ರಾಯಚೂರು: ಅತಿಯಾಗಿ ಅಶ್ಲೀಲ ವಿಡಿಯೋ ನೋಡುತ್ತಿದ್ದ ಆರೋಪದ ಮೇಲೆ ರಾಯಚೂರು ಜಿಲ್ಲೆಯ ಪ್ರತಿಷ್ಠಿತ ಕುಟುಂಬದ ಯುವಕನ ವಿರುದ್ಧ ಐಟಿ ಕಾಯ್ದೆಯ ಮಕ್ಕಳ ಲೈಂಗಿಕ ಶೋಷಣೆ ಸೆಕ್ಷನ್ ನಡಿ 9 ಪ್ರಕರಣ ಸೇರಿ ಒಟ್ಟು 32 ಕೇಸು ದಾಖಲಾಗಿವೆ.ವೆಬ್ಸೈಟ್ ನಲ್ಲಿ ಸದ ಅಶ್ಲೀಲ ವಿಡಿಯೋ ವೀಕ್ಷಿಸುತ್ತಿದ್ದ ಯುವಕನ ಕೃತ್ಯವನ್ನು ಕಂಡು ಪೊಲೀಸರೂ ದಂಗಾಗಿದ್ದಾರೆ.
ಮಕ್ಕಳನ್ನು ಲೈಂಗಿಕವಾಗಿ ಶೋಷಣೆ ಮಾಡುವ ಚಿತ್ರಗಳು, ವಿಡಿಯೋಗಳು ಅಪ್ಲೋಡ್, ಹಂಚಿಕೆ ಹಾಗೂ ವೀಕ್ಷಣೆ ಐಟಿ ಕಾಯ್ದೆಯ ಸೆಕ್ಷನ್ ಪ್ರಕಾರ ಕಾನೂನುಬಾಹಿರವಾಗಿದೆ. ಸೈಬರ್ ಅಧಿಕಾರಿಗಳು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಪ್ರತಿಷ್ಠಿತ ಕುಟುಂಬದ ಯುವಕ ಈ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ.
ವೆಬ್ಸೈಟ್ ನಲ್ಲಿ ಲಿಂಕ್ ಆಗಿರುವ ಇ-ಮೇಲ್ ಮತ್ತು ಮೊಬೈಲ್ ನಂಬರ್ ಪರಿಶೀಲಿಸಿದಾಗ ಯುವಕನ ಕೃತ್ಯ ಕಂಡು ಬಂದಿದೆ.
ಅಶ್ಲೀಲ ಚಿತ್ರ ಹಾಗೂ ವಿಡಿಯೋ ಅಪ್ಲೋಡ್ ಮಾಡುವುದಷ್ಟೇ ಅಲ್ಲ ನೋಡುವುದು ಕೂಡ ಅಪರಾಧವಾಗಿದೆ. ಅಪರಾಧ ಸಾಬೀತಾದರೆ ಐದು ವರ್ಷದವರೆಗೆ ಜೈಲು ಶಿಕ್ಷೆ, 10 ಲಕ್ಷ ರೂ.ವರೆಗೆ ದಂಡ ವಿಧಿಸಬಹುದಾಗಿದೆ.




