ರಾಯಚೂರು: ಕಲಿಯುಗ ಕಾಮಧೇನು ಶ್ರೀಗುರು ರಾಘವೇಂದ್ರ ಸ್ವಾಮಿಗಳ 431ನೇ ಹುಟ್ಟು ಹಬ್ಬವನ್ನ ಮಂತ್ರಾಲಯದಲ್ಲಿ ವರ್ಧಂತಿ ಉತ್ಸವವಾಗಿ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕಳೆದ ಆರು ದಿನಗಳಿಂದ ವಿಜೃಂಭಣೆಯಿಂದ ನಡೆಯುತ್ತಿರುವ ಗುರುವೈಭವೋತ್ಸವಕ್ಕೆ ಇಂದು ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ತೆರೆ ಬೀಳಲಿದೆ.
ಗುರು ರಾಯರ ಪಟ್ಟಾಭಿಷೇಕ ಹಾಗೂ ವರ್ಧಂತಿ ಉತ್ಸವವನ್ನ ಪ್ರತೀವರ್ಷದಂತೆ ಈ ವರ್ಷವೂ ಮಂತ್ರಾಲಯದಲ್ಲಿ ಗುರುವೈಭವೋತ್ಸವವಾಗಿ ಅದ್ದೂರಿಯಿಂದ ಆಚರಿಸಲಾಗುತ್ತದೆ. ವರ್ಧಂತಿ ಉತ್ಸವ ಹಿನ್ನೆಲೆ ಬೆಳಿಗ್ಗೆಯಿಂದಲೇ ನಾನಾ ಧಾರ್ಮಿಕ ಕಾರ್ಯಕ್ರಮಗಳು, ಪೂಜೆಗಳನ್ನ ನೆರವೇರಿಸಲಾಗುತ್ತಿದೆ. ಚೆನೈನ ಶ್ರೀರಾಘವೇಂದ್ರ ನಾದಹಾರ ಸೇವಾ ಟ್ರಸ್ಟ್ ನ ನೂರಾರು ಕಲಾವಿದರಿಂದ ನಾದಹಾರ ಸಮರ್ಪಣ ಸೇವೆ ನಡೆಯಿತು. ಕಳೆದ 21 ವರ್ಷಗಳಿಂದ ನಾದಹಾರ ಸಮರ್ಪಣ ಸೇವೆ ನಡೆಯುತ್ತಿದೆ.

ಗುರುವೈಭವೋತ್ಸವ ಹಿನ್ನೆಲೆ ಮಠದ ಪ್ರಾಂಗಣದಲ್ಲಿ ಇಂದು ಚಿನ್ನದ ರಥೋತ್ಸವ ನಡೆಯಿತು.ಉತ್ಸವ ಮೂರ್ತಿ ಪ್ರಹ್ಲಾದ ರಾಜರನ್ನ ಚಿನ್ನದ ರಥದಲ್ಲಿ ಇಟ್ಟು ಮೆರವಣಿಗೆ ಮಾಡಲಾಯಿತು.ರಥೋತ್ಸವದಲ್ಲಿ ಸಹಸ್ರಾರು ಭಕ್ತರು ಭಾಗಿಯಾಗಿದ್ದರು.ದೇಶದ ಮೂಲೆ ಮೂಲೆಗಳಿಂದ ಬಂದಿರುವ ಭಕ್ತರು ಶ್ರೀ ಗುರು ರಾಯರ ದರ್ಶನ ಪಡೆಯುತ್ತಿದ್ದಾರೆ. ಚತುರ್ಯುಗ ಮೂರ್ತಿ ಬ್ರಹ್ಮ ಕರಾರ್ಚಿತ ಮೂಲ ರಾಮದೇವರ ಮೂರ್ತಿ ಪೂಜೆಗೆ ರಜತ ಶೇಷವಾಹನ ಪೀಠ ಹಾಗೂ ಸುಜಯಿಂದ್ರ ತೀರ್ಥರ ಮೂಲಬೃಂದಾವನಕ್ಕೆ ಬಹುಕೋಟಿ ವೆಚ್ಚದ ನವರತ್ನ ಕವಚ ಸಮರ್ಪಣೆ ಕಾರ್ಯಕ್ರಮಗಳು ಇಂದು ನಡೆಯುತ್ತಿವೆ.ಯೆಂದು ಮಠದಿಶಾರು ಮಾಧ್ಯಮದ ಮುಂದೆ ತಿಳಿಸಿದರು.
ವರದಿ: ಗಾರಲದಿನ್ನಿ ವೀರನಗೌಡ




