———————ಕಾರ್ಖಾನೆ ಪ್ರಾರಂಭಿಸಲು ರೈತ ಸಂಘಟನೆಯಿಂದ ಅನುಮತಿ

ನಿಪ್ಪಾಣಿ: ಕರ್ನಾಟಕ ಮಹಾರಾಷ್ಟ್ರದಲ್ಲಿ ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ 3750 ರೂಪಾಯಿ ನ್ಯಾಯ ಸಮ್ಮತ ದರ ಘೋಷಿಸಬೇಕೆಂದು ಕಳೆದ ಎಂಟು ದಿನಗಳಿಂದ ಬೆಳಗಾವಿ ಹಾಗೂ ಕೊಲ್ಲಾಪುರ ಜಿಲ್ಲೆಯಲ್ಲಿಯ ಸ್ವಾಭಿಮಾನಿ ರೈತ ಸಂಘಟನೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ರೈತ ಸಂಘಟನೆ ಸಹಯೋಗದಲ್ಲಿ ಕಬ್ಬು ತುಂಬಿದ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸುತ್ತಿದ್ದು ರೈತರಿಗೆ ಅನ್ಯಾಯವಾಗಬಾರದೆಂಬ ಉದ್ದೇಶದಿಂದ ಹಾಗೂ ಮಹಾರಾಷ್ಟ್ರ ರಾಜ್ಯ ಸರ್ಕಾರದ ಆದೇಶದಂತೆ ಕೊಲ್ಲಾಪುರ ಜಿಲ್ಲೆಯ ಶಿರೋಳ್ ದತ್ತ ಸಹಕಾರಿ ಸಕ್ಕರೆ ಕಾರ್ಖಾನೆಯು ಪ್ರಸಕ್ತ ವರ್ಷ 2025/26ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಕಬ್ಬು ಪೂರೈಸುವ ರೈತ ಸದಸ್ಯರಿಗೆ ಪ್ರತಿ ಟನ್ ಕಬ್ಬಿಗೆ ಎಫ್ಆರ್ ಪಿ ದರದಂತೆ 3500 ನೀಡಲು ಕಾರ್ಖಾನೆಯ ಅಡಳಿತ ಮಂಡಳಿ ಸಮ್ಮತಿಸಿರುವುದಾಗಿ ಗಣಪತರಾವ ಪಾಟೀಲ ತಿಳಿಸಿದರು.

ಪ್ರಸಕ್ತ ಕಬ್ಬು ನುರಿಸುವ ಹಂಗಾಮಿನಲ್ಲಿ ಈ ಮೊದಲು ಘೋಷಿಸಿದಂತೆ ಪ್ರಾರಂಭದಲ್ಲಿ ಪ್ರತಿ ಟನ ಗೆ 3400 ರೂಪಾಯಿ ರೈತರ ಖಾತೆಗೆ ಜಮಾ ಮಾಡಲಿದ್ದು ಉಳಿದ ಬಾಕಿ ಹಣ 100 ರೂಪಾಯಿ ಹಂಗಾಮು ಮುಕ್ತಾಯದ ನಂತರ ರೈತರ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸ್ವಾಭಿಮಾನಿ ರೈತ ಸಂಘಟನೆಯ ಉಪಾಧ್ಯಕ್ಷ ವಿಠ್ಠಲ್ ಮೋರೆ ಮಾತನಾಡಿ ದತ್ತ ಕಾರ್ಖಾನೆಯು ಎಫ್ ಆರ್ ಪಿ ದರ ನೀಡಲು ಒಪ್ಪಿಕೊಂಡಿದ್ದರಿಂದ ಸ್ವಾಭಿಮಾನಿ ರೈತ ಸಂಘಟನೆಯ ಅಧ್ಯಕ್ಷ ರಾಜು ಶೆಟ್ಟಿ ಅವರೊಂದಿಗೆ ಚರ್ಚಿಸಿ ಕಬ್ಬು ನುರಿಸಲು ಅನುಮತಿ ನೀಡಿರುವುದಾಗಿ ಘೋಷಿಸಿದರು.
ಸಭೆಯಲ್ಲಿ ಸ್ವಾಭಿಮಾನಿ ರೈತ ಸಂಘಟನೆಯ ಉಪಾಧ್ಯಕ್ಷ ಸಚಿನ್ ಸಿಂಧೆ ತಾಲೂಕಾಧ್ಯಕ್ಷ ತಾನಾಜಿ ವಠಾರೆ ವಿಶಾಲ್ ಚೌಗುಲೆ ಸೇರಿದಂತೆ ಶಿರೋಳ ತಾಲೂಕಿನಲ್ಲಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ಮಹಾವೀರ ಚಿಂಚಣೆ




