ಕೊಪ್ಪಳ: ಕೊಪ್ಪಳ ತಾಲೂಕಿನ ಹಂದ್ರಾಳದಲ್ಲಿ ಮರ್ಯಾದೆಗೇಡು ಹತ್ಯೆ ಯತ್ನ ನಡೆದಿದೆ. ಅದೃಷ್ಟವಶಾತ್ 4 ತಿಂಗಳ ಗರ್ಭಿಣಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗರ್ಭಿಣಿ ಮೀನಾಕ್ಷಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಲು ಸ್ವಂತ ಅಣ್ಣನೇ ಯತ್ನಿಸಿದ್ದಾನೆ. ಅಣ್ಣ ಮಂಜುನಾಥ್ ಕೊಲೆ ಮಾಡಲು ಯತ್ನಿಸಿದ್ದಾನೆ.ಮೀನಾಕ್ಷಿ ಪತಿ ಉದಯ್ ಸಹೋದರನ ಮದುವೆಗೆ ಬಂದಾಗ ಕೃತ್ಯ ನಡೆದಿದೆ.
ಎರಡು ವರ್ಷದ ಹಿಂದೆಯಷ್ಟೇ ಹಂದ್ರಾಳ ಗ್ರಾಮದ ಉದಯ್ ಎನ್ನುವ ಯುವಕನೊಂದಿಗೆ ಮೀನಾಕ್ಷಿ ಮದುವೆಯಾಗಿತ್ತು.
ಎಸ್.ಟಿ. ಸಮುದಾಯದ ಯುವಕ ಉದಯ್ ನನ್ನು ಕುರುಬ ಸಮುದಾಯಕ್ಕೆ ಸೇರಿರುವ ಕೊಪ್ಪಳ ಜಿಲ್ಲೆ ಕುಕನೂರ ತಾಲೂಕಿನ ಚಿತ್ತಾಪುರ ನಿವಾಸಿ ಮೀನಾಕ್ಷಿ ಪ್ರೀತಿಸಿ ಮದುವೆಯಾಗಿದ್ದಳು.
ಇಂದು ಉದಯ್ ಸಹೋದರನ ಮದುವೆಗೆಂದು ಬಂದಿದ್ದಾಗ ಅಣ್ಣ ಮಂಜುನಾಥ್ ಕಾದು ಕೈ ಹಾಗೂ ಬೆನ್ನಿನ ಭಾಗಕ್ಕೆ ಕೊಡಲಿಯಿಂದ ಕೊಚ್ಚಿದ್ದಾನೆ.
4 ತಿಂಗಳ ಗರ್ಭಿಣಿ ಮೀನಾಕ್ಷಿಯನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಂಜುನಾಥನನ್ನು ಅಳವಂಡಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.




