ಚಿತ್ರದುರ್ಗ : ಅಪ್ರಾಪ್ತರ ಮೇಲಿನ ದೌರ್ಜನ್ಯ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು ರಾಜ್ಯವೇ ಬೆಚ್ಚಿಬೀಳುವ ಮತ್ತೊಂದು ಹೀನ ಕೃತ್ಯ ಚಿತ್ರದುರ್ಗದಲ್ಲಿ ನಡೆದಿದೆ
ಐಸ್ ಕ್ರೀಂ ಆಸೆ ತೋರಿಸಿ 9 ವರ್ಷದ ಬಾಲಕಿ ಮೇಲೆ ವೃದ್ದನೊಬ್ಬ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಚಿತ್ರದುರ್ಗದ ಅಗಸನಹಳ್ಳಿ ಬಡಾವಣೆಯಲ್ಲಿ ನಡೆದಿದೆ.
ಮನೆ ಮುಂದೆ ಆಟವಾಡುತ್ತಿದ್ದ 9 ವರ್ಷದ ಬಾಲಕಿಗೆ ವೃದ್ಧನೊಬ್ಬ ಐಸ್‌ಕ್ರೀಂ ಕೊಡಿಸುವ ಆಸೆ ತೋರಿಸಿ ಗುಡ್ಡಕ್ಕೆ ಕರೆದೊಯ್ದು ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ ಮಾಡಿದ್ದಾನೆ.ಬಾಲಕಿ 3ನೇ ತರಗತಿಯಲ್ಲಿ ಓದುತ್ತಿದ್ದಳು.
ಮೊದಲಿಗೆ ಹೆದರಿದ್ದ ಬಾಲಕಿ ನಂತರ ಅಳುತ್ತಾ ಮನೆಗೆ ಬಂದು ತಾಯಿಯೊಂದಿಗೆ ವಿಚಾರ ಹಂಚಿಕೊಂಡಾಗ ಪಾಪಿ ವೃದ್ಧನ ಕೃತ್ಯ ಬಯಲಾಗಿದೆಅಗಸನಹಳ್ಳಿ ಬಡಾವಣೆಯ ಸಾಧಿಕ್ (56) ಬಾಲಕಿ ಮೇಲೆ ಅತ್ಯಚಾರ ಎಸಗಿದ ಆರೋಪಿ.
ಸಂತ್ರಸ್ತ ಬಾಲಕಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನೆ ಸಂಬಂಧ ಚಿತ್ರದುರ್ಗ ಪೊಲೀಸರು ಆರೋಪಿಯನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.