Ad imageAd image

16 ವರ್ಷದ ಅಪ್ರಾಪ್ತನೊಂದಿಗೆ 28 ವರ್ಷದ ವಿವಾಹಿತ ಮಹಿಳೆ ಎಸ್ಕೇಪ್

Bharath Vaibhav
16 ವರ್ಷದ ಅಪ್ರಾಪ್ತನೊಂದಿಗೆ 28 ವರ್ಷದ ವಿವಾಹಿತ ಮಹಿಳೆ ಎಸ್ಕೇಪ್
WhatsApp Group Join Now
Telegram Group Join Now

ವಿಜಯಪುರ: 16 ವರ್ಷದ ಅಪ್ರಾಪ್ತನೊಂದಿಗೆ 28 ವರ್ಷದ ವಿವಾಹಿತ ಮಹಿಳೆ ಎಸ್ಕೇಪ್ ಆದ ಘಟನೆ ವರದಿಯಾಗಿದೆ. ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಆಂಟಿಗೆ ಮಲ್ಲಿಕಾರ್ಜುನ ಹಿರೇಮಠ ಎಂಬ ಅಪ್ರಾಪ್ತ ಬಾಲಕನ ಜೊತೆಗೆ ಪ್ರೇಮಾಂಕುರವಾಗಿದ್ದು, ಸದ್ಯ ಇಬ್ಬರು ಕಾಲ್ಕಿತ್ತಿದ್ದಾರೆ.ಇದರಿಂದ ಅಪ್ರಾಪ್ತ ಬಾಲಕನ ಕುಟುಂಬಸ್ಥರಲ್ಲಿ ಆತಂಕ ಮನೆಮಾಡಿದೆ.

ವಿವಾಹಿತ ಮಹಿಳೆ ಮಲ್ಲಮ್ಮ ಶೇಖಣ್ಣಿಗೆ 4 ವರ್ಷದ ಮಗುವಿದ್ದು, ಅಪ್ರಾಪ್ತ ಬಾಲಕನೊಂದಿಗೆ ಓಡಿ ಹೋಗಿದ್ದಾಳೆ. ಈ ಘಟನೆ ಬೆಳಕಿಗೆ ಬಂದಂತೆ ಬಾಲಕನ ತಾಯಿ ಅಕ್ಕಮಹಾದೇವಿ ವಿವಾಹಿತ ಮಹಿಳೆ ನನ್ನ ಮಗನನ್ನು ಅಪರಹಿಸಿಕೊಂಡು ಹೋಗಿದ್ದಾಳೆ ಎಂದು ಆರೋಪಿಸಿದ್ದಾಳೆ.

ಇತ್ತ ಖಾಸಗಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವಾಗ ಇಬ್ಬರ ಮಧ್ಯೆ ಲವ್ ಆಗಿದೆ. ಮಲ್ಲಿಕಾರ್ಜುನನ್ನು ಪುಸಲಾಯಿಸಿಕೊಂಡು ಎಸ್ಕೇಪ್ ಆಗಿದ್ದಾಳೆ ಅಂತ ಬಾಲಕನ ತಾಯಿ ಆರೋಪಿಸಿದ್ದಾರೆ. ಮೇ 13ರಂದು ಪೊಲೀಸ್ ಠಾಣೆಯಲ್ಲಿ ಅಪಹರಣ ಕೇಸ್ ದಾಖಲಾಗಿದೆ. ಈವರೆಗೂ ಪೊಲೀಸರು ಬಾಲಕನನ್ನು ಪತ್ತೆ ಮಾಡಿಲ್ಲ. ಪೊಲೀಸರ ನಡೆಗೆ ಬಾಲಕನ ತಾಯಿ ಅಸಮಾಧಾನ ಹೊರಹಾಕಿದ್ದು, ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!