ಚನ್ವಮ್ಮನ ಕಿತ್ತೂರು : ಕಿತ್ತೂರು ರಾಣಿ ಚನ್ನಮ್ಮ ಬಾಲಕಿಯರ ವಸತಿ ಸೈನಿಕ ಶಾಲೆಯ 53 ನೇ ವಾರ್ಷಿಕ ದಿನಾಚರಣೆ ಜರುಗಿತು. ಬೆಳ್ಳಗೆ ಶಾಲಾ ವಿದ್ಯಾರ್ಥಿನಿಯರಿಂದ ಪಥ ಸಂಚಲನ ನಡೆಯಿತು. ನಂತರ ಬೆಳಗಾವಿ ಜಿಲ್ಲಾಧಿಕಾರಿಗಳಾದ ಮಹ್ಮದ್ ರೋಷನ್ ಬೇಗ್ ಅವರು ಮಾತನಾಡಿ ಜಿಲ್ಲಾಧಿಕಾರಿಯಾದ ಮೊಹಮದ್ ರೋಷನ್ ಅವರು ಕಾರ್ಯಕ್ರಮದ ಕುರಿತು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು, ವಿದ್ಯಾರ್ಥಿಗಳು ನಡಿಸಿಕೊಟ್ಟಂತಹ ಪರೇಡ್, ವಸತಿ ಶಾಲೆಯ ವಿದ್ಯಾರ್ಥಿನಿಯರ ಶಿಸ್ತನ್ನು ಕೊಂಡಾಡಿದರು ಈ ಸಂದರ್ಭದಲ್ಲಿ ಶಾಲೆಯ ಸುವ್ಯವಸ್ಥೆ ಕಂಡು ತಮ್ಮ ಬಾಲ್ಯದ ಶಾಲಾ ದಿನಗಳನ್ನು ನೆನಪುಮಾಡಿಕೊಂಡರು.
ಮೂಲತಃ ಅವರು ಹೈದ್ರಾಬಾದ್ದವಾರಗಿದ್ದು ಮಾತಿನ ನಡುವೆ ಹಾದ್ರಾಬಾದ್ ಬಿರಿಯಾನಿ, ಬೆಳಗಾವಿ ಕುಂದಾ, ಮೈಸೂರಿನ ಮೈಸೂರಪಾಕ್ ಹೀಗೆ ವಿಭಿನ್ನ ಪ್ರದೇಶಗಳು ಅಲ್ಲಿನ ಸಂಸ್ಕೃತಿ, ಆಚಾರಣೆ, ಅಭಿರುಚಿಗಳ ಬಗ್ಗೆ ಹೇಳಿದರು. ಅದಲ್ಲದೆ ಅವರ ಮನೆಯಲ್ಲಿ ತಾವು 4ನೇ ತಲೆಮಾರಿನ ಅಧಿಕಾರಿಯಾಗಿದ್ದಾರೆಂಬುದು ಸ್ವಾರಾಸ್ಯಕರ ಸಂಗತಿಯಾಗಿತ್ತು, ವಿದ್ಯಾರ್ಥಿನಿಯರಿಗೆ ಶಿಸ್ತು, ಸಮಯ ಪ್ರಜ್ಞೆಯ ಬಗ್ಗೆ ಕಿವಿ ಮಾತು ಹೇಳಿದರು, ಸಾದಿಸುವ ಗುರಿ ಹೇಗಿರಬೇಕು ಅದಕ್ಕೆ ಬೇಕಾದ ತಯಾರಿ, ಪರಿಶ್ರಮದ ಬಗ್ಗೆಯೂ ಸಹ ಮಾಹಿತಿ ನೀಡಿದರು, ಮಾತಿನ ನಡುವೆ ಅವರು ಹೇಳಿದ ಶಾಯರಿ ಎಲ್ಲರ ಗಮನಸೆಳೆಯಿತು..
ಬೆಳಗಾವಿ ಜಿಲ್ಲಾಧಿಕಾರಿಗಳಾದ ಮಹ್ಮದ್ ರೋಷನ್ ಬೇಗ್, ಅಂಕಿತಾ ವರ್ಮಾ ಐ ಆರ್ ಟಿ ಎಸ್, ಎ ಕೆ ಕೊಟ್ರಶೆಟ್ಟಿ ಮಾಜಿ ಸಂಸದರು ಕಿ.ರಾ. ಚ.ಸ್ಮಾ.ಸ. ಕಿತ್ತೂರು, ಮಹಾಂತೇಶ ಕೌಜಲಗಿ ಶಾಸಕರು. ಸದಸ್ಯರು ಕಾರ್ಯದರ್ಶಿಗಳು.ಕಿ. ರಾ.ಚ.ಸ್ಮಾ ಸ. ಚ. ಕಿತ್ತೂರು, ಕರ್ನಲ್ ಆರ್ ಎಸ್ ಜತ್ರಿ( ನಿವೃತ್ತ) ಪ್ರಾಚಾರ್ಯರು ಕಿ.ರಾ.ಚ. ಬಾ.ಸೈ.ವಸತಿ.ಶಾಲೆ. ಕಿತ್ತೂರು, ಡಾ. ವಿರೇಂದ್ರ ವ್ಹಿ ತೆಗ್ಗಿಮನಿ ಚೇರಮನ್ ರು. ಕಿ. ರಾ.ಚ.ಸ್ಮಾ.ಸ.ಚ.ಕಿತ್ತೂರ, ಡಾ ಅರುಣಾ ಕೆ. ಅಕ್ಕಿ. ಕಿ.ರಾ.ಚ.ಸ್ಮಾ. ಸ.ಚ ಕಿತ್ತೂರು, ಕೆಡೆಟ್ ಸ್ಕೊಲ್ ಕ್ಯಾಪ್ಟನ್ ಸಂಜನಾ ಎಸ್. ಕೆ. ಉಪಸ್ಥಿತರಿದ್ದರು.
ವರದಿ : ಜಗದೀಶ ಕಡೋಲಿ