ರಾಯಚೂರು: ಗ್ರಾಮಾಂತರ ಕ್ಷೇತ್ರದ ಕುರಡಿಯಿಂದ ಗಾರಲದಿನ್ನಿರಸ್ತೆ ಡಾಂಬರೀಕರಣ 5 ಕೋಟಿ 62 ಲಕ್ಷ ಸುಸಜ್ಜಿದ್ದ ಡಾಂಬರೀಕರಣ Grand ಕುರಡಿ ಗ್ರಾಮದಲ್ಲಿ ನಾಡ ಕಾರ್ಯಾಲಯ ಭೂಮಿ ಪೂಜೆ ಬಸನಗೌಡ ದದ್ದಲ್
ರಾಯಚೂರು ಗ್ರಾಮಾಂತರ ಕ್ಷೇತ್ರದ ಕುರಡಿ ಗ್ರಾಮದ ಚರ್ಚ್ ಗೆ ತೆರಳಿ ದರ್ಶನ್ ಪಡೆದು ಕುರಡಿಯಿಂದ ಗಾರಲ ದಿನ್ನಿ ಗ್ರಾಮಕ್ಕೆ ರಸ್ತೆ ಇದ್ದು, ಇದು ಸುಮಾರು ಇತಿಹಾಸದಿಂದಲೂ ಈ ರಸ್ತೆಯನ್ನು ಗುರುತಿಸಿ ಯಾರು ಮಾಡದ ಕಾಮಗಾರಿಯನ್ನು ಇಂದು ರಾಯಚೂರು ಗ್ರಾಮಾಂತರ ಶಾಸಕ ಬಸನಗೌಡ ದದ್ದಲ್ ರವರು, 5 ಕೋಟಿ 62 ಲಕ್ಷದ ಸೂಜಿತ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿದರು.
ಕುರುಡಿ ಗ್ರಾಮದ ಗೋರ್ ಕಲ್ ರಸ್ತೆಯಲ್ಲಿ 40 ಲಕ್ಷ ಅನುದಾನ ದಡಿಯಲ್ಲಿ ನಾಡ ಕಾರ್ಯಾಲಯ ಕಟ್ಟಡಕ್ಕೆ ಭೂಮಿ ಪೂಜೆ ಮಾಡಿದರು ಕುರುಡಿ ಗ್ರಾಮವು ಸುಮಾರು ಜನಸಂಖ್ಯೆವುಳ್ಳ ದೊಡ್ಡ ಗ್ರಾಮವಿದ್ದು ಇದು ಮುಂದೊಂದು ದಿನ ತಾಲೂಕ ಆಗುವ ಸಂಭವವಿದೆ ಈ ಗ್ರಾಮಕ್ಕೆ ಸುತ್ತ ಮುತ್ತ ಹಳ್ಳಿಗಳು ಸಾಕಷ್ಟು ಬರುತ್ತಿದ್ದು ಹಾಗಾಗಿ ಗ್ರಾಮದ ಸುತ್ತ ಗ್ರಾಮದ ಮತ್ತು ಸುತ್ತಮುತ್ತಲಿನ ರೈತರಿಗೆ ಶಾಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಇಂದು ಕುರುಡಿ ಗ್ರಾಮದಲ್ಲಿ ನಾಡಕಾರ್ಯಲಯ ಕಟ್ಟಿದರೆ ಅನುಕೂಲವಾಗುತ್ತದೆ ಎಂದು ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾನ್ವಿ ತಹಸೀಲ್ದಾರರು. ಕಂದಾಯ
ಅಧಿಕಾರಿಗಳು.ಗ್ರಾಮ ಲೆಕ್ಕಾಧಿಕಾರಿಗಳು. ಕುರುಡಿ ಗ್ರಾಮದ ಊರಿನ ಹಿರಿಯ ಮುಖಂಡರು. ಗ್ರಾಮಸ್ಥರು. ಕಾಂಗ್ರೆಸ್ ಕಾರ್ಯಕರ್ತರು. ಗ್ರಾಮ ಪಂಚಾಯತ್ ಗ್ರಾಮ ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರುಗಳು ಉಪಸ್ಥಿತರಿದ್ದರು.
ವರದಿ: ಗಾರಲದಿನ್ನಿ ವೀರನಗೌಡ