Ad imageAd image

5 ಕೋಟಿ ಹಳೆಯ ನೋಟು ಸುಡಲು ಸಿದ್ದತೆ -ಪೊಲೀಸರಿಂದಲೇ ನ್ಯಾಯಾಲಯಕ್ಕೆ ಮನವಿ

Bharath Vaibhav
5 ಕೋಟಿ ಹಳೆಯ ನೋಟು ಸುಡಲು ಸಿದ್ದತೆ -ಪೊಲೀಸರಿಂದಲೇ ನ್ಯಾಯಾಲಯಕ್ಕೆ ಮನವಿ
WhatsApp Group Join Now
Telegram Group Join Now

 

ಬೆಂಗಳೂರು: ಐದು ಕೋಟಿ ಮೌಲ್ಯದ ಹಳೆಯ ನೋಟುಗಳನ್ನು ಸುಟ್ಟು ಹಾಕಲು ಬೆಂಗಳೂರು ಪೊಲೀಸರು ಸಿದ್ದತೆ ನಡೆಸಿದ್ದು, ಇದಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಬೆಂಗಳೂರು ನಗರ ಪೊಲಿಸರು ವಿವಿಧ ಪ್ರಕರಣಗಳಲ್ಲಿ ಹಣ ಜಪ್ತಿ ಮಾಡಿದ್ದರು ಇದರಲ್ಲಿ ೫೦೦ ಮತ್ತು ೧ ಸಾವಿರ ಮುಖ ಬೆಲೆ ಹೊಂದಿರುವ ಸುಮಾರು ಐದು ಕೋಟಿ ರೂಪಾಯಿಗಳು ಸಂಗ್ರಹವಾಗಿತ್ತು, ಇದೀಗ ಈ ನೋಟುಗಳು ಮೌಲ್ಯ ಕಳೆದು ಕೊಂಡಿದ್ದು,ಅಪ ಮೌಲ್ಯ ಗೊಂಡಿರುವ ನೋಟುಗಳನ್ನು ಸುಟ್ಟು ಹಾಕಲು ನ್ಯಾಯಾಲಯದ ಅನುಮತಿ ಕೇಳಲಾಗಿದೆ, ಹಳೆಯ ನೋಟುಗಳನ್ನು ಆರ್ ಬಿಐ ನಲ್ಲಿ ಕೊಟ್ಟು ಹೊಸ ನೋಟು ಪಡೆಯಲು ಅವಕಾಶವಿತ್ತು, ಆದರೆ ಪ್ರಕರಣ ವಿಚಾರಣೆಯ ಹಂತದಲ್ಲಿದ್ದ ಕಾರಣ ಸೀಜ್ ಮಾಡಿದ ನೋಟುಗಳನ್ನು ತೆಗೆಯಲು ಸಾಧ್ಯವಾಗಿರಲಿಲ್ಲ, ಇದೀಗ ಆರ್ ಬಿಐ ಕೂಡಾ ನೋಟು ವಾಪಸ್ ಪಡೆಯಲು ನಿರಾಕರಿಸಿದೆ ಎನ್ನಲಾಗಿದೆ,
ಈ ಹಿನ್ನೆಲೆಯಲ್ಲಿ ಪೊಲೀಸರು ಐದು ಕೋಟಿ ಮೌಲ್ಯದ ನೋಟುಗಳನ್ನು ಸುಟ್ಟು ಹಾಕಲು ತೀರ್ಮಾನಿಸಿದ್ದಾರೆ ಹೀಗಾಗಿ ನ್ಯಾಯಾಲಯದ ಅನುಮತಿ ಕೋರಿದ್ದಾರೆ ಎಂದು ತಿಳಿದು ಬಂದಿದೆ

ವರದಿ : ಅಯ್ಯಣ್ಣ ಮಾಸ್ಟರ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!