Ad imageAd image

ಐಪಿಎಲ್ ಅಂಪೈರ್ ಗಳಿಗೆ ಪ್ರತಿ ಪಂದ್ಯಕ್ಕೆ 3 ಲಕ್ಷ ರೂ. ಸಂಬಳ

Bharath Vaibhav
ಐಪಿಎಲ್ ಅಂಪೈರ್ ಗಳಿಗೆ ಪ್ರತಿ ಪಂದ್ಯಕ್ಕೆ 3 ಲಕ್ಷ ರೂ. ಸಂಬಳ
WhatsApp Group Join Now
Telegram Group Join Now

ರಣಜಿ ಪಂದ್ಯಗಳಿಗೆ ಹೋಲಿಸಿದರೆ ಐಪಿಎಲ್ ಅಂಪೈರುಗಳಿಗೆ ಹೆಚ್ಚಿನ ಸಂಬಳ

ಪಿಎಲ್‌ನಲ್ಲಿ ಅಂಪೈರಿಂಗ್ ಮಾಡುವುದು ಸಾಮಾನ್ಯ ವಿಷಯವಲ್ಲ. ಅಂತಾರಾಷ್ಟ್ರೀಯ ಪಂದ್ಯಗಳಿಗಿಂತಲೂ ಇಲ್ಲಿ ಒತ್ತಡ ಸ್ವಲ್ಪ ಹೆಚ್ಚಾಗಿಯೇ ಇರುತ್ತದೆ. ಅಂಪೈರ್‌ಗಳ ತೀರ್ಪಿನಲ್ಲಿ ಸ್ವಲ್ಪ ವ್ಯತ್ಯಾಸವಾದರೂ ತಂಡಗಳ ಫಲಿತಾಂಶವೇ ತಲೆಕೆಳಗಾಗುತ್ತವೆ. ಈ ಹಿನ್ನೆಲೆ ಐಪಿಎಲ್​ನಲ್ಲಿ ಅಂಪೈರಿಂಗ್​ ಮಾಡುವುದು ಸವಾಲಿನ ಕೆಸಲವೇ ಸರಿ. ಅಂತಹ ಒತ್ತಡದಲ್ಲೂ ಕೆಲಸ ಮಾಡುವ ಅಂಪೈರ್‌ಗಳು ಕೈ ತುಂಬ ಹಣವನ್ನು ಪಡೆಯುತ್ತಾರೆ. ದೇಶಿಯ ಲೀಗ್​ಗಳಿಗೆ ಹೋಲಿಕೆ ಮಾಡಿದರೇ ಐಪಿಎಲ್​ನಲ್ಲೆ ಅಂಪೈರ್​ಗಳು ಅತೀ ಹೆಚ್ಚು ಸಂಬಳ ಪಡೆಯುತ್ತಾರೆ.

ಡೊಮೆಸ್ಟಿಕ್ಲೀಗ್ಅಂಪೈರ್ಸಂಬಳಐಪಿಎಲ್​ಗೆ ಹೋಲಿಸಿದರೇ, ರಣಜಿ, ವಿಜಯ್ ಹಜಾರೆಯಂತಹ ಡೊಮೆಸ್ಟಿಕ್​ ಟೂರ್ನಿಗಳಲ್ಲಿ ಅಂಪೈರ್​ಗಳ ಕಡಿಮೆ ಸಂಬಳ ಪಡೆಯುತ್ತಾರೆ. ವಾಸ್ತವಾಗಿ ದೇಶಿಯ ಕ್ರಿಕೆಟ್​ನಿಂದ ಬಿಸಿಸಿಐಗೆ ಬರುವ ಆದಾಯವೂ ಕಡಿಮೆಯಿರುವ ಕಾರಣ ಇದು ಅಂಪೈರ್​ಗಳ ಸಂಬಳದ ಮೇಲೂ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ, ಒಬ್ಬ ಗ್ರೇಡ್ ಎ ಅಂಪೈರ್ ದಿನಕ್ಕೆ ₹40,000 ಪಡೆದರೇ ಗ್ರೇಡ್ ಬಿ ಅಂಪೈರ್ ₹30,000 ಪಡೆಯುತ್ತಾರೆ. ಒಟ್ಟಾರೆ ನಾಲ್ಕು ದಿನಗಳ ಪಂದ್ಯಕ್ಕೆ ಅಂಪೈರ್​ಗಳು ₹1.2 ಲಕ್ಷ ದಿಂದ ₹1.6 ಲಕ್ಷದ ವರೆಗೆ ಸಂಪಾದನೆ ಮಾಡುತ್ತಾರೆ.

ಐಪಿಎಲ್ಸಂಬಳಆದರೆ, ಐಪಿಎಲ್​ನಲ್ಲಿ ಅಂಪೈರಿಂಗ್​ ಮಾಡಿದರೆ ಹೆಚ್ಚಿನ ಸಂಬಳ ಸಿಗುತ್ತದೆ. ಆನ್​ ಫೀಲ್ಡ್​ ಅಂಪೈರ್​ಗಳು ಪ್ರತಿ ಪಂದ್ಯಕ್ಕೆ ₹3 ಲಕ್ಷ ಪಡೆದರೇ ಮೂರನೇ ಮತ್ತು ನಾಲ್ಕನೇ ಅಂಪೈರ್ ₹2 ಲಕ್ಷ ಪಡೆಯುತ್ತಾರೆ. ಅದರಲ್ಲೂ ಪ್ಲೇ ಆಫ್ ಮತ್ತು ಫೈನಲ್​ಗಳಲ್ಲಿ ಅಂಪೈರಿಂಗ್​ಗೆ​ ಬೋನಸ್​ ಕೂಡ ದೊರೆಯುತ್ತದೆ. ಐಪಿಎಲ್​ ಎಲೈಟ್​ ಅಂಪೈರ್​ಗಳಾಗಿದ್ದರೆ ₹ 8.2 ಲಕ್ಷ ಬೋನಸ್​ ಸಿಗುತ್ತದೆ. ದೇಶೀಯ ಕ್ರಿಕೆಟ್‌ನಲ್ಲಿ ಇಡೀ ವರ್ಷ ಆಡಿದರೂ, ಒಂದೂವರೆ ತಿಂಗಳ ಕಾಲ ನಡೆಯುವ ಐಪಿಎಲ್‌ನಲ್ಲಿ ಅಂಪೈರ್‌ಗಳು ಗಳಿಸುವ ಮೊತ್ತವನ್ನು ಗಳಿಸಲು ಸಾಧ್ಯವಿಲ್ಲ. ಆದರೆ, ಐಪಿಎಲ್​ನಲ್ಲಿ ಕೇವಲ ನಾಲ್ಕು ಗಂಟೆಯ ಪಂದ್ಯದಲ್ಲಿ ಕೈ ತುಂಬ ಹಣ ಪಡೆಯುತ್ತಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!