Ad imageAd image

ಸನ್ ರೈಜರ್ಸ್ ಗೆ 5 ವಿಕೆಟ್ ಗಳ ಜಯ

Bharath Vaibhav
ಸನ್ ರೈಜರ್ಸ್ ಗೆ 5 ವಿಕೆಟ್ ಗಳ ಜಯ
WhatsApp Group Join Now
Telegram Group Join Now

ಚೆನ್ನೈ: ಸನ್ ರೈಸರ್ಸ್ ಹೈದರಾಬಾದ್ ತಂಡವು ಕಳೆದ ರಾತ್ರಿ ಇಲ್ಲಿ ನಡೆದ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಪಂದ್ಯಾವಳಿಯ 43 ನೇ ಲೀಗ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ  5 ವಿಕೆಟ್ ಗಳ ಸುಲಭ ಗೆಲುವು ಪಡೆಯಿತು.

                         ಅಯುಷ್ ಮಾತ್ರೆ: 17 ನೇ ವಯಸ್ಸಲ್ಲಿ ಪಾದಾರ್ಪಣಾ ಐಪಿಎಲ್ ಪಂದ್ಯ 30 ( 19 ಎಸೆತ, 6 ಬೌಂಡರಿ)

ಇಲ್ಲಿನ ಎಂ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 19.5 ಓವರುಗಳಲ್ಲಿ 154 ರನ್ ಗೆ ಆಲೌಟಾಯಿತು. ನಂತರ ಸುಲಭ ಗೆಲುವಿನ ಗುರಿ ಪಡೆದಿದ್ದ ಸನ್ ರೈಜರ್ಸ್ ಹೈದರಾಬಾದ್ ತಂಡವು 18.4 ಓವರುಗಳಲ್ಲಿ 5 ವಿಕೆಟ್ ಗೆ 155 ರನ್ ಗಳಿಸಿ ಜಯ ಸಾಧಿಸಿತು.

ಈ ಗೆಲುವಿನೊಂದಿಗೆ ಸನ್ ರೈಜರ್ಸ್ ತಂಡವು 9 ಪಂದ್ಯಗಳಿಂದ 3 ರಲ್ಲಿ ಗೆದ್ದು 6 ರಲ್ಲಿ ಸೋತು 6 ಅಂಕಗಳನ್ನು ಗಳಿಸುವ ಮೂಲಕ ಅಂಕ ಪಟ್ಟಿಯಲ್ಲಿ 8 ನೇ ಸ್ಥಾನಕ್ಕೆ ಕೊಂಚ ಭಡ್ತಿ ಹೊಂದಿದೆ. ಆದಾಗ್ಯೂ ಸನ್ ರೈಸರ್ಸ್ ಗೆ ಈಗಲೂ ಮುಂದಿನ ಹಂತ ತಲುಪುವ ಹಾದಿ ತೀರಾ ಕಠಿಣವಾಗಿದೆ.

ಸ್ಕೋರ್ ವಿವರ:

ಚೆನ್ನೈ ಸೂಪರ್ ಕಿಂಗ್ಸ್ 19.5 ಓವರುಗಳಲ್ಲಿ 154

ಬ್ರೇವಿಸ್ 42 (25 ಎಸೆತ, 1 ಬೌಂಡರಿ, 1 ಸಿಕ್ಸರ್) ಅಯುಷ್ ಮಾತ್ರೆ 30 ( 19 ಎಸೆತ, 6 ಬೌಂಡರಿ) ಹರ್ಷಲ್ ಪಟೇಲ್ 28 ಕ್ಕೆ 4)

ಸನ್ ರೈಜರ್ಸ್ ಹೈದರಾಬಾದ್ 18.4 ಓವರುಗಳಲ್ಲಿ 5 ವಿಕೆಟ್ ಗೆ 155

ಇಶಾನ್ ಕಿಶನ್ 44 ( 34 ಎಸೆತ, 5 ಬೌಂಡರಿ, 1 ಸಿಕ್ಸರ್)  ಕಮಿಂಡು ಮೆಂಡಿಸ್ 32 ( 22 ಎಸೆತ, 3 ಬೌಂಡರಿ) ನೂರ್ ಅಹ್ಮದ್ 42 ಕ್ಕೆ 2) ಪಂದ್ಯ ಪುರುಷ: ಹರ್ಷಲ್ ಪಟೇಲ್

WhatsApp Group Join Now
Telegram Group Join Now
Share This Article
error: Content is protected !!