ಐನಾಪುರ: ಪಟ್ಟಣದಲ್ಲಿ ನಾ ಭೂತೋ ನಾ ಭವಿಷ್ಯತ್ ಎಂಬಂತೆ 51 ಸತ್ಯಸಿದ್ದರ ಭೇಟಿ ಕಾರ್ಯಕ್ರಮ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದಲ್ಲಿ ಪ್ರಥಮ ಬಾರಿಗೆ ಈ ಕಾರ್ಯಕ್ರಮ ಜರಗಲಿದೆ. ಐನಾಪುರವು ಭೂಕೈಲಾಸವಾಗುವುದರಲ್ಲಿ ಸಂಶಯವಿಲ್ಲ ಎಂದು ಕವಲಗುಡ್ಡ ಸಿರಿಸಿದ್ದ ಆಶ್ರಮದ ಅಮರೇಶ್ವರ ಮಹಾರಾಜರು ನುಡಿದರು.

ಅವರು ಐನಾಪುರ ಪಟ್ಟಣದ ಶ್ರೀ ಸಿದ್ಧೇಶ್ವರ ಆವರಣದಲ್ಲಿ ಬರುವ ದಿ 9 ರಿಂದ 11ರವರೆಗೆ ನಡೆಯುವ 51 ಸತ್ಯ ಸಿದ್ದರ ಭೆಟ್ಟಿ, ಪೌಳಿ ವಾಸ್ತುಶಾಂತಿ ಹಾಗೂ ಲಕ್ಷದೀಪೋತ್ಸವ ಕಾರ್ಯಕ್ರಮದ ನಿಮಿತ್ಯ ದಿನಾಂಕ 7 ರಂದು ಬೆಳಿಗ್ಗೆ 10:00ಗೆ ಭೂಮಿ ಪೂಜೆ,ಕರಿ ಕಟ್ಟುವ ಕಾರ್ಯಕ್ರಮದಲ್ಲಿ ಕಂಬಳಿಯ ಧ್ವಜವನ್ನು ನೆಟ್ಟು ಪೂಜೆ ಸಲ್ಲಿಸಿ ಮಾತನಾಡುತ್ತಾ, ಐನಾಪುರದ ಕೆರಿ ಸಿದ್ದೇಶ್ವರನ ಬೆಟ್ಟಿಗಾಗಿ ಕರ್ನಾಟಕ ಹಾಗೂ ಮಹಾರಾಷ್ಟ್ರದ 51 ಸತ್ಯಸಿದ್ದರು ಹಂಬಲಿಸಿ ಬರುತ್ತಿದ್ದಾರೆ ಇವರ ಕೂಡುವಿಕೆ ಒಂದು ಅಪೂರ್ವ ಸಂದರ್ಭ ವಾಗಿದ್ದು, ಇಂತಹ ಪವಿತ್ರ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರು ಭಾಗವಹಿಸಿ ತಮ್ಮ ಹರಕೆ ತೀರಿಸಿ ಕೃತಾರ್ಥ ರಾಗಬೇಕು ಈ ಪವಿತ್ರ ಅವಕಾಶ ಯಾವತ್ತೂ ಬರಲಾರದು ಎಂದು ಹೇಳಿದರು.
ಬೆಳಿಗ್ಗೆ 9:00ಗೆ ಕೆರಿಸಿದ್ದೇಶ್ವರ ದೇವಸ್ಥಾನದಿಂದ ಸಹಸ್ರಾರು ಮುತ್ತೈದೆಯರು ಭಾರತೀಯ ಹಾಗೂ ಅಂಬಲಿ ಕೊಡಗಳನ್ನು ತೆಗೆದುಕೊಂಡು ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಸಕಲ ಮಂಗಳವಾದ್ಯಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮುಖಾಂತರ ಶ್ರೀ ಸಿದ್ದೇಶ್ವರ ಬನ್ನಿ ಮಂಟಪದ ಹತ್ತಿರ ವಿಶಾಲವಾದ ಪ್ರಾಂಗಣದಲ್ಲಿ ವಿಶೇಷವಾಗಿ ಭೂಮಿ ಪೂಜೆ ಸಲ್ಲಿಸಿ ಕರಿ ಕಂಬಳಿಯ ಧ್ವಜವನ್ನು ನೆಟ್ಟು ಆರತಿ ಬೆಳಗಿದರು.
ಈ ಸಂದರ್ಭದಲ್ಲಿ ಹತ್ತೂರಿನ ಬನಸಿದ್ದ ಮಹಾರಾಜರು, ಭತ್ತ ಕುಣಿಕಿ ಮಹಾರಾಜರು,ಕೆರಿ ಸಿದ್ದೇಶ್ವರ ದೇವಸ್ಥಾನದ ಧರ್ಮಾಧಿಕಾರಿಗಳಾದ ರಾಜುಗೌಡ ಪಾಟೀಲ್,ಸುಭಾಷ್ ಪಾಟೀಲ್, ಅರುಣ ಗಾಣಿಗೇರ, ಹರ್ಷವರ್ಧನ್ ಪಾಟೀಲ ಚಮನ ರಾವ ಪಾಟೀಲ, ದಾದಾ ಜಂತೆನ್ನವರ, ಕುಮಾರ, ಅಪರಾಜ, ಪ್ರಕಾಶ ಕೊರಬು, ಅಣಾಸಾಬ ಡೂಗನವರ, ಸೇರಿದಂತೆ ನೂರಾರು ಜನರು ಮೈದಾನ ಪೂಜೆಯಲ್ಲಿ ಭಾಗವಹಿಸಿದ್ದರು.
ವರದಿ: ಮುರಗೇಶ. ಗಸ್ತಿ




