ಗುರುಮಠಕಲ್ : ಗುರುಮಠಕಲ್ ತಾಲೂಕಿನ ಬೋರಬಂಡ ಗ್ರಾಮದಲ್ಲಿ ಶ್ರೀ ಲಕ್ಷ್ಮೀ ತಿಮ್ಮಪ್ಪ ದೇವಾಲಯದಲ್ಲಿ ಈ ವರ್ಷವೂ ಭಕ್ತಿಭಾವದಿಂದ ಸಾಮೂಹಿಕ ವರುಮಹಾಲಕ್ಷ್ಮಿ ಪೂಜಾ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಜರುಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಶ್ರೀ ಲಕ್ಷ್ಮಿ ತಿಮ್ಮಪ್ಪ ದೇವಸ್ಥಾನದ ವ್ಯವಸ್ಥಾಪಕರಾದ ನರೇಂದ್ರ ರಾಥೋಡ್ ತಿಳಿಸಿದರು.
2 ನೇಯ ಸಾಮೂಹಿಕ ವರುಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮವು ಆಗಸ್ಟ್ 15, 2025 ಶುಕ್ರವಾರದಂದು ಜರುಗಲಿದೆ, ಕಳೆದ ಬಾರಿ 75 ದಂಪತಿಗಳು ಭಾಗವಹಿಸಿದ್ದು, ಈ ಬಾರಿ 125 ದಂಪತಿಗಳು ಭಾಗವಹಿಸುವ ಸಾಧ್ಯತೆ ಇದೆ, ಆಸಕ್ತಿ ಉಳ್ಳವರು ಮುಂಗಡವಾಗಿ ನೊಂದಯಿಸಲು 8885011111 ,7021261844 ಸಂಪರ್ಕಿಸಲು ಸೂಚಿಸಲಾಗಿದೆ.
ಬೆಳಿಗ್ಗೆಯಿಂದಲೇ ಸುಪ್ರಭಾತ ಸೇವೆ, ಶ್ರೀ ಲಕ್ಷ್ಮೀ ತಿಮ್ಮಪ್ಪ ದೇವರ ವಿಶೇಷ ಅಲಂಕಾರ ಸೇವೆ, ರಥೋತ್ಸವ ನಡೆಯಲಿದೆ. ಶ್ರೀ ವರುಮಹಾಲಕ್ಷ್ಮಿ ಪೂಜಾ ಪ್ರಾರಂಭವಾಗಿ, ಮಧ್ಯಾಹ್ನ 11.00ಕ್ಕೆ ರಥೋತ್ಸವ ನೆರವೇರಲಿದೆ. ಮಧ್ಯಾಂತರದಲ್ಲಿ ಭಜನೆ, ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಪೂಜೆಯಲ್ಲಿ ಭಾಗವಹಿಸುವ ಸ್ತ್ರೀಯರು ಮತ್ತು ಪುರುಷರು ಸಾಂಪ್ರದಾಯಕ ಉಡುಗೆಯೊಂದಿಗೆ ಪೂಜೆಯಲ್ಲಿ ಪಾಲ್ಗೊಳ್ಳಲು ಮನವಿ ಮಾಡಿದ್ದಾರೆ.
12ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಗಸ್ಟ್ 16, 2025ರಂದು ಭಕ್ತಿಭಾವದಿಂದ ಜರುಗಲಿದೆ. ಬೆಳಿಗ್ಗೆ 12:06ಕ್ಕೆ ಶ್ರೀ ಕೃಷ್ಣ ಜನ್ಮೋತ್ಸವ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಆಗಸ್ಟ್ 17ರಂದು ಸಂಜೆ 9:00ಕ್ಕೆ ಮೊಸರಿನ ಗಡಿಗೆ, ಬಣ್ಣದ ಓಕಳಿ ಹಾಗೂ ರಥೋತ್ಸವ, ಬಂಜರು ಸೇವೆ, ಮಂಗಳಾರತಿ ಕಾರ್ಯಕ್ರಮಗಳ ಮೂಲಕ ಉತ್ಸವಕ್ಕೆ ಮುಕ್ತಾಯ ಗೊಳ್ಳಲಿದೆ.
ಕಾರ್ಯಕ್ರಮದಲ್ಲಿ ಶ್ರೀ ಹನುಮಂತ ದೇವರ ಸನ್ನಿಧಾನದಲ್ಲಿ ಶ್ರೀ ಕೃಷ್ಣ ಪಲ್ಲಕಿ ಉತ್ಸವ ಮತ್ತು ಮೊಸರಿನ ಗಡಿಗೆ ಹೊಡೆಯುವದು ವಿಶೇಷ ಆಕರ್ಷಣೆಯಾಗಲಿವೆ.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ವರುಮಹಾಲಕ್ಷ್ಮಿ ದೇವಿಯ ಅನುಗ್ರಹ ಪಡೆಯಲು ಮತ್ತು ಶ್ರೀ ಕೃಷ್ಣನ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನದ ವ್ಯವಸ್ಥಾಪಕರು ಮತ್ತು ಉದ್ಯಮಿಗಳಾದ ನರೇಂದ್ರ ರಾಥೋಡ್ ಅವರು ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕಾಶೀನಾಥ್ ರಾಥೋಡ್ ಅಖಿಲಭಾರತ ಬಂಜಾರ ಸಮಾಜ ಗುರುಮಠಕಲ್ ತಾಲೂಕಿನ ಅಧ್ಯಕ್ಷ, ಬೋರಬಂಡ ಗ್ರಾಮ ಪಂಚಾಯತಿ ಸದಸ್ಯರಾದ ಶರಣಪ್ಪ, ಮ.ಹಫೀಜ ಉಪಸ್ಥಿತರಿದ್ದರು.
ವರದಿ : ರವಿ ಬುರನೋಳ್




