ಬಿಹಾರ : ಬೆಳ್ಳಂಬೆಳಗ್ಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭೂಕಂಪನದ ನಂತರ ಬಿಹಾರದಲ್ಲೂ ಭೂಮಿ ಕಂಪಿಸಿದೆ. ಬಿಹಾರದ ಸಿವಾನ್ ಪ್ರದೇಶದಲ್ಲಿ ಭೂಮಿ ನಡುಗುವ ಅನುಭವವಾಗಿದ್ದು, ರಿಕ್ಟರ್ ಮಾಪಕದಲ್ಲಿ 4.0 ತೀವ್ರತೆ ದಾಖಲಾಗಿದೆ.
ದೆಹಲಿಯಲ್ಲಿ ಭೂಕಂಪ ಸಂಭವಿಸಿದ ಎರಡು ಗಂಟೆಯಲ್ಲೇ ಬಿಹಾರದಲ್ಲಿ ಭೂಕಂಪವಾಗಿದೆ.ದೆಹಲಿಯಲ್ಲಿ ಬೆಳಗ್ಗೆ 5:30ರ ಸುಮಾರಿಗೆ ಭೂಕಂಪನವಾಗಿದ್ದರೆ ಬಿಹಾರದಲ್ಲಿ 8:02ಕ್ಕೆ ಬೂಮಿ ಕಂಪಿಸಿದೆ.
ಭೂಕಂಪಕ್ಕೆ ಜನರು ಬೆಚ್ಚಿಬಿದ್ದಿದ್ದು, ಭೂಮಿ ಶೇಕ್ ಆಗ್ತಿದ್ದಂತೆ ಜನರು ಮನೆಗಳಿಂದ ಹೊರಬಂದು ಜೀವ ಉಳಿಸಿಕೊಂಡಿದ್ದಾರೆ.ಭೂಕಂಪದಿಂದಾಗಿ ಯಾವುದೇ ಹಾನಿಯಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದ್ದು, ಕೆಲವಸತಿ ಪ್ರದೇಶಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.