ಬಸ್ಸೇಟೆರ್ರೆ, ಸೆಂಟ್ ಕಿಟ್ಸ್ ( ವೆಸ್ಟ್ ಇಂಡೀಸ್): ಪ್ರವಾಸಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಐದು ಪಂದ್ಯಗಳ ಟ್ವೆಂಟಿ-20 ಸರಣಿಯನ್ನು 5-0 ರಿಂದ ಗೆದ್ದುಕೊಂಡು ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ.
ಇಲ್ಲಿನ ವಾರ್ನರ್ ಪಾರ್ಕ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 19.4 ಓವರುಗಳಲ್ಲಿ 170 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ಪ್ರತಿಯಾಗಿ ಆಡಿದ ಆಸ್ಟ್ರೇಲಿಯಾ 17 ಓವರುಗಳಲ್ಲೇ 7 ವಿಕೆಟ್ ಗಳ ನಷ್ಟಕ್ಕೆ 173 ರನ್ ಗಳಿಸಿ ಸುಲಭ ಗೆಲುವು ಪಡೆಯಿತು.

ಪಂದ್ಯದ ನಂತರ ಮಾತನಾಡಿದ ಆಸ್ಟ್ರೇಲಿಯಾ ತಂಡದ ನಾಯಕ ಮಿಚೆಲ್ ಮಾರ್ಷ್ ಈ ಚುಟುಕು ಸರಣಿಯ ಆರಂಭದಲ್ಲಿ ನಾವು ಸರಣಿಯನ್ನು 5-0 ರಿಂದ ಗೆಲ್ಲುತ್ತೇವೆ ಎಂದು ನಂಬಿರಲಿಲ್ಲ. ನಿಜಕ್ಕೂ ನಮ್ಮ ತಂಡದ ಆಟಗಾರರು ಉನ್ನತ ಮಟ್ಟದ ಕ್ರಿಕೆಟ್ ಆಡಿದರು ಎಂದರು.
ಯುವ ಪ್ರತಿಭೆಗಳಿಂದ ಕೂಡಿದ ವೆಸ್ಟ್ ಇಂಡೀಸ್ ವಿಶೇಷವಾಗಿ ಬ್ಯಾಟಿಂಗ್ ವಿಭಾಗದಲ್ಲಿ ಉತ್ತಮವಾಗಿಯೇ ಆಡಿದೆ. ಆದರೆ ಉನ್ನತ ಮಟ್ಟದ ಕ್ರಿಕೆಟ್ ಆಡಲು ಆ ಆಟಗಾರರಲ್ಲಿ ಇನ್ನು ಅನುಭವದ ಕೊರತೆ ಎದ್ದು ಕಾಣುತ್ತಿದೆ ಎಂಬುದು ಸರಣಿಯ ಫಲಿತಾಂಶದಿಂದ ಕಂಡು ಬಂತ್ತು.
ಸ್ಕೋರ್ ವಿವರ
ವೆಸ್ಟ್ ಇಂಡೀಸ್ 19.4 ಓವರುಗಳಲ್ಲಿ 170
ಶೆರಫೆನ್ ರೋದರಪೋರ್ಡ್ 35 ( 17 ಎಸೆತ, 6 ಬೌಂಡರಿ, 1 ಸಿಕ್ಸರ್), ಹೆಟ್ಮೆರ್ 52 ( 31 ಎಸೆತ, 3 ಬೌಂಡರಿ, 3 ಸಿಕ್ಸರ್)
ಡ್ವಾರ್ ಶ್ವೂಸ್ 41 ಕ್ಕೆ 3,
ಆಸ್ಟ್ರೇಲಿಯಾ 17 ಓವರುಗಳಲ್ಲಿ 7 ವಿಕೆಟ್ ಗೆ 173
ಕ್ಯಾಮರೂನ್ ಗ್ರೀನ್ 32 ( 18 ಎಸೆತ, 5 ಬೌಂಡರಿ), ಟಿಮ್ ಡೆವಿಡ್ 30 ( 12 ಎಸೆತ, 1 ಬೌಂಡರಿ, 4 ಸಿಕ್ಸರ್)
ಮಿಚೆಲ್ ಓವೆನ್ 37 ( 17 ಎಸೆತ, 3 ಬೌಂಡರಿ, 3 ಸಿಕ್ಸರ್) ಅಲ್ಜಾರಿ ಜೋಸೆಫ್ 21 ಕ್ಕೆ 2, ಜೇಸನ್ ಹೋಲ್ಡರ್ 36 ಕ್ಕೆ 2, ಅಕಿಲ್ ಹುಸೇನ್ 17 ಕ್ಕೆ 3)
————————————————-ಪಂದ್ಯದ ಫಲಿತಾಂಶ: ಆಸ್ಟ್ರೇಲಿಯಾಗೆ 3 ವಿಕೆಟ್ ಗಳ ಜಯ
————————————————-ಆಸ್ಟ್ರೇಲಿಯಾಗೆ 5-0 ರಿಂದ ಸರಣಿಯ ಜಯ
——————————————ಪಂದ್ಯ ಶ್ರೇಷ್ಠ: ಡ್ವಾರ್ ಶ್ವೂಸ್ , ಸರಣಿ ಶ್ರೇಷ್ಠ: ಕೆಮರೂನ್ ಗ್ರೀನ್ ಸರಣಿ ಶ್ರೇಷ್ಠ




