——————————–ವಾರ್ಷಿಕ ಸಭೆಯಲ್ಲಿ ಅಧ್ಯಕ್ಷ ಸಂಜಯ ಚೌಗಲೆಯವರಿಂದ ಮಾಹಿತಿ
ನಿಪ್ಪಾಣಿ: ಸುವರ್ಣ ಮಹೋತ್ಸವದತ್ತ ಹೆಜ್ಜೆ ಹಾಕುತ್ತಿರುವ ನಿಪ್ಪಾಣಿ ತಾಲೂಕಿನ ಗಳತಗಾ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಮಿತ ಖರ್ಚು, ಪಾರದರ್ಶಕ ಆಡಳಿತ, ಗ್ರಾಹಕರಿಗೆ ಸಕಾಲಕ್ಕೆ ಸೇವೆ, ಒದಗಿಸುವುದರೊಂದಿಗೆ ನಿರಂತರ ಸಂಸ್ಥೆಯ ಅಭಿವೃದ್ಧಿಗೆ ಆಡಳಿತ ಮಂಡಳಿ ಶ್ರಮಿಸಿದ್ದರಿಂದ ಕಳೆದ ಆರ್ಥಿಕ ವರ್ಷದಲ್ಲಿ 28ಲಕ್ಷ 63ಸಾವಿರ ರೂಪಾಯಿ ಲಾಭ ಬಂದಿದ್ದು ಸಂಘದ ಸದಸ್ಯರಿಗೆ 9ರಷ್ಟು ಲಾಭಾಂಶ ನೀಡಲಾಗುವುದೆಂದು ಸಂಸ್ಥೆಯ ಅಧ್ಯಕ್ಷ ಸಂಜಯ ಚೌಗುಲೆ ತಿಳಿಸಿದರು.
ಅವರು ಸಂಸ್ಥೆಯ 48ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡುತ್ತಿದ್ದರು. ವಾರ್ಷಿಕ ಸಭೆಯ ಪ್ರಾರಂಭದಲ್ಲಿ ಕಳೆದ ಆರ್ಥಿಕ ವರ್ಷದಲ್ಲಿ ನಿಧನರಾದ ಸಂಘದ ಸದಸ್ಯರು ಗಣ್ಯರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ತದನಂತರ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಇದೇ ವೇಳೆ ಸಂಘದ ಅಧ್ಯಕ್ಷ ಸಂಜಯ ಚೌಗುಲೆ ವರದಿ ವಾಚನ ಮಾಡಿ ಸಂಘದ ಸಾಂಪತ್ತಿಗೆ ಸ್ಥಿತಿ ವಿವರಿಸಿದರು.ಸಂಘ 1700 ಸದಸ್ಯರನ್ನು ಹೊಂದಿದ್ದು 1ಕೋಟಿ 25ಲಕ್ಷ ರುಪಾಯಿ ಶೇರ್ ಬಂಡವಾಳ, 1ಕೋಟಿ 50 ಲಕ್ಷ ರೂಪಾಯಿ ನಿಧಿ, 3ಕೋಟಿ 96ಲಕ್ಷ ರುಪಾಯಿ ಠೇವು ಸಂಗ್ರಹಿಸಿದ್ದು 15 ಕೋಟಿ ರೂಪಾಯಿ ದುಡಿಯುವ ಬಂಡವಾಳ ಹೊಂದಿದ್ದು,3 ಕೋಟಿ 81 ಲಕ್ಷ ರೂಪಾಯಿ ಗುಂತಾವಣೆ ಮಾಡಿದ್ದಾರೆ. ವರ್ಷಾಂತ್ಯದಲ್ಲಿ ಸಂಘದ 1010 ಸದಸ್ಯರಿಗೆ 7 ಕೋಟಿ 75 ಲಕ್ಷ ರುಪಾಯಿ ಬೆಳೆ ಸಾಲ ವಿತರಿಸಲಾಗಿದ್ದು, 48ಕೋಟಿ ರೂಪಾಯಿಗಳ ವಾರ್ಷಿಕ ವ್ಯವಹಾರ ನಡೆಸಿದೆ.
ಸಂಘದ ಸದಸ್ಯರಿಗೆ ಒಟ್ಟು 10 ಕೋಟಿ 24 ಲಕ್ಷ ರೂಪಾಯಿ ಒಟ್ಟು ಸಾಲ ವಿತರಿಸಿ ಸಕಾಲಕ್ಕೆ ಮರುಪಾವತಿಸಿಕೊಂಡಿದ್ದರಿಂದ ಸಂಘಕ್ಕೆ 28ಲಕ್ಷ 63ಸಾವಿರ ರುಪಾಯಿ ಲಾಭ ಬಂದಿದ್ದು ಸಂಘದ ಸದಸ್ಯರಿಗೆ ಶೇ 9ರಷ್ಟು ಲಾಭಾಂಶ ನೀಡಲಾಗುವುದು ಎಂದು ತಿಳಿಸಿದರು.
ಸಂಘದ ಮುಖ್ಯ ಕಾರ್ಯನಿರ್ವಾಹಕ ಭರತೇಶ್ವರ ಪಾಟೀಲ ಲಾಭ ಹಾನಿ ಅಂದಾಜು ಪತ್ರಿಕೆ ಹಾಗೂ ಸಬೇ ಯ ಮುಂದಿನ ವಿಷಯಗಳನ್ನು ಮಂಡಿಸಿ ಸದಸ್ಯರಿಂದ ಮಂಜೂರಿ ಪಡೆದರು. ವಾರ್ಷಿಕ ಸಭೆಯಲ್ಲಿ ಉಪಾಧ್ಯಕ್ಷ ಶಿವಾಜಿ ಹೊನಬನ್ನೇ ಸಂಚಾಲಕರಾದ ಉತ್ತಮ ರೂಗೆ, ರಾಜಗೌಡ ಪಾಟೀಲ, ಉದಯ ಚೌಗಲೆ ಅಲ್ತಾಫ್ ಮುಲ್ಲಾ, ವಸಂತ ತಿಕೋಟೆ, ಮಾರುತಿ ವಡ್ಡರ ಶೀತಲ ಬೇಡಕಿಹಾಳೆ, ಕಲ್ಪನಾ ಪಾಟೀಲ, ಜ್ಯೋತಿ ಶೇಟಕೆ, ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು.
ವರದಿ: ಮಹಾವೀರ ಚಿಂಚಣೆ




