ಮಾನ್ವಿ:-ಪಟ್ಟಣದ ಶಾರದಾಂಬೆ ಪತ್ತಿನ ಸೌಹಾರ್ದ ಸಹಕಾರಿ ಸಂಘದ 4 ನೇ ವರ್ಷದ ಸರ್ವಸದಸ್ಯರ ಸಭೆಯನ್ನು ಶಾರದಾಂಬೆಗೆ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಿ ಸಹಕಾರಿಯ ಅಧ್ಯಕ್ಷರಾದ ವೈ.ಸುರೇಶ ಗೌಡ ಮಾತನಾಡಿ ಸಹಕಾರಿಯು 4 ವರ್ಷಗಳಿಂದ ಸಹಕಾರಿಯ 2016 ಸದಸ್ಯರಿಗೆ ಉತ್ತಮವಾದ ಆರ್ಥಿಕ ಸೇವೆಯನ್ನು ಸಲ್ಲಿಸುತ್ತ ಬಂದಿದೆ. ಶೇರು ಬಂಡವಾಳ 53 ಲಕ್ಷ 14 ಸಾವಿರ ,
ಠೇವಣಿಗಳು 17 ಕೋಟಿ 24 ಲಕ್ಷ , ನಿಧಿಗಳು 44 ಲಕ್ಷ 97 ಸಾವಿರ, ಸದಸ್ಯರಿಗೆ ವಿವಿಧ ಅವಶ್ಯಕತೆಗಳಿಗೆ ನೀಡಿಸ ಸಾಲ ಮತ್ತು ಮುಂಗಡಗಳು 16 ಕೋಟಿ 37 ಲಕ್ಷರೂ, ದುಡಿಮೆಯ ಬಂಡವಾಳ 18 ಕೋಟಿ 22 ಲಕ್ಷರೂ,ಒಟ್ಟು ವ್ಯವಹಾರ 33ಕೋಟಿ 65 ಲಕ್ಷ ರೂಗಳು. ಸಾಲಮರುಪವಾತಿ 96 ಶೇ, ನಿವ್ವಳ ಲಾಭ 45 ಲಕ್ಷ 65 ಸಾವಿರ ಸಹಕಾರಿಯ ಎಲ್ಲಾ ಸದಸ್ಯರಿಗೆ ಈ ಸಾಲಿನಲ್ಲಿ ಬಂದ ಲಾಭಂಶದಲ್ಲಿ ಶೇ 14 ರಷ್ಟು ಡಿವಿಡೆಂಡ್ ನೀಡಲಾಗುವುದು ಹಾಗೂ ಸಹಕಾರಿಯ ವತಿಯಿಂದ ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಬೇಸಿಗೆ ಸಮಯದಲ್ಲಿ ಸಾರ್ವಜನಿಕರಿಗೆ ಶುದ್ದವಾದ ಕುಡಿಯುವ ನೀರಿನ ವ್ಯವಸ್ಥೆ,ಗೋಶಾಲೆಗಳಿಗೆ ಮೇವಿನ ವ್ಯವಸ್ಥೆ, ಅನ್ನದಾನ ಸೇವೆ ಸೇರಿದಂತೆ ಅನೇಕ ಸಾಮಾಜಿಕ ಕಾರ್ಯಗಳನ್ನು ಕೂಡ ಸಹಕಾರಿಯ ವತಿಯಿಂದ ಕೈಗೊಳ್ಳಲಾಗಿದ್ದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿವಯ್ಯಸ್ವಾಮಿ ಸಹಕಾರಿಯ ಸಿ.ಇ.ಒ.ರಾಜಕುಮಾರ,ವ್ಯವಸ್ಥಾಪಕರಾದ ವಿಜಯಕುಮಾರ, ಉಪಾಧ್ಯಕ್ಷರಾದ ಸುರೇಶ ಸಂಗಪೂರ್, ನಿರ್ದೇಶಕರಾದ ಚಂದ್ರಶೇಖರಗೌಡ, ವೀರಭದ್ರಯ್ಯಸ್ವಾಮಿ,ಪರಶುರಾಮ ಕೇಸರಿ, ವಿಜಯಕುಮಾರ,ಮಲ್ಲಿನಾಥ,ಮೌನೇಶ,ಈರಣ್ಣಶಿವರಾಮಕೃಷ್ಣ,ಪ್ರಕಾಶ ಹಿರೇಮಠ, ಸೇರಿದಂತೆ ಸಹಕಾರಿಯ ಸಿಬ್ಬಂದಿಗಳು ಹಾಗೂ ಸದಸ್ಯರು ಇನ್ನಿತರರು ಇದ್ದರು.24-ಮಾನ್ವಿ-2: ಮಾನ್ವಿ:ಪಟ್ಟಣದ ಶಾರದಾಂಬೆ ಪತ್ತಿನ ಸೌಹಾರ್ದ ಸಹಕಾರಿ ಸಂಘದ 4 ನೇ ವರ್ಷದ ಸರ್ವಸದಸ್ಯರ ಸಭೆಯಲ್ಲಿ ಸಹಕಾರಿಯ ಅಧ್ಯಕ್ಷರಾದ ವೈ.ಸುರೇಶ ಗೌಡ ಮಾತನಾಡಿದರು.
ವರದಿ:-ಶಿವತೇಜ