Ad imageAd image

40 ವರ್ಷದ ದುರಗಪ್ಪ ವಡ್ಡರ್ ವಿಕಲಚೇತನ ಸಿಕ್ಕಿಲ್ಲ ತ್ರಿಚಕ್ರವಾಹನ..

Bharath Vaibhav
40 ವರ್ಷದ ದುರಗಪ್ಪ ವಡ್ಡರ್ ವಿಕಲಚೇತನ ಸಿಕ್ಕಿಲ್ಲ ತ್ರಿಚಕ್ರವಾಹನ..
WhatsApp Group Join Now
Telegram Group Join Now

ನ್ಯಾಯಯುತ ಹಕ್ಕಿಗಾಗಿ ಅಂಗವಿಕಲರ ಇನ್ನೂ ಪರದಾಟ.

ಮುದಗಲ್ಲ :ಅಲ್ಪಊನವಿದ್ದವರಿಗೂ ತ್ರಿಚಕ್ರವಾಹನ ಪಡೆದವರು ಸಾಕಷ್ಟಿದ್ದಾರೆ. ಆದರೆ ದೈಹಿಕವಾಗಿ ಎರಡೂ ಕಾಲು ಊನವಾಗಿದ್ದರೂ, ನಡೆದಾಡಲು ಬರದೇ ತ್ರಿಚಕ್ರವಾಹನ ಕೊಡಿ ಎಂದು ಕಂಡ ಕಂಡ ಅಧಿಕಾರಿಗಳಿಗೆಲ್ಲ ಅಂಗಲಾಚಿದರೂ ತ್ರಿಚಕ್ರವಾಹನ ಸಿಗದೇ ಕಂಗಾಲಾಗಿದ್ದಾರೆ ಇಲ್ಲೊಬ್ಬ ವ್ಯಕ್ತಿ.

ಲಿಂಗಸೂರು ತಾಲೂಕಿನ ಮುದಗಲ್ಲ ಪಟ್ಟಣದ ನಿವಾಸಿ ದುರಗಪ್ಪ ತಂದೆ ಹನುಮಂತ ವಡ್ಡರ್ ಅವರು
ಸುಮಾರು 40 ವರ್ಷದ ಮುದಗಲ್ಲ ಲಿಂಗಸೂರು ರೋಡ ನೀರುಪಾದೇಶ್ವರ ಪೆಟ್ರೋಲ್ ಬಂಕ್ ಹತ್ತಿರದ ಕಾಲೋನಿ ಯಲ್ಲಿ ವಾಸವಾಗಿದ್ದಾನೆ ವಿಕಲಚೇತನ ಜಾತಿ S.C ಆಗಿದ್ದು ವಡ್ಡರ್ ಸಮಾಜದ ದುರಗಪ್ಪ ದೈಹಿಕವಾಗಿ ಎರಡೂ ಕಾಲುಗಳಿಲ್ಲ. ನಡೆದಾಡಲು ಬರದೇ ತ್ರಿಚಕ್ರ ವಾಹನಕ್ಕೆ ಅಲೆದು ಅಲೆದು ಸುಸ್ತಾಗಿದ್ದಾರೆ. ನಾಲಕೈದು ಬಾರಿ ಅರ್ಜಿ ಸಲ್ಲಿಸಿದ್ದರೂ ಸರ್ಕಾರದ ಯೋಜನೆಯ ನೆರವು ದೊರೆತಿಲ್ಲ.

ಇವರನ್ನು ನೋಡಿದರೆ ಅಯ್ಯೋ ಎಂದು ಎಂಥವರಿಗೂ ಕನಿಕರ ಹುಟ್ಟುತ್ತದೆ. ಆದರೆ ಅಧಿಕಾರಿಗಳಿಗೆ ಮಾತ್ರ ಕನಿಕರ ಹುಟ್ಟಿಲ್ಲ. ಈತನಿಗೆ ತ್ರಿಚಕ್ರ ವಾಹನ ನೀಡದ ಇಲಾಖೆಗೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ. ಕಾಗದ ಹಿಡಿದು ಅಧಿಕಾರಿ ಸ್ಥಳೀಯ ಶಾಸಕ ಸೇರಿದಂತೆ ಎಲ್ಲೆಡೆ ಅಲೆದರೂ ಸ್ಪಂದನೆ ಸಿಗಲಿಲ್ಲ ಎಂಬ ಕೊರಗು ಈತನನ್ನು ಕಾಡುತ್ತಿದೆ.

ಇದು ಮುದಗಲ್ಲ ಪಟ್ಟಣದ ವಿಕಲಚೇತನನ ಅಳಲಷ್ಟೇ ಅಲ್ಲ ತಾಲೂಕು ಜಿಲ್ಲೆ, ರಾಜ್ಯದಲ್ಲಿ ಅದೆಷ್ಟು ಜನ ಈ ರೀತಿ ಸೌಲಭ್ಯಕ್ಕಾಗಿ ಅಲೆಯುತ್ತಿದ್ದಾರೋ ಏನೋ. ಇನ್ನೆಷ್ಟು ಜನರಿಗೆ ತ್ರಿಚಕ್ರ ವಾಹನ ಸಿಗಬೇಕೋ ಎನ್ನುವುದನ್ನು ಅಧಿಕಾರಿಗಳು ಪರಾಮರ್ಶಿಸಬೇಕಿದೆ

ಇನ್ನಾದರೂ ಸರಕಾರ ಸಂಬಂಧಿಸಿದ ಅಧಿಕಾರಿಗಳು ಸರಕಾರದ ನಿಯಮಾನುಸಾರ ವಿಕಲಚೇತನರ ವಸತಿ, ಉದ್ಯೋಗ ಹಾಗೂ ತ್ರಿಚಕ್ರ ವಾಹನ ನೀಡಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವಕೆಲಸ ಮಾಡಬೇಕಿದೆ

ಕನಾ೯ಟಕ ರಾಜ್ಯ ಅಂಗವಿಕಲರ ಆರ್ ಪಿ ಡಿ ಟಾಸ್ಕ್ ಪೋಸ೯ ಸಮಿತಿಯ ಅಧ್ಯಕ್ಷ ರಾದ ಸುರೇಶ ಬಂಡಾರಿ ಅವರು ಪೋನ ಕರೆ ಮುಖಾಂತರ ಮಾತನಾಡಿದರು
ನ್ಯಾಯಯುತ ಹಕ್ಕಿಗಾಗಿ ಅಂಗವಿಕಲರ ಇನ್ನೂ ಪರದಾಟ ನಡೆದಿದೆ ಸರ್ಕಾರ ಅಂಗವಿಕಲರಿಗಾಗಿ ಹಲವು ಸೌಲಭ್ಯಗಳನ್ನು ಕಲ್ಪಿಸಿದೆ. ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ, ಬಡ್ತಿಯ ಅವಕಾಶ ನೀಡಿದೆ. ಆದರೂ, ಅವರ ಬದುಕು ಹಸನಾಗಿಲ್ಲ. ಸೌಲಭ್ಯಗಳು ತಲುಪಿಲ್ಲ. ನ್ಯಾಯಯುತ ಹಕ್ಕಿಗಾಗಿ ನಡೆಸಿದ ಅವರ ಹೋರಾಟ ಗುರಿ ಮುಟ್ಟಿಲ್ಲ ಎಂದು ಹೇಳಿದರು.

ನಕಲಿ ಅಂಗವಿಕಲರ ಪಾಸ್‌ ಬುಕ್‌, ನಕಲಿ ಸೀಲ್‌, ವೈದ್ಯರು ಮತ್ತು ಅಧಿಕಾರಿಗಳ ನಕಲಿ ಸಹಿ ಬಳಸಿಕೊಂಡು ಸರಕಾರಿ ಸೌಲಭ್ಯ ಪಡೆಯಲಾಗುತ್ತಿದೆ. ಆದರೆ, ಸೌಲಭ್ಯ ಪಡೆಯುವ ನಕಲಿಗಳೆಲ್ಲ ಗಟ್ಟಿಮುಟ್ಟಾ ದ ವ್ಯಕ್ತಿಯಾಗಿರುತ್ತಾರೆ. ತಮಗೆ ಕಿವಿ ಕೇಳುವುದಿಲ್ಲ, ಕಣ್ಣು ಕಾಣುವುದಿಲ್ಲ, ಕೈ-ಕಾಲು ಊನವಾಗಿದೆ ಎಂಬೆಲ್ಲ ಸುಳ್ಳು ಕಾರಣ ನೀಡಿ, ಒಂದಿಷ್ಟು ಲಂಚ ಕೊಟ್ಟರೆ ದಾಖಲೆಗಳು ಸೃಷ್ಟಿಯಾಗುತ್ತವೆ.

ಈ ದಾಖಲೆಗಳಿಂದ ವಿಶೇಷಚೇತನರ ಬಸ್‌ ಪಾಸ್‌, ಮಾಶಾಸನ ಸೌಲಭ್ಯ ಪಡೆಯಲಾಗುತ್ತಿದೆ. ಇಂತಹ ನೂರಾರು ನಕಲಿ ಬಸ್‌ಪಾಸ್‌ ವಶಪಡಿಸಿಕೊಂಡು ಎಚ್ಚರಿಕೆ ನೀಡಿ ಕಳುಹಿಸುತ್ತಿರುವ ವಿಷಯ ಸಾರಿಗೆ ಘಟಕದ ಅಧಿಕಾರಿಗಳಿಂದ ಬೆಳಕಿಗೆ ಬಂದಿದೆ. ಇಷ್ಟೆಲ್ಲ ನಕಲಿ ದಂಧೆ ನಡೆಯುತ್ತಿದ್ದರೂ ಜಿಲ್ಲಾ ಅಂಗವಿಲರ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಆರೋಗ್ಯ ಇಲಾಖೆ ಕಣ್ಮುಚ್ಚಿ ಕುಳಿತಿರುವುದು ಅನೇಕ ಸಂಶಯಗಳಿಗೆ ದಾರಿ ಮಾಡಿಕೊಟ್ಟಿದೆ ಎಂದರು..

ವರದಿ: ಮಂಜುನಾಥ ಕುಂಬಾರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!