ಅಲಿಗಢ: ಉತ್ತರ ಪ್ರದೇಶದ ಮೈನ್ಪುರಿಯಲ್ಲಿ ಬುಧವಾರ ಸುರಿದ ಭಾರಿ ಮಳೆಗೆ ಸಿಡಿಲು ಬಡಿದು ಪ್ರತ್ಯೇಕ ಘಟನೆಗಳಲ್ಲಿ ಒಂದೇ ದಿನ 37 ಜನರು ಸಾವನ್ನಪ್ಪಿದ್ದಾರೆ.
ಬೇವಾರ್ ಪ್ರದೇಶದ ನಾಗ್ಲಾ ಪೈತ್ ಗ್ರಾಮದಲ್ಲಿ, 22 ವರ್ಷದ ದೀಪ್ ಚಂದ್ರ ಮಳೆಯಿಂದ ರಕ್ಷಣೆ ಪಡೆಯಲು ದೇವಾಲಯದಲ್ಲಿ ಕುಳಿತಿದ್ದಾಗ ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮತ್ತೊಂದು ಘಟನೆಯಲ್ಲಿ, 22 ವರ್ಷದ ಮೋನು ಶಾಕ್ಯ ತನ್ನ ತಂದೆಯೊಂದಿಗೆ ಟೆರೇಸ್ನಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾನೆ. ಹೀಗೆ ಹಲವು ಕಡೆ ಒಟ್ಟಾರೆ ಪ್ರತ್ಯೇಕ ಘಟನೆಗಳಲ್ಲಿ ಒಂದೇ ದಿನ 37 ಜನರು ಸಾವನ್ನಪ್ಪಿದ್ದಾರೆ.
ಉತ್ತರ ಪ್ರದೇಶದಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುತ್ತಿದ್ದು, ಜನರು ತತ್ತರಗೊಂಡಿದ್ದಾರೆ. ಉತ್ತರ ಪ್ರದೇಶದ ಹಲವು ಕಡೆ ಸಂಭವಿಸಿದ ಪ್ರತ್ಯೇಕ ಘಟನೆಯಲ್ಲಿ 37 ಮಂದಿ ಮೃತಪಟ್ಟಿದ್ದಾರೆ.