Ad imageAd image

ಗುರುವಾರ ಒಂದೇ ದಿನ ದಾಖಲೆಯ ದಿನ 51.60 ಲಕ್ಷ ಲೀಟರ್ ಹಾಲು ಮಾರಾಟ

Bharath Vaibhav
WhatsApp Group Join Now
Telegram Group Join Now

ಬೆಂಗಳೂರು :ಕೆಎಂಎಫ್ ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಾಣವಾಗಿದ್ದು, ಗುರುವಾರ ಒಂದೇ ದಿನ ದಾಖಲೆಯ ದಿನ 51.60 ಲಕ್ಷ ಲೀಟರ್ ಹಾಲು, 13.56 ಲಕ್ಷ ಲೀಟರ್ ಮೊಸರು ಮಾರಾಟವಾಗಿದೆ.

ಈ ಕುರಿತು ಸಿಎಂ ಸಿದ್ದರಾಮಯ್ಯ ಮಾಹಿತಿ ಹಂಚಿಕೊಂಡಿದ್ದು, ಜ್ಯದಲ್ಲಿ BJP Karnataka ಆಡಳಿತದಲ್ಲಿ ಗುಜರಾತಿನ ಅಮುಲ್ ಜೊತೆಗೆ ಕೆಎಂಎಫ್ ಅನ್ನು ವಿಲೀನಗೊಳಿಸಬೇಕು ಎಂಬ ದುಷ್ಟ ಆಲೋಚನೆಯಿಂದ ಮಾರುಕಟ್ಟೆಯಲ್ಲಿ ನಂದಿನಿ ಹಾಲು, ಮೊಸರು ಹಾಗೂ ಇನ್ನಿತರ ಉತ್ಪನ್ನಗಳಿಗೆ ಕೃತಕ ಅಭಾವ ಸೃಷ್ಟಿಸಿ, ಗ್ರಾಹಕರು ಅಮುಲ್ ಉತ್ಪನ್ನಗಳನ್ನು ಕೊಳ್ಳುವ ಅನಿವಾರ್ಯತೆ ಸೃಷ್ಟಿಸಲಾಗಿತ್ತು.ಈಗ ಸರ್ಕಾರ, ಕಾಲ ಎಲ್ಲವೂ ಬದಲಾಗಿದೆ. ಬೇಡಿಕೆಯಿರುವಷ್ಟು ನಂದಿನಿ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.

ಮೊನ್ನೆ ಗುರುವಾರ ಒಂದೇ ದಿನ 51.60 ಲಕ್ಷ ಲೀಟರ್ ಹಾಲು ಮತ್ತು 13.56 ಲಕ್ಷ ಲೀಟರ್ ಮೊಸರು ಮಾರಾಟ ಮಾಡಿ ಹೊಸ ಇತಿಹಾಸ ಸೃಷ್ಟಿಸಿದ್ದೇವೆ ಎಂದು ಹೇಳಿದ್ದಾರೆ.

ಕರುನಾಡ ರೈತರು ಶ್ರಮದಿಂದ ಕಟ್ಟಿರುವ ಕೆಎಂಎಫ್ ಅನ್ನು ಉಳಿಸಿ, ಬೆಳೆಸುತ್ತೇವೆ ಎಂದು ಹಿಂದೆ ಮಾತುಕೊಟ್ಟಿದ್ದೆವು, ಕೊಟ್ಟ ಮಾತಿನಂತೆ ಇಂದು ನಡೆಯುತ್ತಿದ್ದೇವೆ ಎಂದಿದ್ದಾರೆ.

 

 

WhatsApp Group Join Now
Telegram Group Join Now
Share This Article
error: Content is protected !!