ನಿಪ್ಪಾಣಿ : ಆಂಕರಿಂಗ್ =ಹೌದು ಕಾನಡಾವು ವಿಠಲ ಕರನಾಟಕ ಎಂಬ ಗೀತೆಗೆ ಅನ್ವಯಿಸುವಂತೆ ಮೂಲತಃ ಕರ್ನಾಟಕದ ಆರಾಧ್ಯ ದೇವರು ಶ್ರೀ ಕ್ಷೇತ್ರ ಪಂಡರಾಪುರದ ವಿಠಲ.ಸದರಿ ಪಂಡರಾಪುರದ ವಿಠಲನಿಗೆ ಕರ್ನಾಟಕ ಮಹಾರಾಷ್ಟ್ರ ಗೋವಾ ಸೇರಿದಂತೆ ದೇಶದಲ್ಲಿಯ ಲಕ್ಷಾಂತರ ಭಕ್ತರು ಭಕ್ತಿ ಪೂರ್ವಕವಾಗಿ ನಡೆದುಕೊಳ್ಳುತ್ತಾರೆ.

ತಮ್ಮ ಇಷ್ಟಾರ್ಥ ಪೂರೈಸಲು ವಿವಿಧ ರೂಪಗಳಲ್ಲಿ ಹರಕೆ ಹೊತ್ತು ಇಷ್ಟಾರ್ಥ ಪೂರೈಸುತ್ತಾರೆ.ಇಂತಹ ಭಕ್ತರಲ್ಲಿ ಓರ್ವ ಮಹಿಳಾ ಭಕ್ತೆ ಶ್ರೀಮತಿ ಅಲಕಾ ಅಂಕುಶ ಘಾಟಗೆ ವಿಠ್ಠಲ ರುಕ್ಮಿಣಿಯ ಪಾದ ಚರಣಗಳಲ್ಲಿ ಚಿನ್ನದ ತುಳಸಿ ಮಾಲೆಯನ್ನು ಅರ್ಪಿಸಿ ಹರಕೆ ಪೂರೈಸಿದ್ದಾರೆ. ಶುಕ್ರವಾರ ದೇವಸ್ಥಾನ ಸಮಿತಿಯ ಕಡೆಗೆ ಅರ್ಪಿಸಿದ ಚಿನ್ನದ ತುಳಸಿ ಮಾಲೆಯ ತೂಕ 60 ಗ್ರಾಮಗಳಾಗಿದ್ದು ಬರೋಬ್ಬರಿ 5 ಲಕ್ಷ ರೂಪಾಯಿಗಳ ಮೌಲ್ಯವಾಗಿದೆ. ಮಂದಿರ ಸಮಿತಿಯ ಮುಖ್ಯ ಅರ್ಚಕರು ಸದರಿ ಚಿನ್ನದ ತುಳಸಿ ಹಾರವನ್ನು ವಿಠಲನಿಗೆ ಪರಿಧಾನ ಮಾಡಿದ ನಂತರ ದರ್ಶನ ಪಡೆದರು.
ವರದಿ : ಮಹಾವೀರ ಚಿಂಚಣೆ




