ಬೆಳಗಾವಿ ಯುವಕನ ಪ್ರೀತಿಸಿ ಮದುವೆಯಾದ ಮಹಿಳೆ ಮೇಲೆ 2ನೇ ಗಂಡನಿಂದ ಠಾಣೆಯಲ್ಲಿ ದೂರು 

Bharath Vaibhav
ಬೆಳಗಾವಿ ಯುವಕನ ಪ್ರೀತಿಸಿ ಮದುವೆಯಾದ ಮಹಿಳೆ ಮೇಲೆ 2ನೇ ಗಂಡನಿಂದ ಠಾಣೆಯಲ್ಲಿ ದೂರು 
WhatsApp Group Join Now
Telegram Group Join Now

ಚಿಕ್ಕಬಳ್ಳಾಪುರ: ಇನ್‌ಸ್ಟಾಗ್ರಾಂನಲ್ಲಿ ಲವ್‌ ಆಗಿ ಓಡಿಹೋಗುವ, ಇರುವ ಗಂಡನ/ಹೆಂಡತಿಯ ಬಿಟ್ಟು ಇನ್ನೊಬ್ಬನ/ಳ ಜೊತೆ ಪರಾರಿಯಾಗುವ ಪ್ರಕರಣಗಳು ಹೆಚ್ಚುತ್ತಿವೆ. ಇದೂ ಕೂಡ ಇನ್‌ಸ್ಟಗ್ರಾಂನಲ್ಲಿ ಹುಟ್ಟಿಕೊಂಡ ಪ್ರೀತಿ ದಾಂಪತ್ಯವನ್ನು ಹಾಳು ಮಾಡಿದ ಕಥೆ.ಮೂವರು ಗಂಡರ ಮುದ್ದಿನ ಹೆಂಡತಿಯ ಪ್ರಕರಣದಲ್ಲಿ ಎರಡನೇ ಗಂಡ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾನೆ.

ಬೆಳಗಾವಿಯಲ್ಲಿ ಯುವತಿ ಇನ್‌ಸ್ಟಾಗ್ರಾಮ್‌ನಲ್ಲಿ ಲವ್ ಮಾಡಿ ಇನ್ನೊಬ್ಬನನ್ನು ಮದುವೆ ಆದ ಪ್ರಕರಣದಲ್ಲಿ ಇದೀಗ ಎರಡನೇ ಗಂಡನೇ ಪೋಲೀಸರಿಗೆ ದೂರು ನೀಡಿದ್ದಾನೆ. ಶಿಡ್ಲಘಟ್ಟದಲ್ಲಿ ದೂರು ದಾಖಲಾಗಿದೆ.

ಯುವತಿ ಪ್ರಿಯಾಂಕ ಸುಳ್ಳು ಆರೋಪ ಮಾಡಿ ನನ್ನ ತೇಜೋವಧೆ ಮಾಡುತ್ತಿದ್ದಾಳೆ. ಆಕೆ ಕಾರು ಬಾಡಿಗೆ ಹೋಗಿದ್ದ ವೇಳೆ ಪರಿಚಯವಾಗಿದ್ದಳು. ಒಂದು ವಾರ ಫೋನ್‌ನಲ್ಲಿ ಮಾತನಾಡಿ ನಂತರ ನನ್ನ ಜೊತೆಯಲ್ಲಿ ಬಂದಳು. 8 ತಿಂಗಳಿನಿಂದ ನನ್ನ ಜೊತೆಯಲ್ಲಿ ಇದ್ದಳು ಎಂದು ಎರಡನೇ ಗಂಡ ದೂರಿದ್ದಾನೆ.

ಬೆಳಗಾವಿಗೆ ಸ್ನೇಹಿತೆಯ ಮದುವೆಯಿದೆ ಎಂದು ಹೇಳಿ ಹೋದಳು. ಸ್ವಂತ ಮಾವ ನನ್ನ ಕೂಡಿ ಹಾಕಿ ಕಿರುಕುಳ ನೀಡುತ್ತಿದ್ದ ಎಂದು ಆರೋಪ ಮಾಡಿದ್ದಾಳೆ‌. ಆ ಆರೋಪ‌ ಸುಳ್ಳು, ನಾನು ಅವರ ಸೋದರ ಮಾವ ಅಲ್ಲ. ನಮಗೂ ಅವರಿಗೂ ಯಾವುದೇ ರೀತಿ ಸಂಬಂಧ ಇಲ್ಲ. ನನ್ನ ಮದುವೆಗೂ ಮುನ್ನ ಆಕೆಯ ಮೊದಲೇ ಮದುವೆ ಆಗಿತ್ತು.

ನನ್ನ ಜೊತೆಯಲ್ಲಿ ಬಂದಾಗ ಅವಳ ಮೊದಲನೇ ಗಂಡ ಮುನಿರಾಜು ಬಂದು ವಾಪಸ್ ಕರೆದುಕೊಂಡು ಹೋಗಿದ್ದರು. ಆಕೆ ಮತ್ತೆ ನಾನೇ ಬೇಕು ಎಂದು ವಾಪಸ್ ಬಂದಳು. ಆರೋಪ ಎಲ್ಲಾ ಸುಳ್ಳು ಎಂದು ಪ್ರಿಯಾಂಕ ವಿರುದ್ಧ ಎರಡನೇ ಗಂಡ ದೂರು ನೀಡಿದ್ದಾನೆ.

ಈಕೆ ಮೊದಲು ಚಿಕ್ಕಬಳ್ಳಾಪುರದ ಮುನಿರಾಜು ಎಂಬವರನ್ನು ಮದುವೆಯಾಗಿದ್ದಳು. ನಂತರ ಶಿಡ್ಲಘಟ್ಟದ ಸುಧಾಕರ್‌ ಜೊತೆಗೆ ಎರಡನೇ ಮದುವೆಯಾಗಿದ್ದಳು. ಈತನ ಜೊತೆಗೆ ಪ್ರೀತಿ ಇನ್‌ಸ್ಟಗ್ರಾಂ ಮೂಲಕ ಹುಟ್ಟಿಕೊಂಡದ್ದು ಎನ್ನಲಾಗಿತ್ತು. ಇದೀಗ ಬೆಳಗಾವಿ ಮೂಲದ ರೋಹಿತ್‌ ಎಂಬಾತನ ಜೊತೆಗೆ ಮೂರನೇ ಮದುವೆಯಾಗಿದೆ ಎನ್ನಲಾಗಿದೆ. ಈ ಪ್ರಕರಣದ ಬೆನ್ನು ಬಿದ್ದಿರುವ ಪೊಲೀಸರಿಗೆ ತಲೆ ಕೆಡುವ ಹಾಗೆ ಆಗುತ್ತಿದೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!