ರಾಯಚೂರು: ನಗರದ ಸ್ಟೇಷನ್ ರಸ್ತೆಯಲ್ಲಿ ಅದ್ಧೂರಿಯಾಗಿ 27ನೇ ಚೆನ್ನಯ್ ಶಾಪಿಂಗ್ ಮಾಲ್ ಉದ್ಘಾಟನೆ ನಡೆಯಿತು. ಖ್ಯಾತನಟಿ ನಿಶ್ಚಿಕಾ ನಾಯ್ಡು ಮತ್ತು ಕೀರ್ತಿ ಸುರೇಶ್ ಶಾಪಿಂಗ್ ಮಾಲ್ ಉದ್ಘಾಟನೆ ನೇರವೇರಿಸಿದ್ರು. ಶಾಪಿಂಗ್ ಮಾಲ್ ಉದ್ಘಾಟನೆ ಬಳಿಕ ಶಾಪಿಂಗ್ ಮಾಲ್ ವೀಕ್ಷಣೆ ಮಾಡಿದ ನಟಿಯರು ಚೆನ್ನಯ್ ಶಾಪಿಂಗ್ ಮಾಲ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇನ್ನೂ ರಾಯಚೂರಿನ ಕೇಂದ್ರ ಭಾಗದಲ್ಲಿ ಚೆನ್ನಯ್ ಶಾಪಿಂಗ್ ಮಾಲ್ ಉದ್ಘಾಟನೆಗೊಂಡಿದ್ದು,
ಚೆನ್ನಯ್ ಮಾಲ್ ರಾಯಚೂರು ಜನರಿಗಾಗಿ ಬಂಪರ್ ಆಫರ್ ನೀಡಿದ್ದು, ಚೆನ್ನಯ್ ಶಾಪಿಂಗ್ ಮಾಲ್ ನಲ್ಲಿ ಸಾಂಪ್ರದಾಯಿಕ ವಸ್ತ್ರಗಳು, ಅತ್ಯಾಧುನಿಕ ಫ್ಯಾಷನ್ ಬಟ್ಟೆಗಳು ಸಿಗಲಿದ್ದು, ಮಕ್ಕಳಿಗಾಗಿ ಮತ್ತು ಪೋಷಕರ ಅಭಿರುಚಿಗೆ ತಕ್ಕಂತೆ ಮನಸೆಳೆಯುವ ಬಟ್ಟೆಗಳು ಚೆನ್ನಯ್ ಶಾಪಿಂಗ್ ಮಾಲ್ ನಲ್ಲಿ ಸಿಗಲಿವೆ. ಇನ್ನೂ ನಮ್ಮ ರಾಯಚೂರು ನಮ್ಮ ಸ್ಟೈಲ್ ಘೋಷ ವಾಕ್ಯದಿಂದ ಆರಂಭಗೊಂಡ ಚೆನ್ನಯ್ ಶಾಪಿಂಗ್ ಮಾಲ್ ನಲ್ಲಿ 99ರೂಪಾಯಿ ದರ ಶುರುವಾಗಿ 15,000ರೂ.ವರೆಗೂ ಸಹ ಉತ್ತಮ ಗುಣಮಟ್ಟ ಬಟ್ಟೆಗಳು ಸಿಗಲಿವೆ. ಇದರ ಜೊತೆಗೆ ಅಲಂಕಾರಿಕ ವಸ್ತುಗಳು ಸಿಗಲಿದ್ದು, ಚೆನ್ನಯ್ ಶಾಪಿಂಗ್ ಮಾಲ್ ಕಂಪ್ಲೀಟ್ ಫ್ಯಾಮಿಲಿ ಶಾಪಿಂಗ್ ಮಾಲ್ ಆಗಿದೆ. ಇನ್ನೂ ಚೆನ್ನಯ್ ಶಾಪಿಂಗ್ ಮಾಲ್ ಉದ್ಘಾಟನೆ ಮಾಡಿ ಮಾತನಾಡಿದ ನಟಿ ನಿಶ್ಚಿಕಾ ನಾಯ್ಡು, ನಾನು ರಾಯಚೂರಿಗೆ ಮೊದಲ ಬಾರಿಗೆ ಬಂದಿದ್ದೇನೆ. ರಾಯಚೂರು ನೋಡಿ ನನಗೆ ಖುಷಿ ಆಗುತ್ತಿದೆ.ಅದರಲ್ಲೂ ಚೆನ್ನಯ್ ಶಾಪಿಂಗ್ ಮಾಲ್ ನಲ್ಲಿ ಇಡೀ ಕುಟುಂಬದ ಎಲ್ಲಾ ತರಹದ ಬಟ್ಟೆಗಳು ಸಿಗಲಿವೆ. ಕುಟುಂಬಸ್ಥರು ಒಟ್ಟಾಗಿ ಬಂದು ಶಾಪಿಂಗ್ ಮಾಡಲು ಒಳ್ಳೆಯ ಮಾಲ್ ಅಂದ್ರೆ ಅದು ಚೆನ್ನಯ್ ಶಾಪಿಂಗ್ ಮಾಲ್ ಆಗಿದೆ. ಇದರ ಲಾಭ ತಾವು ಪಡೆದುಕೊಳ್ಳಿವೆಂದು ನಟಿ ನಿಶ್ಚಿತಾ ನಾಯ್ಡು ತಿಳಿಸಿದರು
ವರದಿಗಾರರು: ಗಾರಲ ದಿನ್ನಿ ವೀರನ ಗೌಡ




