Ad imageAd image

3.8 ಅಡಿ ಎತ್ತರದ ವರ ಮತ್ತು 3.6 ಅಡಿ ಎತ್ತರದ ವಧು : ಜಾಲತಾಣದಲ್ಲಿ ಜೋಡಿ ಸಿಕ್ಕಾಪಟ್ಟೆ ವೈರಲ್ 

Bharath Vaibhav
3.8 ಅಡಿ ಎತ್ತರದ ವರ ಮತ್ತು 3.6 ಅಡಿ ಎತ್ತರದ ವಧು : ಜಾಲತಾಣದಲ್ಲಿ ಜೋಡಿ ಸಿಕ್ಕಾಪಟ್ಟೆ ವೈರಲ್ 
WhatsApp Group Join Now
Telegram Group Join Now

ಸಾಮಾಜಿಕ ಮಾಧ್ಯಮದಲ್ಲಿ ಇದೀಗ ಒಂದು ಅಪರೂಪದ ಜೋಡಿಯ ಮದುವೆಯ ಸುದ್ದಿ ಸಖತ್ ವೈರಲ್ ಆಗಿದೆ. ಕಾರಣ ಅವರ ಎತ್ತರ ! 3.8 ಅಡಿ ಎತ್ತರದ ವರ ನಿತಿನ್ ವರ್ಮಾ ಮತ್ತು 3.6 ಅಡಿ ಎತ್ತರದ ವಧು ಆರೂಷಿ ಅವರ ಮದುವೆ ಎಲ್ಲರ ಗಮನ ಸೆಳೆದಿದೆ. ಇಬ್ಬರನ್ನೂ ಒಟ್ಟಿಗೆ ನೋಡಿದ ನೆಟ್ಟಿಗರು ಇದು ನಿಜಕ್ಕೂ ‘ರಬ್ ನೇ ಬನಾ ದಿ ಜೋಡಿ’ ಎಂದು ಕಮೆಂಟ್ ಮಾಡುತ್ತಿದ್ದಾರೆ.

ಪಂಜಾಬ್ ಮೂಲದ ಆರೂಷಿ ಮತ್ತು ಹರಿಯಾಣದ ನಿತಿನ್ ಅವರ ಆರತಕ್ಷತೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಏಪ್ರಿಲ್ 13 ರಂದು ಹರಿಯಾಣದ ಕಂಟೋನ್ಮೆಂಟ್‌ನಲ್ಲಿ ನಡೆದ ಆರತಕ್ಷತೆಯಲ್ಲಿ ಆರೂಷಿ ಮತ್ತು ನಿತಿನ್ ಮನಸಾರೆ ಕುಣಿದಿದ್ದಾರೆ. ‘ತೆರೆ ಸಾಂಗ್ ಯಾರಾ’ ಹಾಡಿಗೆ ಕಪ್ಪು ಕನ್ನಡಕ ಧರಿಸಿ ಅವರು ಹೆಜ್ಜೆ ಹಾಕಿದ ರೀತಿ ಎಲ್ಲರ ಹೃದಯ ಗೆದ್ದಿದೆ.

ಈ ಜೋಡಿ ಏಪ್ರಿಲ್ 6 ರಂದು ಸರಳವಾಗಿ ವಿವಾಹವಾಗಿದ್ದರು. ಕೇವಲ ಎರಡು ವಾರಗಳಲ್ಲಿ ಇವರ ಮದುವೆ ನಿಶ್ಚಯವಾಗಿತ್ತು ಎಂಬುದು ವಿಶೇಷ. ನಿತಿನ್ ಪಂಜಾಬ್‌ನಿಂದ ಆರೂಷಿಯನ್ನು ತಮ್ಮ ಪತ್ನಿಯಾಗಿ ಹರಿಯಾಣಕ್ಕೆ ಕರೆತಂದರು.

ಈ ಜೋಡಿಯನ್ನು ಒಂದುಗೂಡಿಸುವಲ್ಲಿ ನಿತಿನ್ ಅವರ ಭಾವ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರೇ ಮೊದಲು ಆರೂಷಿಯನ್ನು ನಿತಿನ್‌ಗಾಗಿ ಗುರುತಿಸಿದರು. ನಿತಿನ್ ಅವರ ಸಹೋದರಿ ಖುಷ್ಬೂ ಮತ್ತು ಆಕೆಯ ಪತಿ ಗಗನ್ ಅವರು ರೋಪರ್‌ನ ಕಂಪ್ಯೂಟರ್ ಸೆಂಟರ್‌ನಲ್ಲಿ ಆರೂಷಿಯನ್ನು ಭೇಟಿಯಾಗಿದ್ದರು.

ಮೊದಲ ನೋಟದಲ್ಲೇ ಆರೂಷಿ, ನಿತಿನ್‌ಗೆ ಸೂಕ್ತವೆಂದು ಖುಷ್ಬೂಗೆ ಅನಿಸಿತ್ತು. ನಿತಿನ್ 12ನೇ ತರಗತಿ ಪಾಸಾಗಿದ್ದು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಆರೂಷಿ ಬಿ.ಎ ಪದವೀಧರೆಯಾಗಿದ್ದಾರೆ. ತನ್ನ ಕಡಿಮೆ ಎತ್ತರದ ಬಗ್ಗೆ ಆರೂಷಿ ಅವರ ತಾಯಿ ಚಿಂತಿತರಾಗಿದ್ದರು. ಆದರೆ ಈಗ ನಿತಿನ್ ಮತ್ತು ಆರೂಷಿ ಅವರ ಕುಟುಂಬಗಳು ಈ ಮದುವೆಯಿಂದ ಬಹಳ ಸಂತೋಷವಾಗಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!