Ad imageAd image

ನಾಡಪ್ರಭು ಕೆಂಪೇಗೌಡರ 515ನೆಯ ಜನ್ಮ ದಿನಾಚರಣೆಯ ಕಾರ್ಯಕ್ರಮ

Bharath Vaibhav
ನಾಡಪ್ರಭು ಕೆಂಪೇಗೌಡರ 515ನೆಯ ಜನ್ಮ ದಿನಾಚರಣೆಯ ಕಾರ್ಯಕ್ರಮ
WhatsApp Group Join Now
Telegram Group Join Now

ರಾಮದುರ್ಗ :- ಪುರಸಭೆ ಸಂಸ್ಕೃತಿ ಕಲ್ಯಾಣ ಮಂಟಪದಲ್ಲಿ ನಾಡಪ್ರಭು ಶ್ರೀ ಕೆಂಪೇಗೌಡರ 515ನೆಯ ಜನ್ಮ ದಿನಾಚರಣೆಯ ಕಾರ್ಯಕ್ರಮವನ್ನು ಅತೀ ವಿಜ್ರಂಭಣೆಯಿಂದ ಆಚರಿಸಲಾಯಿತು.ರಾಮದುರ್ಗ ತಾಲೂಕ ಪಂಚಾಯತಿಯಲ್ಲಿ ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ತಹಸೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಪೂಜೆ ಸಲ್ಲಿಸುವುದರ ಮೂಲಕ ಚಾಲನೆ ನೀಡಿದರು.

ನಂತರ ಶಾಲಾ ಮಕ್ಕಳದೊಂದಿಗೆ  ಕೆಂಪೇಗೌಡರ ವೇಷ ಧರಸಿದರು ಟ್ಯಾಕ್ಟರ್ ಮೇಲೆ ಕೆಂಪೇಗೌಡರ ಭಾವಚಿತ್ರ ಹಾಕಿಕೊಂಡು ಮೆರವಣಿಗೆ ಹುತಾತ್ಮ ವೃತ್ಯಯಿಂದ ಡಾ. ಅಂಬೇಡ್ಕರ ರೋಡ ಮಾರ್ಗವಾಗಿ ಮಕ್ಕಳ ಪ್ರಭಾತ್ ಸೇರಿ ಕಾರ್ಯಕ್ರಮ ಆರಂಭಿಸಲಾಯಿತು ನಂತರ ಉದ್ಘಾಟನಾ ಸಮಾರಂಭ ಪುರಸಭೆ ಕಲ್ಯಾಣ ಮಂಟಪದಲ್ಲಿ ನಡೆಯಿತು.

ಈ ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ಪ್ರಕಾಶ್ ಹೊಳೆಪ್ಪಗೋಳ ತಾಲೂಕ ದಂಡಾಧಿಕಾರಿಗಳು ಹಾಗೂ ತಹಶೀಲ್ದಾರ ರಾಮದುರ್ಗ ಇವರು ವಹಿಸಿಕೊಂಡಿದ್ದರು ಮುಖ್ಯ ಅತಿಥಿಗಳಾಗಿ ಆರ್ ಟಿ ಬಳಿಗಾರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಪುರಸಭೆ ಮುಖ್ಯಧಿಕಾರಿ I K ಗುಡದಾರ್ ಹಾಗೂ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ಅತಿಥಿ ಸ್ಥಾನಗಳನ್ನು ವಹಿಸಿದ್ದರು ಕಾರ್ಯಕ್ರಮದ ನಿಮಿತ್ತವಾಗಿ ರಸಪ್ರಶ್ನೆ ಪ್ರಬಂಧ ವೇಶಭೂಷಣ ಚಿತ್ರಕಲೆ ಮುಂತಾದ ಕಾರ್ಯಕ್ರಮನ ಪ್ರತಿ ಶಾಲಾ ಹಂತದಲ್ಲಿ ನೆರವೇರಿಸಿ ಪ್ರಥಮ ಬಂದ ವಿದ್ಯಾರ್ಥಿಗಳನ್ನು ತಾಲೂಕ ಮಟ್ಟದಲ್ಲಿ ಸ್ಪರ್ಧೆ ಏರ್ಪಡಿಸಿ ಪ್ರಥಮ ದ್ವಿತೀಯ ತೃತೀಯ ಬಹುಮಾನವನ್ನು ಕ್ರಮವಾಗಿ 1500 ರೂಪಾಯಿ ಒಂದು ಸಾವಿರ ಹಾಗೂ ಐನೂರು ರೂಪಾಯಿಗಳ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಯಿತು.

ತಾಲೂಕ ಮಟ್ಟದಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೂ ಸಮಾಧಾನಕರ ಬಹುಮಾನವನ್ನು ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಯಿತು. ಇದೇ ಸಂದರ್ಭದಲ್ಲಿ 2023 24ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಹಾಗೂ ಪಿಯುಸಿ ವಿದ್ಯಾರ್ಥಿಗಳು ತಾಲೂಕ ಮಟ್ಟದಲ್ಲಿ ಪ್ರಥಮ ದ್ವಿತೀಯ ತೃತಿಯ ರಾಂಕ್ ಪಡೆದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಹಾಗೂ ಪ್ರಾಥಮಿಕ ಶಾಲೆಯ ಸರ್ವ ಶಿಕ್ಷಕ ಬಳಗ ಹಾಗೂ ಪತ್ರಿಕಾ ಮಾಧ್ಯಮದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಕಾರ್ಯಕ್ರಮದ ನಿರೂಪಣೆಯನ್ನು ಆನಂದತೀರ್ಥ ಜೋಶಿ ಶಿಕ್ಷಣ ಸಂಯೋಜಕರು ರಾಮದುರ್ಗ ರವರು ನಿರ್ವಹಿಸಿದರು ಶಿಕ್ಷಕರಾದ ಸಿ ಎನ್ ಕಲ್ಲೂರ ಸ್ವಾಗತಿಸಿದರು ಸಿಆರ್ಪಿ ಬಿ ಯು ಬೈರಕದಾರ, ಬಿ ಆರ್ ಪಿ ಕೆ ವೈ ಪಾಟೀಲ್ ಜಗದೀಶ ಲಮಾಣಿ ಉಪಸ್ಥಿತರಿದ್ದರು.

ವರದಿ:- ಮಂಜುನಾಥ ಕಲಾದಗಿ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!