ನೀರಿನ ವ್ಯವಸ್ಥೆ ಇಲ್ಲದೆ ಜನರು ಪರದಾಡುತ್ತಿದ್ದಾರೆ, ಇದರ ಬಗ್ಗೆ ಮತ್ತು ಇಲ್ಲಿನ ಬಸ್ಸುಗಳ ನಿಲಗಡೆ ಜಾಗವು ಸರಿಪಡಿಸಬೇಕು ಬೈಕುಗಳು ಎಲ್ಲೆಂದರಲ್ಲಿ ನಿಲ್ಲಿಸುತ್ತಾರೆ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ದೂರಿದರು.

ಈ ಎಲ್ಲಾ ವ್ಯವಸ್ಥೆಯನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದೂ ತಿಳಿಸಿದರು.

ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕರಾದ ದೇವೇಂದ್ರಪ್ಪ ಗಣಕಯಂತ್ರ ಸಹಾಯಕರಾದ ನೇತ್ರಾವತಿ ಸಿಬ್ಬಂದಿಗಳಾದ ಕಾವೇರಿ, ಕೃಷ್ಣಮೂರ್ತಿ,ಅಕ್ರಂ ಆರೋಗ್ಯ ನಿರೀಕ್ಷಕರಾದ ಶ್ರೀನಿವಾಸ್, ಮುಖಂಡರಾದ ಎಂ ಡಿ ಲತೀಫ್ ಸಾಬ್, ಮೊಹಮ್ಮದ್ ಒಬೆದುಲ್ಲ ,ಭೀಮಣ್ಣ, ಲಕ್ಷ್ಮಣ್ ಇನ್ನು ಹಲವರು ಉಪಸ್ಥಿತರಿದ್ದರು.

ವರದಿ : ಪಿಎಂ ಗಂಗಾಧರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!