ಮೊಳಕಾಲ್ಮುರು: ಶಾಸಕ ಎನ್ ವೈ ಗೋಪಾಲಕೃಷ್ಣ ಶುಕ್ರವಾರದಂದು ಬೆಸ್ಕಾಂ ಇಲಾಖೆಗೆ 34 ಲಕ್ಷ ಬೆಲೆಬಾಳುವ ಲಾರಿ ಹಸ್ತಾಂತರಿಸಿದರು ಮತ್ತು ವಾಲ್ಮೀಕಿ ಭವನದ ಕಟ್ಟಡದ ಅಂತಿಮ ಹಂತದ ಕಾಮಗಾರಿಯನ್ನು ವೀಕ್ಷಿಸಿದರು.
ಬೆಸ್ಕಾಂ ಇಲಾಖೆಯಿಂದ ಮೊಳಕಾಲ್ಮೂರು ಬೆಸ್ಕಾಂ ಉಪ ವಿಭಾಗದ ಕಚೇರಿಗೆ ನೂತನ ಲಾರಿಯ ವಾಹನವನ್ನು ಪಟ್ಟಣದಲ್ಲಿ ಬೆಸ್ಕಾಂ ಕಚೇರಿ ಆವರಣದಲ್ಲಿ ಹಸ್ತಾಂತರಿಸಿದರು, 34 ಲಕ್ಷ ರೂಪಾಯಿ ಬೆಲೆಬಾಳುವ ಈ ವಾಹನವು ಬೆಸ್ಕಾಂ ಇಲಾಖೆಯ ಟ್ರಾನ್ಸ್ಫಾರಂ ವಿದ್ಯುತ್ ವೈರ್ ಗಳು ಹಾಗೂ ವಿದ್ಯುತ್ ಕಂಬಗಳು ಸೇರಿದಂತೆ ಬೃಹತ್ ಪ್ರಮಾಣ ಸಾಮಗ್ರಿಗಳನ್ನು ಹೊತ್ತಯ್ಯುವ ಲಾರಿ ಇದಾಗಿದೆ, ಇದರಿಂದ ಬೆಸ್ಕಾಂ ಇಲಾಖೆಗೆ ಬೇರಡೆಗೆ ವಿದ್ಯುತ್ ಸಾಮಾಗ್ರಿಗಳನ್ನು ಸಾಗಿಸಲು ಅನುಕೂಲವಾಗುತ್ತದೆ ಇದರಿಂದ ಬೆಸ್ಕಾಂ ಇಲಾಖೆಗೆ ಅನುಕೂಲವಾಗಿದೆ.
ಅದೇ ರೀತಿ ಈ ಭಾಗದ ಪ್ರಮುಖ ಬೇಡಿಕೆಯಾದ ವಾಲ್ಮೀಕಿ ಭವನವು ಅಂತಿಮ ಹಂತದ ಸಿದ್ಧತೆಗಳನ್ನು ನಾಯಕ ಸಮುದಾಯದ ಮುಖಂಡರ ಜೊತೆ ವೀಕ್ಷಿಸಿದರು.ಮುಂದಿನ ತಿಂಗಳ ಒಳಗಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಸ್ಥಳದಲ್ಲಿದ್ದ ಕೆಆರ್ ಐಡಿಎಲ್ ಎ ಇ ಇ ನಟರಾಜ್ ಗೆ ಸೂಚಿಸಿದರು. ಈ ವಾಲ್ಮೀಕಿ ಭವನವು ಈ ಭಾಗದಲ್ಲಿ ಬಡವರಿಗೆ ಅನುಕೂಲವಾಗುತ್ತದೆ. ಕೆಲವೇ ದಿನಗಳಲ್ಲಿ ಉದ್ಘಾಟನೆಗೆ ರೆಡಿಯಾಗಬೇಕು ಎಂದು ಇಂಜಿನಿಯರಿಗಳಿಗೆ ಎಚ್ಚರಿಕೆ ನೀಡಿ ವಾಲ್ಮೀಕಿ ಮುಖಂಡರ ಜೊತೆ ಅಡಿಗೆ ಕೊಟ್ಟಡಿ ಮದುವೆ ಮಂಟಪದ ಒಳಾಂಗಣ ಪಾರ್ಕಿಂಗ್ ವ್ಯವಸ್ಥೆ ಎಲ್ಲಾ ವಿಚಾರವಾಗಿ ವೀಕ್ಷಣೆ ಮಾಡಿ ಕೆಲವೇ ದಿನಗಳಲ್ಲಿ ಉದ್ಘಾಟನೆಗೆ ತಯಾರು ಮಾಡಬೇಕು ಎಂದು ಇಂಜಿನಿಯರಿಗೆ ಎಚ್ಚರಿಸಿದರು.
ಈ ಸಂದರ್ಭದಲ್ಲಿ ತಹಸಿಲ್ದಾರರಾದ ಟಿ ಜಗದೀಶ್ ಬೆಸ್ಕಾಂ ಇಂಜಿನಿಯರಿಂಗ್ಗಳು ಮತ್ತು ಬೆಸ್ಕಾಂ ಸಿಬ್ಬಂದಿ ಮತ್ತು ಬೆಸ್ಕಾಂ ಗುತ್ತಿಗೆದಾರರಾದ ಜಬ್ಬರ್, ಗುತ್ತಿಗೆದಾರರು ಮತ್ತು ಪಟ್ಟಣ ಪಂಚಾಯತಿ ಸದಸ್ಯರಾದ ಎಸ್ ಖಾದರ್, ನಾಗಸಮುದ್ರ ಗೋವಿಂದಪ್ಪ,ನಾಮ ನಿರ್ದೇಶನ ಸದಸ್ಯರಾದ ಜಿ ಪ್ರಕಾಶ್ ಪಟ್ಟಣ ಪಂಚಾಯತಿ ಅಧ್ಯಕ್ಷರು ಸದಸ್ಯರು ಮುಖ್ಯ ಅಧಿಕಾರಿ ಮತ್ತು ವಾಲ್ಮೀಕಿ ಮುಖಂಡರಾದ ಪಟೇಲ್ ಜಿ ಪಾಪು ನಾಯಕ್, ಜಗಳೂರಯ್ಯ ದೇವಯ್ಯ ಮಾರ ನಾಯಕ್ ಪ್ರೇಮ ಸುಧಾ ದೇವಯ್ಯ, ಸತ್ಯನಾರಾಯಣ, ಕಾಂಗ್ರೆಸ್ ಮುಖಂಡರಾದ ಯರ್ಜನಹಳ್ಳಿ ನಾಗರಾಜ್ ಬಿಟಿ ನಾಗಭೂಷಣ್, ಓಬಣ್ಣ ದೇವದಾಸ್ ಇನ್ನು ಹಲವರು ಉಪಸ್ಥಿತರಿದ್ದರು.
ವರದಿ: ಪಿಎಂ ಗಂಗಾಧರ