ಚಾಮರಾಜನಗರ : ಜಿಲ್ಲಾ ಪೊಲೀಸ್ ವತಿಯಿಂದ ದಿನಾಂಕ: 09-03-2025 ರಂದು ಬೆಳಿಗ್ಗೆ 6-00 ಗಂಟೆಗೆ, “ಕರ್ನಾಟಕ ಪೊಲೀಸ್ ರನ್” ಎಂಬ ಶೀರ್ಷಿಕೆಯಡಿ 5 ಕಿಲೋ ಮೀಟರ್ ಮ್ಯಾರಥಾನ್ ಹಮ್ಮಿಕೊಂಡಿದ್ದು. ಈ ಸಂಬಂಧ ಪೊಲೀಸ್ ಕವಾಯತು ಮೈದಾನದಿಂದ ಪ್ರಾರಂಭ ಮಾಡಿ ರಾಮಸಮುದ್ರ ಅಂಬೇಡ್ಕರ್ ಪ್ರತಿಮೆ ತಲುಪಿ ಅಲ್ಲಿಂದ ಯೂಟರ್ನ್ ಪಡೆದು ಭುನವೇಶ್ವರಿ ವೃತ್ತ ತಲುಪಿ ವಾಪಸ್ ಪೊಲೀಸ್ ಕವಾಯತು ಮೈದಾನದಲ್ಲಿ ಅಂತ್ಯವಾಗಲಿದೆ. ಈ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆಯ ನೌಕರರು. ಇತರೆ ಇಲಾಖೆಗಳ ನೌಕರರು, ಸಂಘಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಹಾಗೂ ಎಲ್ಲರೂ ಮುಕ್ತವಾಗಿ ಭಾಗವಹಿಸಬಹುದಾಗಿರುತ್ತದೆ. ಸದರಿ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲಾರು ಭಾಗವಹಿಸಿ ಯಶಸ್ವಿಗೊಳಿಸ ಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ಬಿ. ಟಿ ಕವಿತಾ ತಿಳಿಸಿದರು.
ವರದಿ : ಸ್ವಾಮಿ ಬಳೇಪೇಟೆ




