ಚೇಳೂರು: ತಾಲ್ಲೂಕು ಕೇಂದ್ರದಲ್ಲಿ 4 ಕೋಟಿ ವೆಚ್ಚದಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯದ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ಯನ್ನು ಮಾನ್ಯ ಉನ್ನತ ಶಿಕ್ಷಣ ಸಚಿವರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರು ಡಾಕ್ಟರ್ ಎಂ, ಸಿ ಸುಧಾಕರ್ ಹಾಗೂ ಬಾಗೇಪಲ್ಲಿ ಶಾಸಕರು ಎಸ್, ಎನ್ ಸುಬ್ಬಾರೆಡ್ಡಿ ನೆರವೇರಿಸಿದರು.
ಜ್ಯೋತಿ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಭಾಷಣ ಮಾಡಿದ ಡಾಕ್ಟರ್ ಎಂ. ಸಿ.ಸುಧಾಕರ್ ರವರು ಅನೇಕ ಯೋಜನೆಗಳನ್ನು ಬಡವರಿಗಾಗಿ ನಮ್ಮ ಸರ್ಕಾರ ಆಯೋಜಿಸಲಾಗಿದ್ದು, ಅಲ್ಲದೇ ಬಡವರ ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸಕ್ಕಾಗಿ ನಮ್ಮ ಸರ್ಕಾರ ವು ಸಹಾಯ ದನವಾಗಿ ನೀಡುತ್ತಿದೆ,
ಬಡವರಿಗಾಗಿ ನಮ್ಮ ಸರ್ಕಾರ ಸದಾ ಸಿದ್ದ ಎಂದು ತಿಳಿಸಿದರು,
ಅದೇ ರೀತಿ ಗ್ರಾಮೀಣಾ ಪ್ರದೇಶದಲ್ಲಿ ಕೈಗಾರಿಕ ಕೇಂದ್ರ ಗಳನ್ನು ಆಳ್ವಾಡನೆ ಮಾಡಲಾಗುವುದು ಎಂದು ಬಾವಾಸೆ ನೀಡಿದರು.
ಈ ಸಂದರ್ಭದಲ್ಲಿ ಚೇಳೂರು ತಾಲೂಕಿನ ತಹಸೀಲ್ದಾರ್ ಶ್ರೀನಿವಾಸಲು ನಾಯ್ಡು, ಇ ಓ, ರಮೇಶ್ ರೆಡ್ಡಿ, ಟಿ ಎಚ್ ಓ ಸತ್ಯನಾರಾಯಣ ರೆಡ್ಡಿ, ಬಿ ಇ ಓ ವೆಂಕಟೇಶಪ್ಪ, ಪಿ ಡಿ ಓ, ವೆಂಕಟಾಚಲಪತಿ, ಕಾಂಗ್ರೆಸ್ ಹಿರಿಯ ಮುಖಂಡರಾದ ಪಿ ಆರ್ ಚಲಂ,ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಕೌಸ್ತಾರ್,ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಕೆ ಜಿ ವೆಂಕಟರಮಣ, ಹಾಲಿನ ಡೈರಿ ಅಧ್ಯಕ್ಷರಾದ ಜಾಲಾರಿ,ಡ್ಸ್ ಜಿಲ್ಲಾ ಸಂಚಾಲಕರಾದ ಕಡ್ಡಿಲ್ ವೆಂಕಟರಮಣ, ಸಹದೇವರೆಡ್ಡಿ,HV ನಾರಾಯಣ ಸ್ವಾಮಿ, ಸುರೇಂದ್ರ, ನಯಾಜ್,ಟೈಲರ್ ಚಂದ್ರ ಹಾಗೂ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರು ಹಾಜರಿದ್ದರು.