ಸೇಡಂ : ತಾಲೂಕಿನ, ಸಂಗಾವಿ ಕೆ ಗ್ರಾಮ ಹೋಗುವ ಕಾಗಿನ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಮೇಲಿನ ಕಂಬಗಳು ಪೈಪುಗಳು ಮುರಿದು ಬಿದ್ದಿರುತ್ತವೆ.
ಸುಮಾರು 3-4 ತಿಂಗಳಾದರೂ ಇನ್ನೂವರೆಗೆ ಅಧಿಕಾರಿಗಳು ಗಮನ ಹರಿಸಿಲ್ಲ.
ಸಾಕಷ್ಟು ಜನರು ಈ ಸೇತುವೆ ಮೇಲೆ ಓಡಾಡುತ್ತಾರೆ. ಶಾಲೆ,ಕಾಲೇಜು ಹುಡುಗರು ವಾಹನಗಳು ಓಡಾಡುತ್ತವೆ. ಸ್ವಲ್ಪ ಯಾಮಾರಿದ್ರೆ ಕೆಳಗಡೆ ಬೀಳುವ ಸಂಭವವಿದೆ,ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಕಂಬಗಳು ಅಳವಡಿಸುವಂತೆ ದಲಿತ ಸೇನೆ ಮಳಖೇಡ ವಲಯ ಮುಖಂಡರಾದ ಭಗವಾನ್ ಬೋಚಿನ ಒತ್ತಾಯಿಸಿದ್ದಾರೆ.
ವರದಿ : ವೆಂಕಟಪ್ಪ ಕೆ ಸುಗ್ಗಾಲ್




