Ad imageAd image
- Advertisement -  - Advertisement -  - Advertisement - 

೫ ಅಂತಾರಾಜ್ಯ ಕಳ್ಳರ ಸೆರೆ : ೭೭ ಲಕ್ಷ ಚಿನ್ನಾಭರಣ ಜಪ್ತಿ ಕೇಶ್ವಾಪುರ ಭುವನೇಶ್ವರಿ ಜ್ಯುವೆಲರ್ಸ ಕಳುವಿನ ಪ್ರಕರಣ

Bharath Vaibhav
೫ ಅಂತಾರಾಜ್ಯ ಕಳ್ಳರ ಸೆರೆ : ೭೭ ಲಕ್ಷ ಚಿನ್ನಾಭರಣ ಜಪ್ತಿ ಕೇಶ್ವಾಪುರ ಭುವನೇಶ್ವರಿ ಜ್ಯುವೆಲರ್ಸ ಕಳುವಿನ ಪ್ರಕರಣ
WhatsApp Group Join Now
Telegram Group Join Now

ಹುಬ್ಬಳ್ಳಿ: -ಕೇಶ್ವಾಪುರದ ರಮೇಶಭವನದ ಎದುರುಗಡೆಯಿರುವ ಭುವನೇಶ್ವರಿ ಜ್ಯುವಲರ್ಸ್ ಅಂಗಡಿ ಕಳ್ಳತನದಲ್ಲಿ ಒಟ್ಟು ಐವರು ಅಂತರಾಜ್ಯ ಕಳ್ಳರನ್ನು ಬಂಧಿಸಿದ್ದು, ೭೭ ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ ಕಾರು, ಗ್ಯಾಸ್ ಕಟರ್ ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತರಾದ ಎನ್.ಶಶಿಕುಮಾರ್ ಹೇಳಿದರು.ಸುದ್ದಿಗಾರರಿಗೆ ಈ ಕುರಿತು ಮಾಹಿತಿ ನೀಡಿದ ಅವರು, ಕಳ್ಳತನ ಪ್ರಕರಣದಲ್ಲಿ ಮುಂಬೈ ಮೂಲದ ಫರಾನ್ ಶೇಖ್, ಮುಖೇಶ್ ಉರ್ಫ ರಾಜು ಯಾದವ್, ಫಾತಿಮಾ ಶೇಖ್, ಅಪ್ತಾಬ್ ಅಹ್ಮದ್ ಶೇಖ್, ತಲತ್ ಶೇಖ್ ಎಂಬುವರನ್ನು ಬಂಧಿಸಿದ್ದು, ಇನ್ನೂ ಮೂರು ಪ್ರಮುಖ ಆರೋಪಿಗಳ ಪತ್ತೆಗೆ ಪೊಲೀಸರು ಜಾಲ ಬೀಸಿದೆ ಎಂದರು.
ಫರಾನ್ ಮೇಲೆ ಸುಮಾರು ೧೫ ಪ್ರಕರಣಗಳು ಇದ್ದು, ಫಾತಿಮಾ ಶೇಖ್ ಮೇಲೆ ೨ ಪ್ರಕರಣ ಸೇರಿ ಇತರ ಆರೋಪಿಗಳ ಮೇಲೆ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿರುವುದು ತಿಳಿದು ಬಂದಿದೆ.

ಪ್ರಕರಣ ಬೇಧಿಸಲು ಕೇಶ್ವಾಪೂರ ಪೊಲೀಸ್ ಠಾಣೆ, ಗೋಕುಲ್ ರೋಡ್ ಹಾಗೂ ಕಮರಿಪೇಟ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಗಳ ನೇತೃತ್ವದಲ್ಲಿ ಮೂರು ತಂಡ ರಚಿಸಲಾಗಿತ್ತು, ಸುಮಾರು ಸಿಸಿ ಟಿವಿ ಪೂಟೇಜ್, ಆರೋಪಿಗಳ ಚಲನವಲನ ಹಾಗೂ ಮಾಹಿತಿ ಕಲೆ ಹಾಕಿ ೨೦ ದಿನಗಳ ಕಾಲ ಮುಂಬೈ ನಗರದಲ್ಲಿ ಇದ್ದು, ಆರೋಪಿಗಳನ್ನು ಬಂಧಿಸಲಾಗಿದೆ.
೫೫ ಲಕ್ಷ ಮೌಲ್ಯದ ೭೮೦ ಗ್ರಾಂ. ಬಂಗಾರ, ೧೭ ಲಕ್ಷ ಮೌಲ್ಯದ ೨೩.೩ ಕೆಜಿ ಬೆಳ್ಳಿ ಹಾಗೂ ೧೦ ಸಾವಿರ ನಗದು ಮತ್ತು ಕಳ್ಳತನಕ್ಕೆ ಬಳಸಿದ ೫ ಲಕ್ಷ ರೂ ಮೌಲ್ಯದ ಕಾರು ವಶಪಡಿಸಿಕೊಳ್ಳಲಾಗಿದೆ ಎಂದರು.
ಬಂಗಾರದ ಅಂಗಡಿ ಮಾಲೀಕರು ತಮ್ಮ ಅಂಗಡಿಗಳ ಆಭರಣ ಹಾಗೂ ಅಂಗಡಿ ಸುರಕ್ಷೆತೆಗಾಗಿ ಇತ್ತೀಚಿಗೆ ವಿವಿಧ ತಂತ್ರಜ್ಞಾನ ಹಾಗೂ ವಿವಿಧ ಲಾಕರ್ ಗಳು ಬಂದಿದ್ದು, ಅವುಗಳ ಬಳಕೆ ಮಾಡಿಕೊಂಡು ಎಚ್ಚರವಹಿಸಬೇಕು ಎಂದರು.

ಈ ಸಂದರ್ಭದಲ್ಲಿ ಡಿಸಿಪಿಗಳಾದ ಮಹಾನಿಂಗ ನಂದಗಾವಿ, ರವೀಶ್ ಸಿ.ಆರ್, ಎಸಿಪಿಗಳಾದ ಶಿವಪ್ರಕಾಶ್ ನಾಯ್ಕ್, ಚಿಕ್ಕಮಠ, ಕೇಶ್ವಾಪೂರ ಇನ್ಸ್ಪೆಕ್ಟರ್ ಕೆಎಸ್ ಹಟ್ಟಿ, ಗೋಕುಲ್ ಇನ್ಸ್ಪೆಕ್ಟರ್ ಪ್ರವೀಣ್ ನೀಲಮ್ಮಣ್ಣವರ, ಕಮರಿಪೇಟ್ ಇನ್ಸ್ಪೆಕ್ಟರ್ ಮಹಾಂತೇಶ ಹೊಳಿ ಇತರ ಸಿಬ್ಬಂದಿಗಳು ಇದ್ದರು.ಜುಲೈ ತಿಂಗಳಲ್ಲಿ ೧೬೮೦ ಗ್ರಾಂ ಬಂಗಾರ, ೫೧ ಕೆಜಿ ಬೆಳ್ಳಿ, ಕಳ್ಳತನವಾಗಿತ್ತು ಈ ಪ್ರಕರಣದಲ್ಲಿ ಪೊಲೀಸರು ಉತ್ತಮ ಕಾರ್ಯ ಮಾಡಿದ್ದಾರೆ. ಮುಂಬೈ ಸೇರಿದಂತೆ ವಿವಿಧ ಕಡೆ ಐವರನ್ನು ಬಂಧಿಸಿ, ಆಭರಣ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸರ ಕಾರ್ಯಕ್ಕೆ ಅಭಿನಂದನೆಗಳು ಸಲ್ಲಿಸುತ್ತೇನೆ. ನಮಗೆ ತುಂಬಾ ಸಂತೋಷವಾಗಿದೆ ಎಂದು ದೈವಜ್ಞ ,ಜ್ಯುವಲೇರಿ ಅಂಗಡಿ ಮಾಲೀಕರು ಹೇಳಿದರು.

 ವರದಿ:- ಸುಧೀರ್ ಕುಲಕರ್ಣಿ

WhatsApp Group Join Now
Telegram Group Join Now
Share This Article
error: Content is protected !!