ಮುದಗಲ್: -ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ದಾಖಲೆ ಇಲ್ಲದೇ ಸಾಗಿಸುತ್ತಿದ್ದ ರೂಪಾಯಿ 3.50 ಲಕ್ಷ ಹಣವನ್ನು ಜಪ್ತಿ ಮಾಡಿರುವ ಘಟನೆ ಮುದಗಲ್ಲ ಪಟ್ಟಣ ಸಮೀಪದ ಛತ್ತರ್ ಚೆಕ್ ಪೋಸ್ಟ್ ಬಳಿ ನಡೆದಿದೆ.
ದಾಖಲೆ ಇಲ್ಲದೆ ಸಾಗಿಸುತ್ತಿದ್ದ 3.50 ಲಕ್ಷ ಹಣವನ್ನು ಪಟ್ಟಣ ಸಮೀಪದ ಛತ್ತರ್ ಚೆಕ್ ಪೋಸ್ಟ್ ಬಳಿ ಚುನಾವಣೆ ಕರ್ತವ್ಯದಲ್ಲಿ ಇದ್ದ ಅಧಿಕಾರಿಗಳು ಬುಧವಾರ ಮಧ್ಯರಾತ್ರಿ ವಶಪಡಿಸಿಕೊಂಡಿದ್ದಾರೆ.
ಯಾದಗಿರಿಯಿಂದ ಬೆಂಗಳೂರಿಗೆ ಹೊರಟ್ಟಿದ್ದ ಸಂಜನಾ ಟ್ರಾವೆಲ್ಸ್ ಬಸ್ ನಲ್ಲಿ ಬಸ್ ಡೈವರರ್ ಬಸವರಾಜ ಬಳಿ ಇದ್ದ ಹಣವನ್ನು ಚೆಕ್ ಪೋಸ್ಟ್ ನಲ್ಲಿ ಇದ್ದ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಈ ವೇಳೆ ಬಸ್ ನಲ್ಲಿ ರೂಪಾಯಿ 3.50 ಲಕ್ಷ ಪತ್ತೆಯಾಗಿದೆ. ಈ ಹಣದ ಸರಿಯಾದ ದಾಖಲೆಗಳು ಇಲ್ಲದಿದ್ದರಿಂದ ಹಣವನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳದಲ್ಲಿ ಮಸ್ಕಿ ಸಿಪಿಐ ಮಲ್ಲಪ್ಪ ಸೇರಿದಂತೆ ಎಸ್ ಎಸ್ ಟಿ ಸಿಬ್ಬಂದಿಗಳು ಸೇರಿದಂತೆ ಸ್ಥಳೀಯ ಠಾಣೆಯ ಸಿಬ್ಬಂದಿಗಳು ಇದ್ದರು.
ವರದಿ:- ಮಂಜುನಾಥ ಕುಂಬಾರ