ಚಿಂಚೋಳಿ: ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಸುಲೇಪೇಟ ಗ್ರಾಮದಲ್ಲಿ ಶ್ರೀ ಗುರುನಂಜೇಶ್ವರ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯಲ್ಲಿ 35ನೇ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು ಕಾರ್ಯಕ್ರಮ ಅಧ್ಯಕ್ಷತೆ ಡಾ.ಪವಾರ್ ವಹಿಸಿದರು ನಂತರ ಮಾತನಾಡಿ ಅವರು ಹೆಣ್ಣು ಮಕ್ಕಳು ನಮ್ಮ ದೇಶದ ರಾಷ್ಟ್ರಪತಿಯಾದ ದ್ರೌಪದಿ ಮೂರ್ಮು ಅವರ ಹಾಗೆ ಬೆಳೆಯಬೇಕು ಎಂದು ಹಾರೈಸಿದರು.
ಹಾಗೂ ನಮ್ಮ ಶಾಲೆಯಲ್ಲಿ ಕಲಿತ ಹಲವಾರು ವಿದ್ಯಾರ್ಥಿಗಳು ಸರ್ಕಾರಿ ದೊಡ್ಡ ದೊಡ್ಡ ಉದ್ಯೋಗದಲ್ಲಿ ಸೇರಿಕೊಂಡಿದ್ದಾರೆ ಎಂದು ಹೇಳಿದರು ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು ಹಾಗೂ ಈ ಸಂದರ್ಭದಲ್ಲಿ ಡಾ.ಪವರ್ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಂತೋಷ್ ರಾಠೋಡ್ ಹಾಗೂ ಬಸವರಾಜ್ ವಿ ಸಜ್ಜನ್ ಮಲ್ಲಿಕಾರ್ಜುನ್ ಎನ್ ದೇಸಾಯಿ ವಿಜಯ ಎಸ್ ಯಾಕ್ಮಾಯಿ ರೇಣಸಿದ್ದಪ್ಪ ಚೌದ್ರಿ ಸೋಮನಾಥ್ ರೆಡ್ಡಿ ಜಗದೀಶ್ ಪೂಜಾರಿ ಭೀಮರೆಡ್ಡಿ ಬಸವಂತ ರೆಡ್ಡಿ ಸುನಿಲ್ ಸಲಗರ ರಿಯಾದ್ದೀನ್ ಪಟೇಲ್ ಶಿವಕುಮಾರ್ ಪೂಜಾರಿ ರವಿ ಪೂಜಾರಿ ವೀಮಾಲ ಮೇಡಂ ನರಸಿಂಹ ರಡ್ಡಿ ಅಣ್ಣವೀರಪ್ಪ ಗೌನಳ್ಳಿ ಉಸ್ಮಾನ ಅಲಿ ಸಿದ್ಧಯ್ಯ ಸಾಮ್ಮಿ ವಿಜಯಕುಮಾರ್ ಸರ್ ವಿಜಯಲಕ್ಷ್ಮಿ ಮೇಡಂ ಹಾಗೂ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತಿ ಇದ್ದರು
ವರದಿ : ಸುನಿಲ್ ಸಲಗರ




