ಉತ್ತರ ಪ್ರದೇಶ : ಇತ್ತೀಚೆಗೆ ಅಕ್ರಮ ಸಂಬಂಧಗಳು ಹೆಚ್ಚಾಗುತ್ತಿದ್ದು, ಓಡಿ ಹೋಗೋರ ಸಂಖ್ಯೆಯೂ ವಿಪರೀತವಾಗಿದೆ. ಅ ಸಾಲಿಗೆ ಮತ್ತೊಂದು ಉದಾಹರಣೆ ಸಿಕ್ಕಿದೆ.
4 ಮಕ್ಕಳ ಮಹಾತಾಯಿ ತನ್ನ ಪುತ್ರಿಯ ಮಾವನ ಜತೆ ಪ್ರೀತಿಗೆ ಬಿದ್ದು ಓಡಿ ಹೋಗಿರುವ ಅಚ್ಚರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.ಓಡಿ ಹೋದ ಜೋಡಿಯನ್ನು ಮಮತಾ ಹಾಗೂ ಶೈಲೇoದ್ರ ಅಂತ ಗುರುತಿಸಲಾಗಿದೆ.
ಇಬ್ಬರು ಕ್ಯಾಶ್ ಹಾಗೂ ಗೋಲ್ಡ್ ಜತೆ ಎಸ್ಕೇಪ್ ಆಗಿದ್ದು, ಮನೆಯವರೆಲ್ಲರೂ ಶಾಕ್ ಆಗಿದ್ದಾರೆ. ಮನೆಯಲ್ಲಿದ್ದಾಗ ಇಬ್ಬರು ಒಂದೇ ಕೊಠಡಿಯಲ್ಲಿ ಇರುತ್ತಿದ್ದರು ಎನ್ನಲಾಗಿದೆ.
ಇಳಿವಯಸ್ಸಿನಲ್ಲಿ ಪ್ರೀತಿಗೆ ಬಿದ್ದು ಇಬ್ಬರು ಓಡಿ ಹೋಗಿದ್ದು, ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇಬ್ಬರ ಪತ್ತೆಗೆ ಕುಟುಂಬಸ್ಥರು ಪೋಲೀಸರ ಮೊರೆ ಹೋಗಿದ್ದಾರೆ.