ಪಾವಗಡ ಪೊಲೀಸರಿಂದ ಪಾವಗಡ ಪೊಲೀಸ್ ಠಾಣೆ ಸರಹದ್ದು ಹಾಗೂ ತುಮಕೂರು, ಚಿಕ್ಕಬಳ್ಳಾಪುರ ಅನಂತಪುರ ಜಿಲ್ಲೆಗಳಲ್ಲಿ ದ್ವಿಚಕ್ರ ವಾಹನ ಕಳ್ಳತನ ಮಾಡಿರುವ ಅಂತರ್ ರಾಜ ಮೂರು ಜನ ಕಳ್ಳರಿಂದ ಸುಮಾರು 42ಲಕ್ಷ ಬಾಳುವ 31 ದ್ವಿಚಕ್ರ ವಾಹನಗಳು ವಶ
ದಿನಾಂಕ 24 /11/2024 ರಂದು ಪಾವಗಡ ಪೊಲೀಸ್ ಠಾಣೆಯ ಪಿಎಸ್ಐ -1,ಶ್ರೀ ವಿಜಯ ಕುಮಾರ್ ರವರು ಮೇಲಾಧಿಕಾರಿಗಳ ಆದೇಶದಂತೆ ಪಾವಗಡ ಪೊಲೀಸ್ ಠಾಣೆ ಮೊನಂ:255/2024 ಕಾಲಂ :303(2) ಬಿ. ಎನ್.ಎಸ್-2023 ರ ಪ್ರಕರಣದಲ್ಲಿ ಕಳುವಾಗಿರುವ ಬೈಕ್ ಮತ್ತು ಆರೋಪಿ ಪತ್ತೆ ಕಾರ್ಯ ಕೈಗೊಂಡ ದಿ:25-11-2024 ರಂದು ಬೆಳಿಗ್ಗೆ 7:00 ಗಂಟೆಯಲ್ಲಿ ಸಿಬ್ಬಂದಿಯ ಜೊತೆಯಲ್ಲಿ ರೌಂಡ್ಸ್ ನಲ್ಲಿ ಇರುವಾಗ ರಾಜವಂತಿ ಹೊರವಲಯ ರಿಲಕ್ಸ್ ಬಾರ್ ಸಮೀಪ ಕಳುವಾಗಿದ್ದು ಎ.ಪಿ-02-ಸಿ. ಜಿ -5734 ಬಜಾಜ್ ಪಲ್ಸರ್ ಬೈಕ್ ಸಮೇತ ಆರೋಪಿ -1 ಹರೀಶ್ @ ಕಪ್ಪಲ್ಲ ಬಿನ್ ನರಸಪ್ಪ. 23 ವರ್ಷ. ನಾಯಕ ಜನಾಂಗ. ಕಾಂಕ್ರೀಟ್ ಹಾಕುವ ಕೆಲಸ. ಮೂವತ್ತಾರು ಗ್ರಾಮ. ಆಂಧ್ರ ಪ್ರದೇಶ್ ದ ಪೆನುಗೊಂಡ ತಾಲ್ಲೂಕು ಸತ್ಯಸಾಯಿ ಜಿಲ್ಲಾ ಆಂಧ್ರ ಪ್ರದೇಶ ರಾಜ್ಯ ಇವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಿದಾಗ ಆರೋಪಿ -02. ಮನೋಹರ್ @ ಕಾವಾ ಲಿ ಬಿನ್ ವೆಂಕಟೇಶಲು. 23 ವರ್ಷ. ಬೋವಿ ಜನಾಂಗ. ಟೀ ಷಪ್ ಕೀಪ್ಪರ್. ಮಾಯಕಲ ಪಲ್ಲಿ ಪೆನುಗೊಂಡ ತಾಲ್ಲೂಕು ಸತ್ಯಸಾಯಿ ಜಿಲ್ಲಾ ಆಂಧ್ರಪ್ರದೇಶ ರಾಜ್ಯ ಮತ್ತು ಆರೋಪಿ -3. ಸಾಯಿ ಪವನ್ @ ಸಾಯಿ ಬಿನ್ ವೆಂಕಟಸ್ವಾಮಿ. 23 ವರುಷ ಕಮ್ಮಾರ ಜನಾಂಗ.ವ್ಯವಸಾಯ. ಜಾನಕಂಪಲ್ಲಿ. ಸತ್ಯ ಸಾಯಿ ಜಿಲ್ಲಾ ಆಂಧ್ರ ಪ್ರದೇಶ್ ರಾಜ್ಯ ಇರುವ ಜೊತೆ ಸೇರಿ ತುಮಕೂರು ಜಿಲ್ಲೆ ಚಿಕ್ಕಬಳ್ಳಾಪುರ ಜಿಲ್ಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಅನಂತಪುರಂ ಜಿಲ್ಲೆಯ ವಿವಿಧ ಕಡೆಗಳಲ್ಲಿ ದ್ವಿಚಕ್ರ ಬೈಕ್ ಗಳನ್ನು ಕಳ್ಳತನ ಮಾಡಿರುವ ಬಗ್ಗೆ ವಿಚಾರಣೆ ಸಮಯದಲ್ಲಿ ನುಡಿದಿದು ಆರೋಪಿತರನ್ನು ಪತ್ತೆ ಮಾಡಿ ಆರೋಪಿತರಿಂದ 06 ರಾಯಲ್ ಎನ್ ಫೀಲ್ಡ್ ಬುಲೆಟ್ ಗಳು. 07 ಬಜಾಜ್ ಪಲ್ಸರ್.02 ಅಪ್ಪಾಜಿ. 02 ಆರ್. ಎಕ್ಸ್ 100. 02 ಕೆ. ಟಿ. ಎಂ ಡೂಯಕ್. 07 ಹೀರೋ ಸ್ಲoಡರ್ 03 ಫ್ಯಾಷನ್ ಪ್ರೊ 02 ಹೋಂಡ ಶೈನ್ ಒಟ್ಟು 31 ದ್ವಿಚಕ್ರ ವಾಹನಗಳನ್ನು ಅವಮಾನತ್ತು ಪಡೆಸಿಕೊಂಡಿರುತ್ತದೆ
ಸದರಿ ಪ್ರಕರಣದ ಆರೋಪಿತರನ್ನು ದಸ್ತಗಿರಿ ಮಾಡಿ ಘನ ನ್ಯಾಯಾಲದ ಮುಂದೆ ಹಾಜರ ಪಡೆ ಸಿರುತ್ತೆ ಘನ ನ್ಯಾಯಾಲಯವು ಆರೋಪಿತರಿಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತದೆ. ತನಿಖೆ ಮುಂದುವರದಿದೆ
ಆರೋಪಿತರನ್ನು ಮತ್ತು ಮಾಲನ್ನು ವಶಪಡಿಸಿಕೊಳ್ಳ ವಲ್ಲಿ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಅಶೋಕ್ ಐ.ಪಿ.ಎಸ್ ಮತ್ತು ಶ್ರೀ ಮರಿಯಪ್ಪ. ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1. ಶ್ರೀ ಅಬ್ದುಲ್ ಖಾದರ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರು -2 ಮತ್ತು ಶ್ರೀರಾಮಚಂದ್ರಪ್ಪ ಕೆಬಿ ಡಿ ವೈ ಎಸ್ ಪಿ ಮಧುಗಿರಿ ಇವರಗಳ ಮಾರ್ಗದರ್ಶನದಲ್ಲಿ ಶ್ರೀ ಸುರೇಶ್ ಎಂ.ಆರ್ ಪೊಲೀಸ್ ಇನ್ಸ್ಪೆಕ್ಟರ್ ರವರ ನೇತೃತ್ವದಲ್ಲಿ ಶ್ರೀ ವಿಜಯಕುಮಾರ್ ಪಿಎಸ್ಐ -1 ಶ್ರೀ ಗುರುನಾಥ್ ಪಿಎಸ್ಐ. 2.ರಾಮಚಂದ್ರಪ್ಪ ಪಿಎಸ್ಐ -3 ಹಾಗೂ ಸಿಬ್ಬಂದಿಗಳಾದ ಎ. ಎಸ್. ಐ ಶ್ರೀ ತಿಮ್ಮರಾಜ್. ಹೆಚ್. ಸಿ :260 ಶ್ರೀ ಕೇಶವರಾಜ್. ಹೆಚ್ ಸಿ 380 ಶ್ರೀ ರಾಮಕೃಷ್ಣ ಈ. ಹೆಚ್ ಸಿ 151 ಶ್ರೀ ನಾಗೇಶ್. ಪಿಸಿ:124 ಶ್ರೀ ನವೀನ ಹೆಚ್ಆರ್. ಪಿಸಿ 100 ಶ್ರೀ ದೀಪಕ್. ಪಿಸಿ 252 ತಳವಾರ್ ರಾಜು. ಪಿಸಿ 501 ಶ್ರೀ ಜೀವನ್. ಪಿ ಸಿ 645. ಪ್ರವೀಣ್. ಪಿ ಸಿ.674 ಮಾಳ ಪ್ಪ ಎ.ಪಿ.ಸಿ.69 ಶ್ರೀ ನಟೇಶ್ ಹಾಗೂ ವೈ ಎನ್ ಹೊಸಕೋಟೆ ಪೊಲೀಸ್ ಠಾಣೆ ಸಿಬ್ಬಂದಿಯಾದ ಪಿಸಿ 713 ಶ್ರೀ ಶ್ರೀಕಾಂತ್ ನಾಯಕ್. ಪಿಸಿ 659. ಶ್ರೀ ಸಂತೋಷ್ ಕುಮಾರ್ ರವರು ಯಶಸ್ವಿಯಾಗಿರುತ್ತಾರೆ
ವರದಿ: ಶಿವಾನಂದ