ಬೆಂಗಳೂರು : 3 ಹಸುಗಳ ಕೆಚ್ಚಲು ಕೊಯ್ದ ಅಮಾನವೀಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲೀಕರಿಗೆ ವಿಪಕ್ಷ ನಾಯಕ ಆರ್.ಅಶೋಕ್ 1 ಲಕ್ಷ ರೂ.ಪರಿಹಾರ ಘೋಷಿಸಿದ್ದಾರೆ.
ಚಾಮರಾಜಪೇಟೆಯ ವಿನಾಯಕ ನಗರದಲ್ಲಿ ರಸ್ತೆಯಲ್ಲಿ ಮಲಗಿದ್ದ ಮೂರು ಹಸುಗಳ ಕೆಚ್ಚಲನ್ನು ದುಷ್ಕರ್ಮಿಗಳು ಕೊಯ್ದಿದ್ದಾರೆ.ಘಟನೆ ಬೆನ್ನಲ್ಲೇ ವಿಪಕ್ಷ ನಾಯಕ ಆರ್.ಅಶೋಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದೊಂದು ಅಮಾನವೀಯ ಕೃತ್ಯ, ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಆಗಬೇಕು.ಇಲ್ಲಿನ ಪಶು ಆಸ್ಪತ್ರೆ ಉಳಿವಿಗಾಗಿ ಈ ಹಿಂದೆ ಹೋರಾಟ ಮಾಡಲಾಗಿತ್ತು. ಆ ಹೋರಾಟದಲ್ಲಿ ಈ ಹಸುಗಳು ಕೂಡ ಭಾಗಿಯಾಗಿದ್ದವು.
ಬ್ರಿಟಿಷರ ಕಾಲದಿಂದಲೂ ಇರುವ ಪಶು ಆಸ್ಪತ್ರೆ ಉಳಿವಿಗಾಗಿ ನಡೆದಿದ್ದ ಬೃಹತ್ ಹೋರಾಟಕ್ಕೆ ಈ ಹಸುಗಳನ್ನು ಬಳಸಿಕೊಂಡಿದ್ದರಿಂದ ಇಂದು ಮೂಕಪ್ರಾಣಿಗಳಾಗಿರುವ ಈ ಹಸುಗಳ ಮೇಲೆ ದುಷ್ಕೃತ್ಯವೆಸಗಲಾಗಿದೆ. ಇದೆಂಥಹ ಮನಸ್ಥಿತಿ. ಹಿಂದುಗಳನ್ನು ಹೆದರಿಸಲೆಂದು ಈ ರೀತಿ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.