ಮೈಸೂರು : ವಿಶ್ವವಿಖ್ಯಾತ ನಾಡಹಬ್ಬ ದಸರಾ ಯಶಸ್ವಿಯಾಗಿ ಮುಗಿದಿದೆ. ಸಾಂಸ್ಕೃತಿಕ ನಗರಿ ಮೈಸೂರಲ್ಲಿ ನವರಾತ್ರಿ ಆಚರಣೆ ಪ್ರವಾಸೋದ್ಯಮ ಕ್ಷೇತ್ರಕ್ಕೆ ದೊಡ್ಡ ಬೂಸ್ಟರ್ ನೀಡಿದ್ದು, 10 ದಿನಗಳಲ್ಲಿ ಮೈಸೂರಲ್ಲಿ 500 ಕೋಟಿಗೂ ಅಧಿಕ ವಹಿವಾಟು ನಡೆದಿದೆ.
ಪ್ರವಾಸೋದ್ಯಮ ವಲಯಕ್ಕೆ ದಸರಾ ಬಂಪರ್ ಕೊಟ್ಟಿದ್ದು, ಎಲ್ಲೆಡೆ ಭರ್ಜರಿ ವ್ಯಾಪಾರ-ವಹಿವಾಟು ನಡೆದಿದೆ.ಈ ಬಾರಿ 16 ಲಕ್ಷಕ್ಕೂ ಹೆಚ್ಚು ಮಂದಿ ಮೈಸೂರಿಗೆ ಭೇಟಿ ನೀಡಿದ್ದು, 500 ಕೋಟಿಗೂ ಹೆಚ್ಚು ವಹಿವಾಟು ನಡೆದಿರೋಬಹುದು ಎಂದು ಅಂದಾಜಿಸಲಾಗಿದೆ.
ಅ.3ಕ್ಕೆ ಆರಂಭವಾಗಿದ್ದ ದಸರಾ, ಅ.13ಕ್ಕೆ ಭರ್ಜರಿ ವಿಜಯದಶಮಿ ಮೆರವಣಿಗೆ ಮೂಲಕ ಮುಕ್ತಾಯವಾಗಿತ್ತು .ಜಂಬೂಸವಾರಿ ಮೆರವಣಿಗೆಯನ್ನ 8 ಲಕ್ಷ ಜನ ವೀಕ್ಷಣೆ ಮಾಡಿದ್ದರು ಎಂದು ಹೇಳಲಾಗಿತ್ತು.
ಹೋಟೆಲ್ ಉದ್ಯಮಕ್ಕೆ ಅಂದಾಜು 110 ಕೋಟಿ ವ್ಯವಹಾರ ನಡೆದಿದ್ದು, ಮಂಕಾಗಿದ್ದ ಪ್ರವಾಸೋದ್ಯಮಕ್ಕೆ ನಾಡಹಬ್ಬ ದಸರಾ ದೊಡ್ಡ ಬೂಸ್ಟ್ ನೀಡಿದೆ. ದಸರಾ ಹಬ್ಬ ಪ್ರವಾಸೋದ್ಯಮವನ್ನೇ ನಂಬಿ ಬದುಕುವ ಜನರ ಮುಖದಲ್ಲಿ ಮಂದಹಾಸ ಮೂಡಿಸಿದೆ.!